ಸೋನಾಲ್ ಚೌಹಾನ್ - ಅಥಿಯಾ ಶೆಟ್ಟಿ: ಕೆ.ಎಲ್ ರಾಹುಲ್ ಗರ್ಲ್‌ಫ್ರೆಂಡ್ಸ್‌

Suvarna News   | Asianet News
Published : Oct 10, 2020, 07:44 PM IST

ಈ ಸೀಸನ್‌ನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ captain ಕರ್ನಾಟಕದ ಕೆಎಲ್ ರಾಹುಲ್ ಸಖತ್‌ ಫೇಮಸ್.‌ ಭಾರತ ತಂಡದಲ್ಲೂ ಜಾಗ ಪಡೆದಿರುವ ರಾಹುಲ್‌ ಪ್ರತಿಭಾನ್ವಿತ‌ ಬ್ಯಾಟ್ಸ್‌ಮ್ಯಾನ್‌ ಕಮ್‌ ವಿಕೆಟ್‌ ಕೀಪರ್ . ಇವರ ಪರ್ಸನಲ್‌ ಲೈಫ್‌ ಸಹ ಆಟದಂತೆ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ಈ ಕ್ರಿಕೆಟಿಗ, ಇದಕ್ಕೂ ಮೊದಲು ಬೇರೆ ಬಾಲಿವುಡ್‌ ನಟಿಯೊರೊಂದಿಗೆ ಕೇಳಿ ಬಂದಿದೆ. ಯಾರು ಕೆ. ಎಲ್‌. ರಾಹುಲ್‌ರ ಎಕ್ಸ್‌ಗರ್ಲ್‌ಫ್ರೆಂಡ್ಸ್‌?   

PREV
18
ಸೋನಾಲ್ ಚೌಹಾನ್ - ಅಥಿಯಾ ಶೆಟ್ಟಿ: ಕೆ.ಎಲ್ ರಾಹುಲ್  ಗರ್ಲ್‌ಫ್ರೆಂಡ್ಸ್‌

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕರ್ನಾಟಕದ  ಕೆ.ಎಲ್. ರಾಹುಲ್ ಫಿಲ್ದ್‌ನಲ್ಲಿನ ತಮ್ಮ ಉತ್ತಮ ಪ್ರದರ್ಶನದಿಂದಾಗಿ ಭಾರತೀಯ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಐಪಿಎಲ್‌ ನಲ್ಲಿ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ಯಾಪ್ಟನ್‌.

28

ಇವರ ವೈಯಕ್ತಿಕ ಜೀವನ  ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಅಥಿಯಾ ಶೆಟ್ಟಿ ಜೊತೆಯ ಅವರ ರೂಮರ್ಡ್‌ ರಿಲೆಷನ್‌ಶಿಪ್‌ ಎಲ್ಲರ ಗಮನಕ್ಕೆ ಬಂದಿದೆ. ಇದಕ್ಕೂ ಮೊದಲು ಹಲವಾರು ಬಾಲಿವುಡ್ ನಟಿಯರೊಂದಿಗೆ ರಾಹುಲ್‌ ರಿಲೆಷನ್‌ಶಿಪ್‌ನಲ್ಲಿದ್ದರು ಎಂದು ಹೇಳಲಾಗುತ್ತದೆ.

38

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ಈತನ ಹೆಸರು ಇದಕ್ಕೂ ಮೊದಲು ಬಾಲಿವುಡ್‌‌ನ ಬೇರೆ ಬೇರೆ ನಟಿಯೊರೊಂದಿಗೂ ಕೇಳಿ ಬಂದಿತ್ತು. 

48

ನಿಧಿ ಅಗರ್ವಾಲ್: 
ಮುಂಬೈ ಕೆಫೆಯೊಂದರಲ್ಲಿ ಅಭಿಮಾನಿಯೊಬ್ಬರು ಇವರಿಬ್ಬರ ಫೋಟೋವನ್ನು  ಪೋಸ್ಟ್ ಮಾಡಿದ ನಂತರ, ರಾಹುಲ್ ಜೊತೆ ಇವರ ಹೆಸರು  ಕೇಳಿ ಬರಲು ಪ್ರಾರಂಭವಾಯಿತು. ಆದರೆ ಇಬ್ಬರೂ ತಮ್ಮ ಕಾಲೇಜು ದಿನಗಳಿಂದಲೂ ಫ್ರೆಂಡ್ಸ್‌ ಆಗಿದ್ದವರು  ಮತ್ತು ಅವರ ನಡುವೆ ಏನು ಇಲ್ಲ ಎಂದು ನಿಧಿ ಸ್ಪಷ್ಟಪಡಿಸಿದರು. 'ಒಬ್ಬ ಹುಡುಗ ಮತ್ತು ಹುಡುಗಿ ಸ್ನೇಹಿತರಾಗಲು ಸಾಧ್ಯವಿಲ್ಲವೇ? ಅದು ತುಂಬಾ ಕಷ್ಟವೇ?' ಎಂದು ಕೇಳುವ ಮೂಲಕ ನಿಧಿಯೊಂದಿಗನ ಸಂಬಂಧದ ಬಗ್ಗೆ ರಾಹುಲ್ ಸ್ಪಷ್ಟಪಡಿಸಿದರು.

58

ಸೋನಮ್ ಬಜ್ವಾ:  
ಬಾಲಿವುಡ್‌ನಲ್ಲಿ ಇನ್ನೂ ತನ್ನ ಛಾಪು ಮೂಡಿಸದಿದ್ದರೂ, ಸೋನಮ್ ಪಂಜಾಬಿ ಸಿನಮಾಗಳಲ್ಲಿ ಟಾಪ್‌ ನಟಿಯರಲ್ಲಿ ಒಬ್ಬರು. 'ಸನ್‌ಸೆಟ್‌ ನೋಡುವುದು ಮತ್ತು ನಿನ್ನ ಬಗ್ಗೆ ಯೋಚಿಸುವುದು,' ಎಂದು ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ರಾಹುಲ್‌ ಮಾಡಿದ ಕಾಮೆಂಟ್‌ನಿಂದಾಗಿ ಇವರ ಸಂಬಂಧದ ವದಂತಿ ಪ್ರಾರಂಭವಾಯಿತು. ಅದೇನೇ ಇದ್ದರೂ, ಈ ಕಪಲ್‌ ಯಾವುದನ್ನು ಕನ್ಫರ್ಮ್‌ ಮಾಡಲಿಲ್ಲ. ನಂತರ ಹಾಗೇ ರೂಮರ್‌ ಸಹ ಮರೆಯಾಯಿತು.

68

ಆಕಾಂಕ್ಷಾ ರಂಜನ್ ಕಪೂರ್: 
ಸಿನಿಮಾದಲ್ಲಿ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಟಿಯರಲ್ಲಿ ಒಬ್ಬರು ಆಕಾಂಕ್ಷಾ. ಈಕೆ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್‌ ಫೋಟೋ ಶೇರ್‌  'I’m so good with that' ಎಂದು ಕ್ಯಾಪ್ಷನ್‌ ನೀಡಿದ್ದರು . ನಟಿಯ ಈ ಪೋಸ್ಟ್‌ನಿಂದ ಸ್ವಾಭಾವಿಕವಾಗಿ, ಊಹಾಪೋಹಗಳು ಹುಟ್ಟಿಕೊಂಡವು. ಆದರೆ ರಾಹುಲ್  'ತಮ್ಮ ಪ್ರೀತಿ ಜೀವನದ ಬಗ್ಗೆ ಯೋಚಿಸುತ್ತಿಲ್ಲ ಮತ್ತು ಬದಲಿಗೆ ಟೀಮ್ ಇಂಡಿಯಾದೊಂದಿಗೆ ತಮ್ಮ ಕ್ರಿಕೆಟಿಂಗ್ ಕೆರಿಯರ್‌ ನಿರ್ಮಿಸುವತ್ತ ಗಮನ ಹರಿಸುತ್ತಿದ್ದೇನೆ' ಎಂದು ಹೇಳಿದರು. 

78

ಸೋನಾಲ್ ಚೌಹಾನ್: 
2008 ರಲ್ಲಿ ಜನ್ನತ್ ಚಿತ್ರದಲ್ಲಿ  ಪಾದಾರ್ಪಣೆ ಮಾಡಿದ ನಟಿ ಸೋನಾಲ್.  2018 ರಲ್ಲಿ ಭಾರತದ ಇಂಗ್ಲೆಂಡ್ ಟೂರ್‌ ಸಮಯದಲ್ಲಿ, ರಾಹುಲ್  ತಂಡದಲ್ಲಿ  ಕಾಲಿಡಲು ಹೆಣಗಾಡುತ್ತಿದ್ದ ಸಮಯದಲ್ಲಿ ಸೋನಾಲ್‌ ರಾಹುಲ್‌ರನ್ನು ಹೊಗಳಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.  ತಕ್ಷಣ, ನೆಟ್ಟಿಗರು ಇವರ ಸಂಬಂಧ ಬಗ್ಗೆ  ಮಾತನಾಡಲು ಪ್ರಾರಂಭಿಸಿದರು.
  
88

ಅಥಿಯಾ ಶೆಟ್ಟಿ: 
ಪ್ರಸ್ತುತ ಇಬ್ಬರೂ  ಡೇಟಿಂಗ್‌ ಮಾಡುತ್ತಿರುವ ಸುದ್ದಿ ಈಗ ರಹಸ್ಯವಾಗಿಲ್ಲ. ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಪುತ್ರಿ ಬಾಲಿವುಡ್‌ನಲ್ಲಿ ಇನ್ನೂ ಛಾಪು ಮೂಡಿಸುವ ಮೊದಲೇ ಫೇಮಸ್‌ ಆಗಿದ್ದಾರೆ. ರಾಹುಲ್ ಜೊತೆ ಒಡನಾಟದಿಂದಾಗಿ ಬೆಳಕಿಗೆ ಬಂದಿದ್ದಾರೆ ಅಥಿಯಾ.  ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಂದೆ ಸುನಿಲ್  ಹೇಳಿದ್ದಾರೆ ಆದರೆ ಈ ಕಪಲ್‌ ಅಧಿಕೃತವಾಗಿ ಇನ್ನೂ ಇದರ ಬಗ್ಗೆ ಹೇಳಿಕೊಂಡಿಲ್ಲ. 

click me!

Recommended Stories