IPL 2020 ಟ್ರೋಫಿ ಗೆಲ್ಲುವ ತಂಡ ಯಾವುದು? ಭವಿಷ್ಯ ನುಡಿದ ಗವಾಸ್ಕರ್!

Suvarna News   | Asianet News
Published : Sep 17, 2020, 02:45 PM IST

2020ರ ಐಪಿಎಲ್ ಟ್ರೋಫಿ ಗೆಲ್ಲಲು 8 ತಂಡ ಕಠಿಣ ಅಭ್ಯಾಸ ಮಾಡುತ್ತಿದೆ. ಕೊರೋನಾ ವೈರಸ್ ಕಾರಣ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜನೆಯಾಗಿದೆ. ಹೀಗಾಗಿ ದುಬೈ ಪಿಚ್‌ನಲ್ಲಿ ಪ್ರಸಕ್ತ ವರ್ಷದ ಐಪಿಎಲ್ ಟ್ರೋಫಿ ಗೆಲ್ಲುವ ತಂಡ ಯಾವುದು ಅನ್ನೋ ಚರ್ಚೆ ಆರಂಭಗೊಂಡಿದೆ. ಇದೀಗ ಮಾಜಿ ನಾಯಕ, ಐಪಿಎಲ್ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು ಎಂದು ಭವಿಷ್ಯ ನುಡಿದಿದ್ದಾರೆ.

PREV
18
IPL 2020 ಟ್ರೋಫಿ ಗೆಲ್ಲುವ ತಂಡ ಯಾವುದು? ಭವಿಷ್ಯ ನುಡಿದ ಗವಾಸ್ಕರ್!

ಕೊರೋನಾ ವೈರಸ್ ಕಾರಣ ಭಾರತದಿಂದ ದುಬೈಗೆ ಶಿಫ್ಟ್ ಆಗಿರುವ ಐಪಿಎಲ್ 2020 ಟೂರ್ನಿ ಹಲವು ಕುತೂಹಲಗಳ ಆಗರವಾಗಿದೆ. ದುಬೈ ಪಿಚ್‌ನಲ್ಲಿ ಪ್ರಾಬಲ್ಯ ಸಾಧಿಸುವ ತಂಡ ಯಾವುದು ಅನ್ನೋ ಕುತೂಹಲ ಮನೆ ಮಾಡಿದೆ.

28

ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ 2020ರ ಐಪಿಎಲ್ ಟ್ರೋಫಿ ಗೆಲ್ಲುವ ತಂಡ ಯಾವುದು ಎಂದು ಭವಿಷ್ಯ ನುಡಿದಿದ್ದಾರೆ. ಗವಾಸ್ಕರ್ ಪ್ರಕಾರ ಈ ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಗೆಲ್ಲಲಿದೆ.

38

ಮುಂಬೈ 5ನೇ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಅದೆಷ್ಟೆ ಕಠಿಣ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದ ಮುಂಬೈ ಇಂಡಿಯನ್ಸ್ ಈ ಬಾರಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

48

2020ರ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ಹಾದಿಗೆ ಅಡ್ಡಿಯಾಗಲು ಇತರ ತಂಡಗಳಿಗೆ ಕಷ್ಟ ಎಂದು ಗವಾಸ್ಕರ್ ಹೇಳಿದ್ದಾರೆ.

58

ಮುಂಬೈ ತಂಡಕ್ಕೆ ಗೆಲುವಿನ ಅನುಭವ ಇದೆ. ಸತತ ಸೋಲಿನಿಂದ ಹೊರಬಂದು ಟ್ರೋಫಿ ಗೆದ್ದಿದ್ದಾರೆ. ಜೊತೆಗೆ 2019ರ ಹರಾಜಿನಲ್ಲಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿದೆ. ಇವಲ್ಲ ಸಹಕಾರಿಯಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

68

ಇತರ ತಂಡದಲ್ಲಿರುವಂತೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅನುಭವ ಸ್ಪಿನ್ನರ್ ಕೊರತೆ ಇದೆ ಎಂದು ಗವಾಸ್ಕರ್ ಹೇಳಿದ್ದಾರೆ. ಆದರೆ ಮುಂಬೈ ಗೆಲುವಿಗೆ ಸಮಸ್ಯೆ ಇಲ್ಲ ಎಂದಿದ್ದಾರೆ.

78

ಸೆಪ್ಟೆಂಬರ್ 19 ರಿಂದು ದುಬೈನಲ್ಲಿ ಐಪಿಎಲ್ 2020 ಟೂರ್ನಿ ಆರಂಭಗೊಳ್ಳುತ್ತಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.

88

ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸಲಿದೆ. ಅಭುದಾಬಿಯ ಶೇಕ್ ಝಾಯೆದ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

click me!

Recommended Stories