IPL 2020: RCB ನಾಯಕ ಕೊಹ್ಲಿ ಹೇಳಿದ್ರೆ ಬೌಲಿಂಗ್ ಮಾಡಲು ರೆಡಿ ಎಂದ ಎಬಿಡಿ..!

First Published | Sep 16, 2020, 2:14 PM IST

ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲಾ ತಂಡಗಳು ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಹರಿಸಲಾರಂಭಿಸಿವೆ. ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗುತ್ತ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುರುಪಿನೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗೆ ಸಜ್ಜಾಗಿದೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೂರು ಸ್ಟೇಡಿಯಂಗಳಾದ ಶಾರ್ಜಾ, ಅಬುಧಾಬಿ ಹಾಗೂ ದುಬೈ ಹೊಡಿಬಡಿಯಾಟಕ್ಕೆ ಆತಿಥ್ಯ ವಹಿಸಲಿದೆ. ತಂಡದ ಗೆಲುವಿಗೆ ಯಾವುದೇ ಪಾತ್ರ ನಿಭಾಯಿಸಲು ತಾವು ರೆಡಿ ಎನ್ನುವ ಸ್ಪಷ್ಟ ಸಂದೇಶವನ್ನು ಆರ್‌ಸಿಬಿ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ರವಾನಿಸಿದ್ದಾರೆ.

ಈ ಬಾರಿ ಚೊಚ್ಚಲ ಐಪಿಎಲ್ ಕಪ್ ಎತ್ತಿ ಹಿಡಿಯುವ ಕನವರಿಕೆಯಲ್ಲಿದೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
undefined
ಐಪಿಎಲ್‌ ಇತಿಹಾಸದಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆಲ್ಲಲು ಮಾತ್ರ ಆರ್‌ಸಿಬಿ ತಂಡಕ್ಕೆ ಸಾಧ್ಯವಾಗಿಲ್ಲ.
undefined

Latest Videos


ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ತಂಡದ ಗೆಲುವಿಗಾಗಿ ಯಾವುದೇ ಪಾತ್ರ ನಿಭಾಯಿಸಲು ಸಿದ್ದ ಎಂದಿದ್ದಾರೆ.
undefined
ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್‌ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಎಬಿಡಿ ಈ ಸಲ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
undefined
ಇದೀಗ ನಾಯಕ ವಿರಾಟ್ ಕೊಹ್ಲಿ ಹೇಳಿದರೆ ತಾವು ಬೌಲಿಂಗ್ ಮಾಡಲು ರೆಡಿ ಎಂದು ಎಬಿಡಿ ತಿಳಿಸಿದ್ದಾರೆ.
undefined
ನಾನು ವಿರಾಟ್ ಕೊಹ್ಲಿಯ ಜತೆ ಯಾವಾಗಲೂ ತಮಾಷೆ ಮಾಡುತ್ತಲೇ ಇರುತ್ತೇನೆ. ನಾನು ಎರಡು ದಿನಗಳ ಹಿಂದಷ್ಟೇ ಕೊಹ್ಲಿ ಬಳಿ ಅಗತ್ಯವಿದ್ದರೆ ತಾವು ಬೌಲಿಂಗ್ ಮಾಡಲು ಸಿದ್ಧ ಎಂದು ತಿಳಿಸಿದ್ದೇನೆ ಎಂದಿದ್ದಾರೆ.
undefined
ನೀವು ಬೌಲಿಂಗ್ ಮಾಡಲು ತಿಳಿಸಿದರೆ ಅದಕ್ಕೂ ನಾನು ಸಿದ್ಧ. ನಾನು ಅಷ್ಟೇನು ಒಳ್ಳೆಯ ಬೌಲರ್ ಅಲ್ಲ. ಆದರೆ ಹೊಸತನ್ನು ಪ್ರಯೋಗ ಮಾಡಲು ತಾವು ಯಾವಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 21ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.
undefined
click me!