ಪ್ಲೇ ಆಫ್ ಸ್ಥಾನಕ್ಕೇರುವ 4 ತಂಡ ಯಾವುದು? ಭವಿಷ್ಯ ನುಡಿದ ಶೇನ್ ವಾರ್ನ್!

Published : Sep 30, 2020, 08:34 PM IST

ಐಪಿಎಲ್ 2020 ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಿದೆ. ಪ್ರತಿ ಪಂದ್ಯಗಳು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದೆ. ಈಗಲೇ ಯಾವ ತಂಡ ಟ್ರೋಫಿ ಗೆಲ್ಲಲಿದೆ? ಯಾವ ತಂಡಗಳು ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಡಲಿದೆ ಅನ್ನೋ ಲೆಕ್ಕಾಚಾರ ಆರಂಭಗೊಂಡಿದೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಮೆಂಟರ್ ಶೇನ್ ವಾರ್ನ್ ಈ ಬಾರಿ ಪ್ಲೇ ಆಫ್ ಸ್ಥಾನಕ್ಕೇರುವ 4 ತಂಡಗಳನ್ನು ಹೆಸರಿಸಿದ್ದಾರೆ.  

PREV
18
ಪ್ಲೇ ಆಫ್ ಸ್ಥಾನಕ್ಕೇರುವ 4 ತಂಡ ಯಾವುದು? ಭವಿಷ್ಯ ನುಡಿದ ಶೇನ್ ವಾರ್ನ್!

IPL 2020 ಟೂರ್ನಿ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಈಗಾಗಲೇ 2 ಸೂಪರ್ ಓವರ್ ಪಂದ್ಯ ನಡೆದಿದ್ದು, ಟೂರ್ನಿಯ ರೋಚಕತೆ ಮತ್ತಷ್ಟು ಹೆಚ್ಚಾಗಿದೆ

28

ಆರಂಭಿಕ ಹಂತದ ಕೆಲ ಲೆಕ್ಕಾಚಾರಗಳು ಬುಡಮೇಲಾಗಿದ್ದು, ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿದೆ.

38

ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಶೇನ್ ವಾರ್ನರ್ ಐಪಿಎಲ್ 2020 ಟೂರ್ನಿಯ ಪ್ಲೇ ಆಫ್ ಸ್ಥಾನಕ್ಕೇರುವ 4 ತಂಡಗಳು ಯಾವುದು ಅನ್ನೋದು ಹೇಳಿದ್ದಾರೆ.

48

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯೂ ಪ್ಲೇ ಆಫ್ ಸ್ಥಾನಕ್ಕೇರಲಿದೆ ಎಂದು ವಾರ್ನ್ ಹೇಳಿದ್ದಾರೆ. ಮುಂಬೈ ಬಲಿಷ್ಠ ತಂಡವಾಗಿದೆ. ಹೀಗಾಗಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲಿದೆ ಎಂದಿದ್ದಾರೆ.

58

2 ಪಂದ್ಯ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಅಷ್ಟೇ ವೇಗದಲ್ಲಿ ಲಯಕ್ಕೆ ಮರಳಲಿದೆ. ಜೊತೆಗೆ ಪ್ಲೇ ಆಫ್ ಸ್ಥಾನ ಅಕ್ರಮಿಸಿಕೊಳ್ಳಲಿದೆ ಎಂದು ವಾರ್ನ್ ಹೇಳಿದ್ದಾರೆ.

68

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ಕೂಡ ಪ್ಲೇ ಆಫ್ ಸ್ಥಾನಕ್ಕೇರಲಿದೆ ಎಂದು ವಾರ್ನ ಹೇಳಿದ್ದಾರೆ. ರಾಜಸ್ಥಾನ 2 ರಲ್ಲಿ 2 ಪಂದ್ಯ ಗೆದ್ದುಕೊಂಡಿದೆ.

78

ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಸೋಲು ಅನುಭವಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಡಲಿದೆ ಎಂದು ವಾರ್ನ್ ಹೇಳಿದ್ದಾರೆ.

88

ಐಪಿಎಲ್ 2020 ಟೂರ್ನಿಯ ಈ ವರೆಗಿನ ಪ್ರದರ್ಶನ ಗಮಿಸಿದರೆ ಮುಂಬೈ, ಚೆನ್ನೈ, ರಾಜಸ್ಥಾನ ಹಾಗೂ ಡೆಲ್ಲಿ ಟಾಪ್ 4 ಸ್ಥಾನ ಪಡೆಯಲಿದೆ ಎಂದು ವಾರ್ನ್ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories