ಸುರೇಶ್ ರೈನಾ ಕುರಿತು ಅತಿದೊಡ್ಡ ನಿರ್ಧಾರ ತೆಗೆದುಕೊಂಡ ಸಿಎಸ್‌ಕೆ ಫ್ರಾಂಚೈಸಿ..!

First Published | Sep 30, 2020, 6:29 PM IST

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಸುರೇಶ್ ರೈನಾ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಮುಗ್ಗರಿಸಿದೆ. ಇದರ ನಡುವೆ ಸುರೇಶ್ ರೈನಾ ಅವರ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ತವರಿಗೆ ವಾಪಾಸಾಗಿದ್ದರು.
ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ್ದರೂ ಅವರ ಈ ನಿರ್ಧಾರದ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಿದ್ದವು.
Tap to resize

ತವರಿಗೆ ಮರಳಿದ ಬಳಿಕ ಮತ್ತೆ ನಾನು ತಂಡವನ್ನು ಕೂಡಿಕೊಂಡರೂ ಅಚ್ಚರಿಯಿಲ್ಲ ಎಂದು ಸಿಎಸ್‌ಕೆ ಉಪನಾಯಕ ರೈನಾ ಹೇಳುವ ಮೂಲಕ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದರು.
ಇದರ ನಡುವೆ ರೈನಾ ಸ್ಥಾನಕ್ಕೆ ಯಾವೊಬ್ಬ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳದೇ ಇರುವುದು ರೈನಾ ಹೇಳಿಕೆಗೆ ಮತ್ತಷ್ಟು ಇಂಬು ನೀಡುವಂತಿತ್ತು.
ಕಳಪೆ ಪ್ರದ​ರ್ಶ​ನ​ದಿಂದ ಒತ್ತ​ಡಕ್ಕೆ ಸಿಲು​ಕಿ​ರುವ ಚೆನ್ನೈ ಸೂಪರ್‌ ಕಿಂಗ್ಸ್‌ ನೆರ​ವಿಗೆ ಸುರೇಶ್‌ ರೈನಾ ಬರಬಹುದು, ರೈನಾ ಐಪಿ​ಎಲ್‌ಗೆ ವಾಪ​ಸಾ​ಗ​ಬ​ಹುದು ಎನ್ನುವ ಅಭಿ​ಮಾ​ನಿ​ಗಳ ನಿರೀಕ್ಷೆ ಹುಸಿ​ಯಾ​ಗಿ​ದೆ.
ಇದೀಗ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹಾಗೂ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಗ್ಗೆ ಸಿಎಸ್‌ಕೆ ಫ್ರಾಂಚೈಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಚೆನ್ನೈ ತಂಡ ತನ್ನ ಅಧಿ​ಕೃತ ವೆಬ್‌ಸೈಟ್‌ನಿಂದ ರೈನಾ ಹೆಸರು, ಫೋಟೋವನ್ನು ತೆಗೆದುಹಾಕಿ ಈ ಆವೃ​ತ್ತಿ​ಯಲ್ಲಿ ಆಡು​ವು​ದಿಲ್ಲ ಎನ್ನು​ವು​ದನ್ನು ಸ್ಪಷ್ಟ​ಪ​ಡಿ​ಸಿದೆ.
ಇತ್ತೀ​ಚೆ​ಗಷ್ಟೇ ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವ​ನಾ​ಥನ್‌, ಐಪಿ​ಎಲ್‌ನಿಂದ ಹಿಂದೆ ಸರಿ​ಯುವುದು ರೈನಾ ಅವರ ವೈಯ​ಕ್ತಿಕ ನಿರ್ಧಾರ, ನಾವು ಅದನ್ನು ಗೌರ​ವಿ​ಸು​ತ್ತೇವೆ ಎಂದಿ​ದ್ದ​ರು.
ಕೊರೋನಾ ಸೋಂಕಿನ ಭೀತಿ​ಯಿಂದಾಗಿ ಐಪಿಎಲ್‌ನಲ್ಲಿ ಆಡ​ದಿ​ರಲು ನಿರ್ಧ​ರಿಸಿ, ದುಬೈನಿಂದ ಭಾರ​ತಕ್ಕೆ ವಾಪ​ಸಾ​ಗಿ​ದ್ದಾಗಿ ರೈನಾ ಹೇಳಿ​ಕೊಂಡಿ​ದ್ದರು.

Latest Videos

click me!