99 ರನ್ ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್‌ಗಿಂತ ವೈರಲ್ ಆಗಿದ್ದು ಗೆಳತಿ ಆದಿತಿ!

Suvarna News   | Asianet News
Published : Sep 29, 2020, 08:52 PM ISTUpdated : Sep 29, 2020, 09:02 PM IST

ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಇದೀಗ ಎಲ್ಲರ ಮನೆಮಾತಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಇಶಾನ್ 99 ರನ್ ಸಿಡಿಸಿ ಸೋಲಿನ ಸುಳಿಯಿಂದ ಪಾರುಮಾಡಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇಶಾನ್ ಕಿಶನ್ ಅಬ್ಬರಿಸಿದರೂ ಕಿಶನ್‌ಗಿಂತ ವೈರಲ್ ಆಗಿರುವುದು ಕಿಶನ್ ಗೆಳತಿ ಆದಿತಿ ಹುಂಡಿಯಾ.

PREV
18
99 ರನ್  ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್‌ಗಿಂತ ವೈರಲ್ ಆಗಿದ್ದು ಗೆಳತಿ ಆದಿತಿ!

ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಇಶಾನ್ ಕಿಶನ್ 99 ರನ್ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ಆದರೆ ಸೂಪರ್ ಓವರ್‌ನಲ್ಲಿ ಮುಂಬೈ ಸೋಲಿಗೆ ಶರಣಾಯಿತು.

28

ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಇಶಾನ್ ಕಿಶನ್ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದರು. ಇದೀಗ ಇಶಾನ್ ಕಿಶನ್ ಬ್ಯಾಟಿಂಗ್ ಪ್ರದರ್ಶನಕ್ಕಿಂತ ಕಿಶನ್ ಗೆಳತಿ ಹುಂಡಿಯಾ ಫೋಟೋ ಹೆಚ್ಚು ವೈರಲ್ ಆಗಿವೆ.

38

ಪಂದ್ಯದ ಬಳಿಕ ಇಶಾನ್ ಕಿಶನ್ ಗೆಳತಿ ಅದಿತಿ ಹುಂಡಿಯಾ ಕಿಶನ್ ಫೋಟೋ ಪೋಸ್ಟ್ ಮಾಡಿದ್ದಾರೆ. ಹೆಮ್ಮೆ ಇದೆ ಬೇಬಿ ಎಂದು ಅದಿತಿ ಬರೆದುಕೊಂಡಿದ್ದಾರೆ.

48

ಕಳೆದ ಕೆಲ ವರ್ಷಗಳಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದಿತಿ ಹುಂಡಿಯಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತುಗಳಿವೆ. ಹಲವು ಭಾರಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

58

ಕಳೆದ ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶನ್ ಪ್ರದರ್ಶನ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಅದಿತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮುಂಬೈ ಫ್ಯಾನ್ ಗರ್ಲ್ ಎಂದು ವೈರಲ್ ಆಗಿತ್ತು.

68

ಐಪಿಎಲ್ ಟೂರ್ನಿ ಬಳಿಕ ಇಶಾನ್ ಕಿಶನ್ ತಮ್ಮ ಹುಟ್ಟುಹಬ್ಬವನ್ನು ಆದಿತಿ ಹುಂಡಿಯಾ ಜೊತೆ ಆಚರಿಸಿಕೊಂಡಿದ್ದರು. ಈ ವೇಳೆ ಇವರಿಬ್ಬರ ಫೋಟೋ ಭಾರಿ ಸದ್ದು ಮಾಡಿತ್ತು.

78

ಮಾಡೆಲಿಂಗ್ ಕ್ಷೇತ್ರದಲ್ಲಿರುವ ಆದಿತಿ ಹುಂಡಿಯಾ 2018ರಲ್ಲಿ ಮಿಸ್ ಸೂಪರ್‌ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ಮಿಸ್ ರಾಜಸ್ಥಾನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

88

ಮಾಡೆಲ್ ಆದಿತಿ ಹುಂಡಿಯಾ ರಾಜಸ್ಥಾನ ಮೂಲದವರಾಗಿದ್ದು, ಇಶಾನ್ ಕಿಶನ್ ಜೊತೆ ಆತ್ಮೀಯರಾಗಿದ್ದಾರೆ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋದ ಹಲವು ಬಾರಿ ಸುದ್ದಿಯಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories