RCB ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ ಏಕೆ? ಕೊನೆಗೂ 'ಆ ಸೀಕ್ರೇಟ್' ಬಿಚ್ಚಿಟ್ಟ ಕ್ಯಾಪ್ಟನ್ ಕೊಹ್ಲಿ..!

First Published Apr 6, 2020, 11:26 AM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ 12 ಆವೃತ್ತಿಯಲ್ಲಿ ಕಣಕ್ಕಿಳಿದಿರುವ ಬೆಂಗಳೂರು ಮೂಲದ ಫ್ರಾಂಚೈಸಿಗೆ ಐಪಿಎಲ್ ಕಪ್ ಎನ್ನುವುದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.

ಇನ್ನು 13ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಡಿಸೆಂಬರ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ಅಳೆದು ತೂಗಿ ಆಟಗಾರರನ್ನು ಖರೀದಿಸಿತ್ತು. ಈ ಮೂಲಕ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಸದ್ಯಕ್ಕೆ ಐಪಿಎಲ್ ಆರಂಭವಾಗುವುದು ಅನುಮಾನ ಎನಿಸಿದೆ. ಇಂತಹ ಸಂದರ್ಭದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡ ಕಪ್ ಗೆಲ್ಲುವ ಹಾದಿಯಲ್ಲಿ ಎಡವುತ್ತಿರುವುದೆಲ್ಲಿ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಏನದು ಸೀಕ್ರೇಟ್..?

ಪ್ರತಿ ಆವೃತ್ತಿಯಲ್ಲೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡ ಐಪಿಎಲ್ ತಂಡವೆಂದರೆ ಅದು ಆರ್‌ಸಿಬಿ
undefined
ಪ್ರೇಕ್ಷಕರನ್ನು ಅತಿಹೆಚ್ಚು ರಂಜಿಸಿದ ಹಾಗೂ ಫ್ಯಾನ್ ಬೇಸ್ ಹೊಂದಿದ ತಂಡವೆಂದರೇ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು
undefined
ಕಳೆದ 12 ಆವೃತ್ತಿಯಲ್ಲಿ RCB ಕಪ್ ಗೆಲ್ಲದಿದ್ದರೂ ಬೆಂಬಲಿಸುವ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ.
undefined
ಮೊದಲ ಐಪಿಎಲ್ ಆವೃತ್ತಿಯಿಂದ 12 ಆವೃತ್ತಿಯವರೆಗೂ RCB ತಂಡದಲ್ಲಿ ಟಿ20 ಸ್ಪೆಷಲಿಸ್ಟ್‌ಗಳ ದಂಡೇ ಇದೆ
undefined
ಇದರ ಹೊರತಾಗಿಯೂ ಬೆಂಗಳೂರು ಮೂಲದ ಫ್ರಾಂಚೈಸಿಗೆ ಕಪ್ ಗೆಲ್ಲಲು ಸಾಧ್ಯವಾಗದೇ ಇದ್ದದ್ದು ನಿಜಕ್ಕೂ ಅಚ್ಚರಿ
undefined
ಈ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ಹುರಿದುಂಬಿಸಿದೊಂದೇ ಬಂತು, ಆದ್ರೆ ಕಪ್ ಮಾತ್ರ ನಮ್ಮದಾಗಿಲ್ಲ
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿ ಮುಗ್ಗರಿಸಿದೆ
undefined
RCB ತಂಡ 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಕ್ರಮವಾಗಿ ಡೆಕ್ಕನ್ ಚಾರ್ಜರ್ಸ್, ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಎದುರು ಮುಗ್ಗರಿಸಿದೆ
undefined
ಇದೀಗ RCB ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡ ಕಪ್ ಗೆಲ್ಲದೇ ಇರಲು ಕಾರಣ ಏನು ಎನ್ನುವ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ
undefined
ಐಪಿಎಲ್‌ ಪ್ರಶಸ್ತಿ ಗೆಲ್ಲಬೇಕು ಎಂಬ ಒತ್ತಡದಿಂದಾಗಿ RCB ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ
undefined
ಕಪ್ ಗೆಲ್ಲಲೇ ಬೇಕು ಎನ್ನುವ ಒತ್ತಡ ಆಟಗಾರರ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ
undefined
click me!