ಕ್ರೀಡೆಗೂ ಕೊರೋನಾ ಕುತ್ತು ರದ್ದಾಗುತ್ತಿವೆ ಕ್ರೀಡಾ ಕೂಟಗಳು!

First Published | Mar 14, 2020, 12:26 PM IST

ವಿಶ್ವಕಪ್‌ನಿಂದ ಐಪಿಎಲ್‌ವರೆಗೆ ಕರೋನಾದ ಪ್ರಭಾವ ಎಲ್ಲೆಡೆ ಕಂಡುಬರುತ್ತದೆ. ಒಲಿಂಪಿಕ್ಸ್‌ನಿಂದ ಐಪಿಎಲ್ವರೆಗಿನ ಎಲ್ಲಾ ಪ್ರಮುಖ ಕ್ರೀಡಾಕೂಟಗಳೂ ಕೊರೋನಾ ಹಿಡಿತದಲ್ಲಿವೆ. ಕೊರೋನಾ ವೈರಸ್‌ ಭಯದಿಂದ ಖಾಲಿ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿವೆ. ಈ ಪಂದ್ಯಗಳಲ್ಲಿ ಪ್ರೇಕ್ಷಕರಿಲ್ಲದೇ ಯಾವುದೇ ಉತ್ಸಾಹವಿಲ್ಲ ಹಾಗೂ ಪಂದ್ಯವನ್ನು ಗೆದ್ದ ನಂತರವೂ ಸಂಭ್ರಮವಿರೋಲ್ಲ. ಕರೋನಾದ ಭಯವು ಒಬ್ಬ ಆಟಗಾರನನ್ನು ಮಾತ್ರವಲ್ಲದೆ ಇಡೀ ಕ್ರೀಡಾ ಜಗತ್ತನ್ನು ಅಸ್ವಸ್ಥಗೊಳಿಸಿದೆ. ಈ ಸಾಂಕ್ರಾಮಿಕ ರೋಗ ಪ್ರತಿ ಕ್ರೀಡೆಯ ಮೇಲೂ ಪರಿಣಾಮ ಬೀರಿದೆ.ಕರೋನಾ ವೈರಸ್‌ನಿಂದಾಗಿ, ಕ್ರೀಡಾ ಸ್ಪರ್ಧೆಗಳನ್ನು ನಿರಂತರವಾಗಿ ರದ್ದುಗೊಳಿಸಲಾಗುತ್ತಿದೆ.

ಕೊರೋನಾ ಕಾರಣದಿಂದ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ರದ್ದುಗೊಳಿಸಿದ ನಂತರ, ಶ್ರೀಲಂಕಾ ಇಂಗ್ಲೆಂಡ್ ಪ್ರವಾಸವನ್ನೂ ರದ್ದುಪಡಿಸಲಾಯಿತು.
ಐಪಿಲ್‌ ಮೇಲೂ ಕೊರೋನಾ ಪರಿಣಾಮ ಬೀರಿದ್ದು, ಬಿಸಿಸಿಐ ಪಂದ್ಯಾವಳಿಯನ್ನು ಏಪ್ರಿಲ್ 15 ಕ್ಕೆ ಮುಂದೂಡಿದೆ.
Tap to resize

ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಭಾರತ ಕತಾರ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳನ್ನು ಮುಂದೂಡಲಾಗಿದೆ.
ಕರೋನಾದಿಂದಾಗಿ ಎಲ್ಲಾ ಆಟಗಾರರಿಗೆ ಅಭಿಮಾನಿಗಳಿಂದ ದೂರವಿರಲು ಸೂಚಿಸಲಾಗಿದೆ.
ಕೊರೋನಾದ ಎಫೆಕ್ಟ್‌ ತಡೆಯಲು ರಣಜಿ ಟ್ರೋಫಿಯ ಫೈನಲ್ ಅನ್ನು ಪ್ರೇಕ್ಷಕರಿಲ್ಲದೆ ಆಡಲಾಯಿತು.
ಕೊರೋನಾದ ಕಾರಣ, ಖಾಲಿ ಮೈದಾನದಲ್ಲಿ ಪಂದ್ಯಗಳನ್ನು ಆಡಲಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಖಾಲಿ ಮೈದಾನದಲ್ಲಿ ಆಡಲಾಗುತ್ತಿದೆ.
ಕರೋನಾ ಹಾವಳಿಯ ಪರಿಣಾಮದಿಂದ ಮಾರ್ಚ್ 15 ರಿಂದ ಮಾರ್ಚ್ 25 ರವರೆಗೆ ದೆಹಲಿಯಲ್ಲಿ ನಡೆಯಬೇಕಾಗಿದ್ದ ಶೂಟಿಂಗ್ ವಿಶ್ವಕಪ್ ರದ್ದುಗೊಂಡಿದೆ.
ಮಾರ್ಚ್ 24 ರಿಂದ 29 ರವರೆಗೆ ನಡೆಯಲಿರುವ ಇಂಡಿಯಾ ಓಪನ್ ಪಂದ್ಯಾವಳಿ ಕೂಡ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪಂದ್ಯವೂ ಖಾಲಿ ಮೈದಾನದಲ್ಲಿ ನಡೆಯಲಿದೆ.
ಪ್ಯಾರಾ ಸ್ಪೋರ್ಟ್ಸ್‌ನ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಸಹ ಮುಂದೂಡಲಾಗಿದೆ.

Latest Videos

click me!