ಧೋನಿ, ಕೊಹ್ಲಿ ಸೇರಿ ಹಲವು ಸ್ಟಾರ್ ಕ್ರಿಕೆಟಿರಿಗೆ ಡೋಪಿಂಗ್ ಟೆಸ್ಟ್‌..?

First Published Aug 25, 2020, 4:04 PM IST

ನವದೆಹಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ 8 ತಂಡಗಳು ದುಬೈಗೆ ಬಂದಿಳಿದಿವೆ. ಮಾದ್ಯಮದ ವರದಿಯ ಪ್ರಕಾರ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರು ಡೋಪಿಂಗ್‌ ಟೆಸ್ಟ್‌ಗೆ ಒಳಗಾಗಲಿದ್ದಾರೆ.

ಭಾರತ ಸರ್ಕಾರದ ನಾಡಾ ನಡೆಸುವ ಡೋಪಿಂಗ್ ಟೆಸ್ಟ್‌ನಲ್ಲಿ ಐಪಿಎಲ್‌ನ ಸ್ಟಾರ್‌ ಆಟಗಾರರು ಪಾಲ್ಗೊಳ್ಳಲಿದ್ದಾರೆ.
undefined
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ದುಬೈನಲ್ಲಿ ಸುಮಾರು 50 ಕ್ರಿಕೆಟಿಗರ ಸ್ಯಾಂಪಲ್ ಸಂಗ್ರಹಿಸಲಾಗುವುದು ಎಂದು ವರದಿಯಾಗಿದೆ.
undefined
ಐಪಿಎಲ್ ಟೂರ್ನಿ ನಡೆಯುವ ಸ್ಥಳದಲ್ಲಿಯೇ ಅಧಿಕಾರಿಗಳು ಡೋಪಿಂಗ್ ಟೆಸ್ಟ್ ನಡೆಸಲಿದ್ದಾರೆ ಎಂದು ನಾಡಾ ಡೈರೆಕ್ಟರ್ ಜನರಲ್ ನವೀನ್ ಅಗರ್‌ವಾಲ್ ಪತ್ರಿಕೆಗೆ ತಿಳಿಸಿದ್ದಾರೆ.
undefined
ಕಟ್ಟುನಿಟ್ಟಾಗಿ ಟೆಸ್ಟ್ ನಡೆಸಲಾಗುವುದು, ಸುಮಾರು 50 ಕ್ರಿಕೆಟಿಗರ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
undefined
ಮೂರು ಹಂತದಲ್ಲಿ ಡೋಪಿಂಗ್ ನಡೆಸುವ ತಂಡವು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಒಂದು ತಂಡ ಯುಎಇಗೆ ಬಂದಿಳಿಯಲಿದೆ.
undefined
ದುಬೈಗೆ ತೆರಳುವ ಮುನ್ನ ಎಲ್ಲಾ ಸದಸ್ಯರ ಕೊರೋನಾ ಟೆಸ್ಟ್‌ಗೆ ಒಳಗಾಗಲಿದ್ದಾರೆ. ದುಬೈಗೆ ಬಂದಿಳಿದ ಬಳಿಕವೂ ಮತ್ತೊಮ್ಮೆ ಸದಸ್ಯರೆಲ್ಲರು ಕೊರೋನಾ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.
undefined
click me!