ಸಂಪೂರ್ಣ ಬಜೆಟ್ ಖಾಲಿ ಆದ್ರೂ ಪರ್ವಾಗಿಲ್ಲ, ಈ ಆಟಗಾರನನ್ನು ಖರೀದಿಸೋಣ ಎಂದಿದ್ದರಂತೆ ಗಂಭೀರ್..!

First Published | Jul 31, 2020, 6:53 PM IST

ಬೆಂಗಳೂರು: ಕೊರೋನಾ ಆತಂತ, ಐಸಿಸಿ ತಡವಾದ ತೀರ್ಮಾನಗಳೆಲ್ಲವುದರ ಹೊರತಾಗಿಯೂ 2020ನೇ ಸಾಲಿನ ಐಪಿಎಲ್ ಆಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಮತ್ತೊಮ್ಮೆ ಹೊಡಿಬಡಿಯಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇಂತಹ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಕೆಲವು ಅತಿ ರೋಚಕ ಹಾಗೆಯೇ ಕುತೂಹಲಕಾರಿ ಸಂಗತಿಗಳನ್ನು ನಿಮ್ಮ ಎದುರಿಗಿಡಲು ಮುಂದಾಗಿದೆ. ಅಂತಹ ರೋಚಕ ಸಂಗತಿಗಳಲ್ಲಿ ಗೌತಮ್ ಗಂಭೀರ್ ಒಬ್ಬ ಆಟಗಾರನನ್ನು ಖರೀದಿಸಲು ಬೆಲೆ ಎಷ್ಟಾದರೂ ಖರ್ಚು ಮಾಡಲು ಫ್ರಾಂಚೈಸಿ ಮನವೊಲಿಸಿದ್ದ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

ಗೌತಮ್ ಗಂಭೀರ್ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.
undefined
2011ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ತಮ್ಮ ತೆಕ್ಕೆಗೆ ಗಂಭೀರ್ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
undefined

Latest Videos


ಇದಾದ ಬಳಿಕ ಗಂಭೀರ್‌ಗೆ ಕೆಕೆಆರ್ ತಂಡದ ನಾಯಕ ಪಟ್ಟ ಕಟ್ಟಲಾಯಿತು. ಗಂಭೀರ್ ನಾಯಕರಾದ ಬಳಿಕ ಮೊದಲ ಬಾರಿಗೆ ಕೆಕೆಆರ್ ತಂಡ ಪ್ಲೇ ಆಫ್ ಹಂತ ಪ್ರವೇಶಿಸಿತ್ತು.
undefined
ಇದಕ್ಕೂ ಮೊದಲು ಬಲಿಷ್ಠ ತಂಡವಿದ್ದರೂ ಕೆಕೆಆರ್ ತಂಡ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ಗಂಭೀರ್ ಮೊದಲ ಪ್ರಯತ್ನದಲ್ಲೇ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.
undefined
ಇನ್ನು 2012ರಲ್ಲಿ ಶತಯಗತಯ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಎಡಗೈ ಬ್ಯಾಟ್ಸ್‌ಮನ್ ಗಂಭೀರ್ ಪಣತೊಟ್ಟರು.
undefined
ಹೀಗಾಗಿ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ಆಟಗಾರರನ್ನು ಖರೀದಿಸಲು ಕೆಕೆಆರ್ ಫ್ರಾಂಚೈಸಿ ಮೇಲೆ ಗಂಭೀರ್ ಪ್ರಭಾವ ಬೀರಿದರು.
undefined
ಅದರಲ್ಲೂ ತನಗೆ ಬೇಕಾದ ಒಬ್ಬ ಆಟಗಾರನನ್ನು ಖರೀದಿಸಲು ಬೆಲೆ ಎಷ್ಟಾದರೂ ಪರ್ವಾಗಿಲ್ಲ. ಆತ ನನ್ನ ತಂಡದಲ್ಲಿರಬೇಕು ಎಂದು ಮಾಲೀಕ ಶಾರುಕ್ ಖಾನ್‌ ಬಳಿ ಒತ್ತಾಯಿಸಿದ್ದರಂತೆ.
undefined
ಆ ಆಟಗಾರ ಬೇರೆ ಯಾರು ಅಲ್ಲ, ವಿಂಡೀಸ್ ಆಲ್ರೌಂಡರ್ ಸುನಿಲ್ ನರೇನ್. ಹರಾಜಿನಲ್ಲಿ ನಡೆದ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಡುತ್ತಿದ್ದೇವೆ ನೋಡಿ.
undefined
ಶಾರುಕ್: ನೀವು ನರೇನ್ ಖರೀದಿಸೋಣ ಎನ್ನುತ್ತಿದ್ದೀರ. ಅವರನ್ನು ಬಿಟ್ಟು ಬೇರೆ ಯಾರನ್ನಾದರೂ ಖರೀದಿಸೋಣವೇ?
undefined
ಗಂಭೀರ್: ಹರಾಜಿಗಾಗಿ ನಿಮ್ಮ ಬಳಿ ಬಜೆಟ್ ಎಷ್ಟಿದೆ?
undefined
ಶಾರುಕ್‌: ನಮ್ಮ ಬಳಿ ಒಟ್ಟು ಎರಡು ಮಿಲಿಯನ್ ಇದೆ. ಆದ್ರೆ ಯಾರು ಈ ಆಟಗಾರ? ಆತನ ನಿಮಗೇಕೆ ಅಷ್ಟು ವಿಶ್ವಾಸ?
undefined
ಗಂಭೀರ್: ನಿಮ್ಮ ಬಳಿ ಎರಡು ಮಿಲಿಯನ್ ಡಾಲರ್ ಹಣ ವಿದೆಯೆಂದರೆ ಅಷ್ಟನ್ನೂ ನೀಡಿ ಬೇಕಾದರೂ ಆತನನ್ನು ಖರೀದಿಸಿ. ನನಗೆ ಈ ಆಟಗಾರ ತಂಡದಲ್ಲಿರ ಬೇಕು ಎಂದಿದ್ದರಂತೆ.
undefined
ಕೇವಲ 33 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸುನಿಲ್ ನರೇನ್ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್ ಫ್ರಾಂಚೈಸಿ 4.71 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
undefined
ಪರಿಣಾಮ ನರೇನ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂದಿಗೂ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
undefined
2012ರಲ್ಲಿ ನಡೆದ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಅವರ ತವರು ಮೈದಾನದಲ್ಲೇ ಮಣಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು
undefined
ಇನ್ನು 2018ರ ಐಪಿಎಲ್ ಟೂರ್ನಿಯಲ್ಲಿ ಸುನಿಲ್ ನರೇನ್ ಅಮೋಘ ಪ್ರದರ್ಶನದ ಮೂಲಕ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಎನ್ನುವ ಪ್ರಶಸ್ತಿಗೂ ಭಾಜನರಾಗಿದ್ದರು.
undefined
click me!