IPL 2020 ಸಂಪೂರ್ಣ ರದ್ದಾದರೆ BCCIಗೆ ಆಗುವ ನಷ್ಟವೆಷ್ಟು? ಇಲ್ಲಿದೆ ವಿವರ!

First Published | May 12, 2020, 3:34 PM IST

ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡೆಗಳು ರದ್ದಾಗಿದೆ. ಭಾರತ ಹಾಗೂ ಸೌತ್ ಆಫ್ರಿಕಾ ಸರಣಿ, ಬಳಿಕ ಐಪಿಎಲ್ ಟೂರ್ನಿ, ಆಸ್ಟ್ರೇಲಿಯಾ ಪ್ರವಾಸ ಸೇರಿದಂತೆ ಹಲವು ಟೂರ್ನಿಗಳು ಬಹುತೇಕ ರದ್ದಾಗಿದೆ. ಆದರೆ ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. 2020ರಲ್ಲಿ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐ ಆಪಾರ ನಷ್ಟ ಅನುಭವಿಸಲಿದೆ. ಈ ನಷ್ಟ ಸರಿದೂಗಿಸುವುದು ಅಷ್ಟೇ ದೊಡ್ಡ ಸವಾಲು. ಈ ಬಾರಿ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐಗೆ ಆಗುವ ನಷ್ಟದ ವಿವರ ಇಲ್ಲಿದೆ.

ಕೊರೋನಾ ವೈರಸ್ ಕಾರಣ ಬಿಸಿಸಿಐ ಚಿನ್ನದ ಮೊಟ್ಟೆ ಇಡೋ ಐಪಿಎಲ್ ಟೂರ್ನಿ ತಾತ್ಕಾಲಿಕ ರದ್ದಾಗಿದೆ
ಮಾರ್ಚ್ 29 ರಂದು ಆರಂಭವಾಗಬೇಕಿದ್ದ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಕೊರೋನಾ ವೈರಸ್ ಕಾರಣ ತಾತ್ಕಾಲಿಕ ರದ್ದು ಮಾಡಿದ್ದ ಬಿಸಿಸಿಐ
Tap to resize

ಮೇ ತಿಂಗಳಲ್ಲಿ ಐಪಿಎಲ್ ಆಯೋಜಿಸಲು ನಿರ್ಧರಿಸಿದ್ದ ಬಿಸಿಸಿಐಗೆ ಮತ್ತೆ ಹಿನ್ನಡೆ, ಕೊರೋನಾ ವೈರಸ್ ಪ್ರಕರಣ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹೆಚ್ಚಳ
ಕೊರೋನಾ ವೈರಸ್ ಹಾವಳಿ ಕಾರಣ ಐಪಿಎಲ್ 2020 ಟೂರ್ನಿ ರದ್ದಾದರೆ ಬಿಸಿಸಿಐಗೆ ಬರೋಬ್ಬರಿ 4,000 ಕೋಟಿ ರೂಪಾಯಿ ನಷ್ಟವಾಗಲಿದೆ
ಐಪಿಎಲ್ ರದ್ದಾಗುವುದರಿಂದ ಬಿಸಿಸಿಐಗೆ 4 ಸಾವಿರ ಕೋಟಿ ನೇರ ನಷ್ಟ ಎಂದು ಮಾಹಿತಿ ನೀಡಿದ ಖಜಾಂಚಿ ಅರುಣ್ ಧುಮಾಲ್
ಐಪಿಎಲ್ ನಡೆಯದೇ ಇದ್ದರೆ ಬಿಸಿಸಿಐ ನಷ್ಟ ಸರಿದೂಗಿಸಲು ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅರುಣ್ ಧುಮಾಲ್
ಐಪಿಎಲ್ ನಡೆಯದೇ ಇದ್ದರೆ ಬಿಸಿಐ ಕೂಡ ವೇತನ ಕಡಿತಕ್ಕೆ ಮುಂದಾಗುವ ಸಾಧ್ಯತೆ ಎಂದು ಸೂಚನೆ ನೀಡಿದ ಬಿಸಿಸಿಐ ಖಜಾಂಚಿ
ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸೇರಿದಂತೆ ಹಲವು ಕ್ರಿಕೆಟ್ ಮಂಡಳಿಗಳು ಈಗಾಗಲೇ ವೇತನ ಕಡಿತ ಮಾಡಿದೆ
ವೇತನ ಕಡಿತ ನಿರ್ಧಾರ ಬಿಸಿಸಿಐ ಕೊನೆಯ ಆಯ್ಕೆ, ಅದಕ್ಕೂ ಮೊದಲು ಕೊರೋನಾ ವೈರಸ್ ನಿಯಂತ್ರಣವಾದರೆ ಎಲ್ಲವೂ ಸರಿಹೋಗಲಿದೆ ಎಂದ ಬಿಸಿಸಿಐ

Latest Videos

click me!