IPL 2025 Qualifier 1 ಪಂದ್ಯದಲ್ಲಿ RCB ಗೆದ್ದಿತು ಅಂತ ನಾನು ಸೆಲೆಬ್ರೇಟ್ ಮಾಡಲ್ಲ: ಸುಯಶ್‌ ಶರ್ಮಾ

Published : May 29, 2025, 11:47 PM ISTUpdated : May 30, 2025, 09:58 AM IST

ಆರ್‌ಸಿಬಿ ಗೆದ್ದರೂ ಕೂಡ ಸುಯಶ್‌ ಶರ್ಮಾ ಅವರು ಈಗ ಈ ಖುಷಿಯಲ್ಲಿ ಆಚರಣೆ ಮಾಡೋದಿಲ್ಲ. ಈ ಬಗ್ಗೆ ಅವರೇ ಆಟದ ಬಳಿಕ ಹೇಳಿಕೊಂಡಿದ್ದಾರೆ. ಹಾಗಾದರೆ ಅವರು ಯಾಕೆ ಹೇಳಿದರು? 

PREV
16

2025ರ ಐಪಿಎಲ್ ಮೊದಲ ಕ್ವಾಲಿಫೈಯರ್‌ನಲ್ಲಿ ಸುಯಶ್ ಶರ್ಮಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರವಾಗಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಆರ್‌ಸಿಬಿ ಗೆದ್ದರೂ ಕೂಡ ಅವರು ಈಗ ಈ ಖುಷಿಯಲ್ಲಿ ಆಚರಣೆ ಮಾಡೋದಿಲ್ವಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

26

ಈ ಲೆಗ್-ಸ್ಪಿನ್ನರ್ ಸುಯಶ್‌ ಅವರು ಕೇವಲ 3 ಓವರ್‌ಗಳಲ್ಲಿ 17 ರನ್‌ಗಳನ್ನು ಮಾತ್ರ ನೀಡಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾರ್ಕಸ್ ಸ್ಟೋನಿಸ್, ಶಶಾಂಕ್ ಸಿಂಗ್ ಮತ್ತು ಮುಶೀರ್ ಖಾನ್‌ರಂತಹ ದಿಗ್ಗಜರು ಬ್ಯಾಟ್‌ ಹಿಡಿದು ಮೈದಾನದಿಂದ ಹೊರಗಡೆ ಹೋಗುವಂತೆ ಮಾಡಿದ್ದಾರೆ.

36

ಸುಯಶ್ ಅವರು ಗೂಗ್ಲಿಗಳು ಏನು ಅಂತ ಬ್ಯಾಟ್ಸ್‌ಮನ್‌ಗಳಿಗೆ ಅರ್ಥವೇ ಆಗ್ತಿರಲಿಲ್ಲ. ಹೀಗಾಗಿ ಒಂದಾದ ಮೇಲೆ ಒಂದರಂತೆ ವಿಕೆಟ್‌ಗಳು ಉರುಳಿ ಆಲ್‌ಔಟ್‌ ಆಯ್ತು. ಆರ್‌ಸಿಬಿಯು ಪಿಬಿಕೆಎಸ್‌ನನ್ನು ಕೇವಲ 101 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಸುಯಶ್ ಪಾತ್ರ ದೊಡ್ಡದು.

46

ಮೊದಲ ಇನ್ನಿಂಗ್ಸ್ ಬಳಿಕ, ಸುಯಶ್ ಮಾತನಾಡುತ್ತಾ, “ಯಾವ ಬ್ಯಾಟ್ಸ್‌ಮನ್‌ಗಳೂ ನಮ್ಮ ಗೂಗ್ಲಿಗಳನ್ನು ಅರ್ಥ ಮಾಡಿಕೊಳ್ಳಲು ಆಗೋದಿಲ್ಲ. ನಮ್ಮ ಕೋಚ್‌ನ ಯೋಜನೆ ಈಗ ಕಾರ್ಯರೂಪಕ್ಕೆ ಬಂದಿದೆ. ಇಂದು ಬೌಲಿಂಗ್ ಮಾಡುವಾಗ ತುಂಬಾ ಚೆನ್ನಾಗಿತ್ತು ಎನ್ನುವ ಭಾವನೆ ಬಂತು. ಯಾರೂ ನನ್ನ ಗೂಗ್ಲಿಗಳನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಇದು ನನ್ನ ಅನಿಸಿಕೆ. ನಾವು ಇದನ್ನು ಸಾಮಾನ್ಯ ಪಂದ್ಯ ಎನ್ನುವಂತೆ ಪರಿಗಣಿಸಿದೆವು, ಸೆಮಿಫೈನಲ್ ಆಗಿ ಎಂದಿಗೂ ಭಾವಿಸಿರಲಿಲ್ಲ. ನಾನು ನನ್ನ ಬೌಲಿಂಗ್‌ ಚೆನ್ನಾಗಿ ಆಗಲಿ ಎಂದು ತುಂಬ ಕಷ್ಟಪಟ್ಟಿದ್ದೇನೆ. ಆರ್‌ಸಿಬಿ ತಂಡದ ಜನವನ್ನು ಈಗ ಸಂಭ್ರಮಿಸೋದಿಲ್ಲ, ಜೂನ್‌ 13ಕ್ಕೆ ಆಚರಿಸ್ತೀವಿ" ಎಂದು ಅವರು ಹೇಳಿದರು.

56

ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸುಯಶ್‌ರನ್ನು 2.6 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಇಷ್ಟು ಹಣ ಕೊಟ್ಟು ಖರೀದಿ ಮಾಡಿದ್ದು ಈಗ ಪ್ರಯೋಜನಕ್ಕೆ ಬಂದಿದೆ. ನವದೆಹಲಿಯ ಈ ಲೆಗ್-ಸ್ಪಿನ್ನರ್ 13 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು 52.87ರ ಸರಾಸರಿ, 8.81ರ ಎಕಾನಮಿ ರೇಟ್‌ನೊಂದಿಗೆ ಪಡೆದಿರೋದು ಖುಷಿಯ ವಿಷಯ.

66

ಆರ್‌ಸಿಬಿಯಲ್ಲಿ ಯಶಸ್ಸು ಕಾಣುವ ಮೊದಲು, ಸುಯಶ್ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರವಾಗಿ ಆಟ ಆಡಿದ್ದರು. ಅವರು 2023ರಲ್ಲಿ 19 ವರ್ಷ ಇದ್ದಾಗಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿ, 11 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ, 2024ರ ಕೆಕೆಆರ್‌ನ ಗೆದ್ದ ಸೀಸನ್‌ನಲ್ಲಿ ಅವರು ಕೇವಲ ಎರಡು ಪಂದ್ಯಗಳಲ್ಲಿ ಆಡಿದ್ದು, ಯಾವುದೇ ವಿಕೆಟ್ ಪಡೆದಿರಲಿಲ್ಲ.

Read more Photos on
click me!

Recommended Stories