IPL 2020: ಈ 5 ಬ್ಯಾಟ್ಸ್‌ಮನ್‌ಗಳು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಹುದು..!

Suvarna News   | Asianet News
Published : Oct 02, 2020, 06:18 PM ISTUpdated : Oct 03, 2020, 11:15 AM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಹೀಗಿರುವಾಗಲೇ ಸಿಕ್ಸರ್‌ಗಳ ಸುರಿಮಳೆ ಸುರಿಯಲಾರಂಭಿಸಿದೆ. ಹೊಡಿಬಡಿಯಾಟದಲ್ಲಿ ಅಕ್ಷರಶಃ ಬ್ಯಾಟ್ಸ್‌ಮನ್‌ಗಳು ದರ್ಬಾರ್ ಮಾಡುತ್ತಿದ್ದಾರೆ. ಈಗಾಗಲೇ ರಾಜಸ್ಥಾನ ರಾಯಲ್ಸ್‌ನ ಆಲ್ರೌಂಡರ್ ರಾಹುಲ್ ತೆವಾಟಿಯಾ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಕೇವಲ ಒಂದು ಎಸೆತ ಮಿಸ್ ಮಾಡಿಕೊಳ್ಳುವ ಮೂಲಕ ದಾಖಲೆಯ 6 ಸಿಕ್ಸರ್ ಸಿಡಿಸುವ ಅವಕಾಶ ಕೈಚೆಲ್ಲಿದರು. ಇದರ ಬೆನ್ನಲ್ಲೇ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ದಾಖಲಾಗಬಹುದು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ. ಈ ಸಂದರ್ಭದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಲ್ಲ ಸಂಭಾವ್ಯ 6 ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.   

PREV
110
IPL 2020: ಈ 5 ಬ್ಯಾಟ್ಸ್‌ಮನ್‌ಗಳು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಹುದು..!

1. ಕ್ರಿಸ್ ಗೇಲ್: ಕಿಂಗ್ಸ್ ಇಲೆವನ್ ಪಂಜಾಬ್

1. ಕ್ರಿಸ್ ಗೇಲ್: ಕಿಂಗ್ಸ್ ಇಲೆವನ್ ಪಂಜಾಬ್

210

ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಗೇಲ್ ಐಪಿಎಲ್ ಟೂರ್ನಿಯಲ್ಲಿ 124 ಇನಿಂಗ್ಸ್‌ಗಳಲ್ಲಿ 326 ಸಿಕ್ಸರ್ ಸಿಡಿಸುವ ಮೂಲಕ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿದ ಆಟಗಾರ ಎನಿಸಿದ್ದಾರೆ. ಸದ್ಯ ಪ್ರಸಕ್ತ ಆವೃತ್ತಿಯಲ್ಲಿ ಗೇಲ್ ಕಣಕ್ಕಿಳಿದಿಲ್ಲ, ಆದರೆ ಆದಷ್ಟು ಶೀಘ್ರ ಗೇಲ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದ್ದು, ಜಮೈಕಾ ಬ್ಯಾಟ್ಸ್‌ಮನ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದರೂ ಅಚ್ಚರಿಪಡಬೇಕಿಲ್ಲ.

310

2. ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್

2. ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್

410

ಹಾರ್ಡ್‌ ಹಿಟ್ಟರ್ ಹಾರ್ದಿಕ್ ಪಾಂಡ್ಯ ಅನಾಯಾಸವಾಗಿ ಸಿಕ್ಸರ್ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಈಗಾಗಲೇ 7 ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಂಡ್ಯ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದಾರೆ. ಪಾಂಡ್ಯ ಕೂಡಾ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಲ್ಲ ಆಟಗಾರರಲ್ಲಿ ಒಬ್ಬರು.

510

3. ಎಬಿ ಡಿವಿಲಿಯರ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

610

ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ 200ಕ್ಕೂ ಅಧಿಕ ಸಿಕ್ಸರ್ ಚಚ್ಚಿದ್ದಾರೆ. ಈಗಾಗಲೇ ಉತ್ತಮ ಫಾರ್ಮ್‌ನಲ್ಲಿರುವ ಎಬಿಡಿ ಈ ಆವೃತ್ತಿಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದರೂ ಅಚ್ಚರಿಪಡಬೇಕಿಲ್ಲ.

710

4. ಆ್ಯಂಡ್ರೆ ರಸೆಲ್: ಕೋಲ್ಕತ ನೈಟ್‌ ರೈಡರ್ಸ್

4. ಆ್ಯಂಡ್ರೆ ರಸೆಲ್: ಕೋಲ್ಕತ ನೈಟ್‌ ರೈಡರ್ಸ್

810

ರಸೆಲ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಳೆದ ವರ್ಷ ಆರ್‌ಸಿಬಿ ವಿರುದ್ಧ ಕೊನೆಯ 3 ಓವರ್‌ಗಳಲ್ಲಿ ಕೆಕೆಆರ್‌ಗೆ 54 ರನ್‌ಗಳ ಅಗತ್ಯವಿತ್ತು. ಈ ವೇಳೆ ರಸೆಲ್ ಕೇವಲ 13 ಎಸೆತಗಳಲ್ಲಿ 48 ರನ್ ಚಚ್ಚಿದ್ದರು. ರಸೆಲ್ ಓವರ್‌ವೊಂದರಲ್ಲಿ 6 ಸಿಕ್ಸರ್‌ ಸಿಡಿಸಬಲ್ಲ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು.

910

5. ಕಿರಾನ್ ಪೊಲ್ಲಾರ್ಡ್: ಮುಂಬೈ ಇಂಡಿಯನ್ಸ್

5. ಕಿರಾನ್ ಪೊಲ್ಲಾರ್ಡ್: ಮುಂಬೈ ಇಂಡಿಯನ್ಸ್

1010

ಮುಂಬೈ ಇಂಡಿಯನ್ಸ್‌ನ ಸ್ಟಾರ್ ಆಲ್ರೌಂಡರ್ ಕಿರಾನ್ ಪೊಲ್ಲಾರ್ಡ್‌ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪೊಲ್ಲಾರ್ಡ್ ಪಾತ್ರವನ್ನು ಮರೆಯುವಂತಿಲ್ಲ. ಪಂಜಾಬ್ ವಿರುದ್ಧ 20ನೇ ಓವರ್‌ನಲ್ಲಿ ಪೊಲ್ಲಾರ್ಡ್ 4 ಸಿಕ್ಸರ್ ಸಿಡಿಸಿದ್ದರು. ಇದೇ ಆವೃತ್ತಿಯಲ್ಲಿ 6 ಸಿಕ್ಸರ್ ಪೊಲ್ಲಾರ್ಡ್ ಬ್ಯಾಟ್‌ನಿಂದ ಬಂದರೂ ಬರಬಹುದು

click me!

Recommended Stories