ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಕಂಡುಬಂದ ದಿ ಬೆಸ್ಟ್ ಮೀಮ್ಸ್‌ಗಳಿವು..!
First Published | Oct 26, 2020, 9:51 AM ISTಬೆಂಗಳೂರು: ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಒನ್ ಮ್ಯಾನ್ ಶೋಗೆ ಸಾಕ್ಷಿಯಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 195 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬೆನ್ ಸ್ಟೋಕ್ಸ್ ಕೆಚ್ಚೆದೆಯ ಅಜೇಯ ಶತಕ ಹಾಗೂ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ಸುಲಭ ಗೆಲುವನ್ನು ದಾಖಲಿಸಿದೆ. ಈ ಪಂದ್ಯ ವೀಕ್ಷಿಸಿದ ಬಳಿಕ ಟ್ರೆಂಡ್ ಆದ ಟಾಪ್ 10 ಮೀಮ್ಸ್‌ಗಳು ಇಲ್ಲಿವೆ ನೋಡಿ.