IPL 2020: ದುಬೈನ ಐಷಾರಾಮಿ ಹೋಟೆಲ್‌ನಲ್ಲಿ ಉಳಿಯಲಿದೆ ವಿರಾಟ್ ಪಡೆ

First Published Aug 21, 2020, 9:18 AM IST


ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಭಾರತದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಇಂದು(ಆ.21) ದುಬೈಗೆ ವಿಮಾನ ಹತ್ತಲಿದೆ. ವಿರಾಟ್ ಪಡೆ ದುಬೈನ 5 ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದೆ. ಈ ಹೋಟೆಲ್‌ನ ವಿಶೇಷತೆಗಳೇನು? ಯಾವೆಲ್ಲಾ ಸೌಲಭ್ಯಗಳು ಈ ಹೋಟೆಲ್‌ನಲ್ಲಿರಲಿವೆ. ವಿದೇಶಿ ಆಟಗಾರರು ಯಾವಾಗ ಆರ್‌ಸಿಬಿ ಪಡೆಯನ್ನು ಕೂಡಿಕೊಳ್ಳುತ್ತಾರೆ ಎನ್ನುವ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಆರ್‌ಸಿಬಿ ತಂಡವು ಬೆಂಗಳೂರಿನಿಂದ ದುಬೈಗೆ ಯಾವಾಗ ಹೊರಡಲಿದೆ ಎನ್ನುವುದನ್ನು ಚೇರ್‌ಮನ್ ಸಂಜೀವ್‌ ಚುರಿ​ವಾಲಾ ಖಚಿತಪಡಿಸಿದ್ದಾರೆ.
undefined
ಈಗಾಗಲೇ ಭಾರತದ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದು, ಒಂದು ವಾರದ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದಾರೆ.
undefined
ಇನ್ನುಹಂತ ಹಂತವಾಗಿ ವಿದೇಶಿ ಆಟಗಾರರುನೇರವಾಗಿ ದುಬೈಗೆ ಬಂದಿಳಿಯಲಿದ್ದಾರೆ.
undefined
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯ ವಹಿಸಿದ್ದು, ಶಾರ್ಜಾ, ದುಬೈ ಹಾಗೂ ಅಬುದಾಬಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಆದರೆ ಬಿಸಿಸಿಐ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ.
undefined
ದುಬೈಗೆ ಬಂದಿಳಿಯುತ್ತಿದ್ದಂತೆ ಆರ್‌ಸಿಬಿ ಆಟಗಾರರಿಗೆ ಬಿಸಿಸಿಐ ನಿಯಮದನ್ವಯ ಸಂಪೂರ್ಣ ಬಯೋ ಸೆಕ್ಯೂರ್‌ ವಾತಾ​ವ​ರಣಕ್ಕೊಳಗಾಗಲಿದ್ದಾರೆ.
undefined
ಹೀಗಾಗಿ ದುಬೈನ ಬಯೋ ಸೆಕ್ಯೂರ್ ವ್ಯವಸ್ಥೆ ಹೊಂದಿರುವ 5 ಸ್ಟಾರ್ ಹೋಟೆಲ್‌ನ ಒಂದು ಬ್ಲಾಕ್‌ನ್ನೇ ಬುಕ್‌ ಮಾಡಲಾಗಿದೆ.
undefined
ಆಟಗಾರರ ಪ್ರಯಾಣಕ್ಕೆ ಅನುಕೂಲಕರವಾಗುವಂತೆ (ಶಾರ್ಜಾ, ದುಬೈ, ಅಬುದಾಬಿ) ಮಧ್ಯ ಭಾಗದಲ್ಲಿರುವಂತೆ ಹೋಟೆಲ್‌ ಬುಕ್ ಮಾಡಲಾಗಿದ್ದು, 100% ಬಯೋಸೆಕ್ಯೂರ್ ಹೋಟೆಲ್‌ ಬುಕ್ ಮಾಡಲಾಗಿದೆ ಎಂದು ಸಂಜೀವ್‌ ಚುರಿ​ವಾಲಾ ಹೇಳಿದ್ದಾರೆ.
undefined
ನಾವು ಸುಮಾರು 155 ಕೊಠಡಿಗಳಿರುವ ಸಂಪೂರ್ಣ ಒಂದು ಬ್ಲಾಕ್‌ ಅನ್ನು ನಮ್ಮ ಆಟಗಾರರಿಗೆ ಕಾಯ್ದಿರಿಸಲಾಗಿದೆ. ಈ ಹೋಟೆಲ್‌ನಲ್ಲಿ ಪ್ರತ್ಯೇಕ ಜಿಮ್, ಡೈನಿಂಗ್ ಹಾಗೂ ಟೀಂ ರೂಂಗಳು ಇರಲಿವೆ ಎಂದು ಅವರು ತಿಳಿಸಿದ್ದಾರೆ.
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಿಲ್ಟನ್ ಗ್ರೂಪ್‌ಗೆ ಸೇರಿದ ವಾಲ್ಡೊರ್ಫ್ ಎಸ್ಟೋ​ರಿಯಾ ಪಂಚ​ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದೆ.
undefined
ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಆಗಸ್ಟ್ 22 ರಂದು ದುಬೈಗೆ ಬಂದಿಳಿಯಲಿದ್ದಾರೆ. ಇನ್ನು ಶ್ರೀಲಂಕಾ ಆಟಗಾರ ಉಡಾನ ಸೆಪ್ಟೆಂಬರ್ 01ರಂದು ಹಾಗೆಯೇ ಆಸ್ಟ್ರೇಲಿಯಾದ ಆಟಗಾರರು ಸೆಪ್ಟೆಂಬರ್ 17ರಂದು ಆರ್‌ಸಿಬಿ ತಂಡ ಕೂಡಿಕೊಳ್ಳಲಿದ್ದಾರೆ.
undefined
ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ಹೊಸದಾಗಿ ತಂಡ ಕೂಡಿಕೊಂಡಿರುವ ಕ್ರಿಸ್ ಮೋರಿಸ್ ಆಗಸ್ಟ್ 22ರಂದು ದುಬೈಗೆ ಬಂದಿಳಿಯಲಿದ್ದಾರೆ.
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ವರ್ಷ ಹೊಸ ಕೋಚ್‌ಗಳಾದ ಮೈಕ್ ಹೆಸನ್ ಹಾಗೂ ಸೈಮನ್ ಕ್ಯಾಟಿಚ್ ಮಾರ್ಗದರ್ಶನದಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವ ಕನವರಿಕೆಯಲ್ಲಿದೆ.
undefined
click me!