IPL 2020: ಕೊರೋನಾ ಕಾರಣ ಬಹುಮಾನ ಮೊತ್ತದಲ್ಲಿ ಭಾರಿ ಕಡಿತ, ಇಲ್ಲಿದೆ ಸಂಪೂರ್ಣ ವಿವರ!

First Published Nov 10, 2020, 6:14 PM IST

IPL 2020 ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಕೊರೋನಾ ಕಾರಣ ಅಭಿಮಾನಿಗಳಿಲ್ಲದೇ ಟೂರ್ನಿ ಆಯೋಜಿಸಿದ ಬಿಸಿಸಿಐ ಸಂಪೂರ್ಣ ಯಶಸ್ವಿಯಾಗಿದೆ. ಇನ್ನು ಕೊರೋನಾ ಕಾರಣ ಈ ಬಾರಿಯ ಟ್ರೋಫಿ ಗೆಲ್ಲುವ ತಂಡ, ರನ್ನರ್ ಅಪ್ ಹಾಗೂ ಪ್ಲೇ ಆಫ್ ಪ್ರವೇಶಿಸಿದ ತಂಡದ ಬಹುಮಾನ ಮೊತ್ತದಲ್ಲಿ ಭಾರಿ ಕಡಿತ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿವೆ.

ಕೊರೋನಾ ವೈರಸ್ ಕಾರಣ ಹಲವು ಬಾರಿ ಮುಂದೂಡಿಕೆಯಾಗಿದ್ದ ಐಪಿಎಲ್ 2020 ಟೂರ್ನಿ ಕೊನೆಗೂ ದುಬೈನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿತು. ಇದೀಗ ಫೈನಲ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ.
undefined
ಪ್ರಶಸ್ತಿಗಾಗಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸಲಿದೆ. ಗೆದ್ದ ತಂಡ 13ನೇ ಆವೃತ್ತಿಯ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳಲಿದೆ. ಆದರೆ ಈ ಬಾರಿ ಪ್ರಶಸ್ತಿ ಮೊತ್ತದಲ್ಲಿ ಭಾರಿ ಕಡಿತ ಮಾಡಲಾಗಿದೆ.
undefined
ಕೊರೋನಾ ವೈರಸ್ ಕಾರಣ ಬಿಸಿಸಿಐ ಆರ್ಥಿಕ ನಷ್ಟ ಅನುಭವಿಸಿದೆ. ಹೀಗಾಗಿ ಐಪಿಎಲ್ 2020 ಪ್ರಶಸ್ತಿ ಮೊತ್ತದಲ್ಲೂ ಕಡಿತ ಮಾಡಲಾಗಿದೆ. 2020ರಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಕ್ಕೆ 32.5 ಕೋಟಿ ರೂಪಾಯಿ ನೀಡಲಾಗಿತ್ತು.
undefined
2020ರ ಚಾಂಪಿಯನ್ ಹಾಗೂ ರನ್ನರ್ ಆಪ್ ತಂಡಕ್ಕೆ ಸಿಗುವ ಒಟ್ಟು ಮೊತ್ತ 16.25 ಕೋಟಿ ರೂಪಾಯಿ ಮಾತ್ರ. 2020ರಲ್ಲಿ ಚಾಂಪಿಯನ್ ತಂಡ 20 ಕೋಟಿ ರೂಪಾಯಿ ಜೇಬಿಗಿಳಿಸಿಕೊಂಡಿದ್ದರೆ, ಈ ಬಾರಿ 10 ಕೋಟಿ ರೂಪಾಯಿ ಮಾತ್ರ ಸಿಗಲಿದೆ.
undefined
2020ರಲ್ಲಿ ರನ್ನರ್ ಅಪ್ ತಂಡ ಪ್ರಶಸ್ತಿ ಮೊತ್ತವಾಗಿ 12.5 ಕೋಟಿ ರೂಪಾಯಿ ಪಡೆದುಕೊಂಡಿದ್ದರೆ, ಈ ಬಾರಿ ರನ್ನರ್ ಅಪ್ ತಂಡ 6.25 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಪಡೆಯಲಿದೆ.
undefined
ಟೂರ್ನಿ ಆರಂಭದ ವೇಳೆ ಬಿಸಿಸಿಐ ಪ್ರಶಸ್ತಿ ಮೊತ್ತ ಕಡಿತದ ಕುರಿತು ಸ್ಪಷ್ಟವಾಗಿ ಹೇಳಿತ್ತು. ಸದ್ಯ ಟೂರ್ನಿ ಯಶಸ್ವಿಯಾಗಿದ್ದು, ಬಿಸಿಸಿಐ ನಿರೀಕ್ಷಿತ ಆದಾಯ ಪಡೆದಕೊಂಡಿದೆ. ಆದರೆ ಪ್ರಶಸ್ತಿ ಮೊತ್ತದಲ್ಲಿ ಹೊಸ ಬದಲಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
undefined
ಟೂರ್ನಿ ಆರಂಭಕ್ಕೂ ಮುನ್ನ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಮೊಬೈಲ್ ಹಿಂದೆ ಸರಿದಿತ್ತು. ಹೀಗಾಗಿ ಡ್ರೀಮ್ 11 ಬಿಡ್ಡಿಂಗ್ ಮೂಲಕ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿತ್ತು.
undefined
click me!