ಮುಂಬೈ ವಿರುದ್ಧದ ಫೈನಲ್ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

First Published | Nov 10, 2020, 4:02 PM IST

ದುಬೈ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಕಪ್ ಎತ್ತಿ ಹಿಡಿಯುವ ಕನವರಿಕೆಯಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಡೆಲ್ಲಿ ಫೈನಲ್‌ನಲ್ಲೂ ಅಂತಹದ್ದೇ ಪ್ರದರ್ಶನ ತೋರುವ ಲೆಕ್ಕಾಚಾರದಲ್ಲಿದೆ.
ಬಲಿಷ್ಠ ಮುಂಬೈ ಇಂಡಿಯನ್ಸ್‌ ಎದುರು ಫೈನಲ್‌ನಲ್ಲಿ ಕಾದಾಡಲಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಫೈನಲ್ ಪಂದ್ಯಕ್ಕೆ ಡೆಲ್ಲಿ ತಂಡದ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿರುವ ಸಾಧ್ಯತೆಯಿದೆ.

"If you look at a weakness in our cricket through this tournament it has been our batting powerplays. I think we lost a wicket in the first over in some eight or nine games in the tournament, which is unbelievable really, when you think of the quality that we've got at the top of the order. We wanted to try and rectify that," Ponting further stated.
2. ಶಿಖರ್ ಧವನ್: ಡೆಲ್ಲಿ ಪರ ಈ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ ಅನುಭವಿ ಬ್ಯಾಟ್ಸ್‌ಮನ್
Tap to resize

3. ಅಜಿಂಕ್ಯ ರಹಾನೆ: ಅನುಭವಿ ಹಾಗೂ ಉಪಯುಕ್ತ ಸಂದರ್ಭದಲ್ಲಿ ಉತ್ತಮವಾಗಿ ರನ್‌ ಗಳಿಸುವ ಸಾಮರ್ಥ್ಯವಿರುವ ಬ್ಯಾಟ್ಸ್‌ಮನ್
4. ಶ್ರೇಯಸ್ ಅಯ್ಯರ್: ಡೆಲ್ಲಿ ನಾಯಕ, ದೊಡ್ಡ ಇನಿಂಗ್ಸ್ ಆಡಬಲ್ಲ ಬ್ಯಾಟ್ಸ್‌ಮನ್
5. ರಿಷಭ್ ಪಂತ್: ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್. ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟ್ಸ್‌ಮನ್
6. ಶಿಮ್ರೋನ್ ಹೆಟ್ಮೇಯರ್: ಮಧ್ಯಮ ಕ್ರಮಾಂಕದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಸಾಮರ್ಥ್ಯವಿರುವ ವಿಂಡೀಸ್ ಬ್ಯಾಟ್ಸ್‌ಮನ್
7. ಅಕ್ಷರ್ ಪಟೇಲ್: ಎಡಗೈ ಸ್ಪಿನ್ನರ್, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕಾಣಿಕೆ ನೀಡಬಲ್ಲ ಬ್ಯಾಟ್ಸ್‌ಮನ್
8. ರವಿಚಂದ್ರನ್ ಅಶ್ವಿನ್: ಅನುಭವಿ ಆಫ್‌ಸ್ಪಿನ್ನರ್, ಪವರ್‌ ಪ್ಲೇ ಓವರ್‌ನಲ್ಲೇ ವಿಕೆಟ್ ಕಬಳಿಸಬಲ್ಲ ಸ್ಪಿನ್ನರ್
9. ಹರ್ಷಲ್ ಪಟೇಲ್: ಮಧ್ಯಮ ವೇಗದ ಬೌಲರ್, ಚಾಣಾಕ್ಷ ಬೌಲಿಂಗ್ ನಡೆಸುವ ಸಾಮರ್ಥ್ಯವಿರುವ ಆಟಗಾರ
10. ಆನ್ರಿಚ್ ನೊಕಿಯೆ; ದಕ್ಷಿಣ ಆಫ್ರಿಕಾದ ಸ್ಪೀಡ್ ಗನ್, ಮಾರಕ ಬೌನ್ಸರ್ ಹಾಗೂ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ ಕಂಗೆಡಿಸಬಲ್ಲ ವೇಗಿ
11. ಕಗಿಸೋ ರಬಾಡ: ಸದ್ಯ ಪರ್ಪಲ್ ಕ್ಯಾಪ್ ಒಡೆಯ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಮಾರಕ ವೇಗಿ

Latest Videos

click me!