IPL 2020: ಮುಂಬೈ -ಡೆಲ್ಲಿ ಫೈನಲ್ ಪಂದ್ಯದ ರೋಚಕ 7 ಮಾಹಿತಿ!

First Published Nov 10, 2020, 3:21 PM IST

IPL 2020 ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮಹತ್ವದ ಪಂದ್ಯದಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿದೆ. ಮುಂಬೈ ಹಾಗೂ ಡೆಲ್ಲಿ ನಡುವಿನ ಹೋರಾಟ ಹಲವು ಅಚ್ಚರಿ ಮಾಹಿತಿಗೆ ಕಾರಣವಾಗಿದೆ. ಫೈನಲ್ ಪಂದ್ಯದ ರೋಚಕ ಮಾಹಿತಿ ಇಲ್ಲಿವೆ.

ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಕೇವಲ 3 ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. 3ರಲ್ಲಿ 2 ಬಾರಿ ಮುಂಬೈ ಇಂಡಿಯನ್ಸ್ ಈ ಸಾಧನೆ ಮಾಡಿದೆ. 2020ರಲ್ಲಿ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಈ ಬಾರಿ ಮುಂಬೈ ಪ್ರಶಸ್ತಿ ಗೆಲ್ಲುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.
undefined
2020ರ ಫೈನಲ್ ಪಂದ್ಯ ಐಪಿಎಲ್ ಟೂರ್ನಿಯ ಯಶಸ್ವಿ ನಾಯಕ ಹಾಗೂ ಕಿರಿಯ ನಾಯಕನ ನಡುವಿನ ಹೋರಾಟವಾಗಿದೆ. ರೋಹಿತ್ ಶರ್ಮಾ 4 ಐಪಿಎಲ್ ಟ್ರೋಫಿ ಗೆದ್ದಿದ್ದಾರೆ
undefined
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಫೈನಲ್ ಪಂದ್ಯ ಆಡುತ್ತಿರುವ ಅತೀ ಕಿರಿಯ ನಾಯಕ ಶ್ರೇಯಸ್ ಅಯ್ಯರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಯ್ಯರ್ ವಯಸ್ಸು 25 ವರ್ಷ 339 ದಿನ
undefined
ಮುಂಬೈ ಇಂಡಿಯನ್ಸ್ ಇದೇ ಮೊದಲ ಬಾರಿಗೆ ಮುಂಬೈ ಮೂಲದ ನಾಯಕನನ್ನು ಎದುರಿಸುತ್ತಿದೆ. ಡೆಲ್ಲಿ ತಂಡ ನಾಯಕ ಶ್ರೇಯಸ್ ಅಯ್ಯರ್ ಮುಂಬೈ ಮೂಲದವರಾಗಿದ್ದಾರೆ.
undefined
ಡೆಲ್ಲಿ ತಂಡದ ಮೂವರು ಕ್ರಿಕೆಟಿಗರು ಈ ಹಿಂದಿನ ಆವೃತ್ತಿಗಳಲ್ಲಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಶಿಖರ್ ಧವನ್(2016, SRH), ಆರ್ ಅಶ್ವಿನ್(CSK, 2010,2011), ಅಕ್ಸರ್ ಪಟೇಲ್(MI, 2013)
undefined
ಮುಂಬೈ ಇಂಡಿಯನ್ಸ್ 5ನೇ ಐಪಿಎಲ್ ಟ್ರೋಫಿ ಗೆಲ್ಲುವ ತವಕದಲ್ಲಿದ್ದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಟ್ರೋಫಿ ಗೆಲುವಿಗೆ ಹೋರಾಟ ನಡೆಸಲಿದೆ
undefined
ಫೈನಲ್ ಆಡುತ್ತಿರುವ ಎರಡೂ ತಂಡದ ಜರ್ಸಿ ಕಲರ್ ನೀಲಿ. ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮೆನ್ ಇನ್ ಬ್ಲೂ ಎಂದು ಕರೆಯುತ್ತಾರೆ. ಇದೀಗ ಇಂದು ಯಾರೇ ಗೆದ್ದರು, ಮೆನ್ ಇನ್ ಬ್ಲೂ ಗೆಲುವಾಗಲಿದೆ.
undefined
click me!