ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಅತಿ ದೊಡ್ಡ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!

First Published | Oct 23, 2020, 4:55 PM IST

ಮುಂಬೈ: ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿನ ಕ್ರಿಕೆಟ್ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಅರ್ಧ ಭಾಗ ಮುಕ್ತಾಯವಾಗಿದ್ದರು. ಅಂತಿಮ 4ರ ಘಟ್ಟದಲ್ಲಿ ಸ್ಥಾನ ಪಡೆಯಲು ಎಲ್ಲಾ 4 ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.
ಹೌದು, ಹೀಗಿರುವಾಗಲೇ ತಮ್ಮ ಘಾತಕ ಬೌಲಿಂಗ್ ಮೂಲಕ ಎದುರಾಳಿ ತಂಡದ ನಿದ್ದೆಗೆಡಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆರ್ಚರ್‌ ಬಗೆಗಿನ ಸೆಹ್ವಾಗ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 

ಸ್ಪೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಯಾವ ವೇಗದ ಬೌಲರ್‌ಗೂ ಹೆದರಿದ್ದೇ ಇಲ್ಲ.
ಶೋಯೆಬ್ ಅಖ್ತರ್, ಬ್ರೆಟ್ ಲೀ, ಡೇಲ್ ಸ್ಟೇನ್ ಅವರಂತಹ ಬೌಲರ್‌ಗಳ ಎದೆಯಲ್ಲಿ ಸೆಹ್ವಾಗ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಒಂದು ರೀತಿಯ ಅವ್ಯಕ್ತ ಭಯ ಹುಟ್ಟಿಸಿದ್ದರು.
Tap to resize

ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕು ಹುಟ್ಟಿಸುತ್ತಿದ್ದ ಮುಲ್ತಾನಿನ ಸುಲ್ತಾನ ಖ್ಯಾತಿಯ ವಿರೇಂದ್ರ ಸೆಹ್ವಾಗ್ ಇದೀಗ ಜೋಫ್ರಾ ಆರ್ಚರ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ ತಮ್ಮ ಮಾರಕ ದಾಳಿಯ ಮೂಲಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋವ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದರು.
ದುರಾದೃಷ್ಟವೆಂದರೆ ಆರ್ಚರ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದೇ ಇದ್ದಿದ್ದರಿಂದ ರಾಜಸ್ಥಾನ ರಾಯಲ್ಸ್ ತಂಡ ಹೈದರಾಬಾದ್ ಎದುರು 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತು.
ಈ ಆವೃತ್ತಿಯಲ್ಲಿ ಇದುವರೆಗೂ 11 ಪಂದ್ಯಗಳನ್ನಾಡಿರುವ ಆರ್ಚರ್ ಕೇವಲ 6.61ರ ಸರಾಸರಿಯಲ್ಲಿ ರನ್ ನೀಡಿ 15 ವಿಕೆಟ್ ಕಬಳಿಸಿದ್ದಾರೆ.
ಆರ್ಚರ್ ಬೌಲಿಂಗ್ ಎದುರಿಸುವುದಕ್ಕಿಂತ ನಿವೃತ್ತಿಯಾಗಿ ಸ್ಟೋಡಿಯೋದಲ್ಲಿ ಈ ವೇಗಿಯ ಬಗ್ಗೆ ಮಾತನಾಡುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ ಎಂದು ವೀರೂ ಹೇಳಿದ್ದಾರೆ.
ಆರ್ಚರ್ ಬರೀ ವೇಗದ ಬೌಲರ್ ಮಾತ್ರವಲ್ಲ, ವೇಗದ ಜತಗೆ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಕಾರ್ತಿಕ್ ತ್ಯಾಗಿ ಕೂಡಾ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಆದರೆ ಆರ್ಚರ್ ಒಳ್ಳೆಯ ಲೈನ್ ಹಾಗೂ ಲೆಂಗ್ತ್ ಮೂಲಕ ಬೌಲಿಂಗ್ ಮಾಡುತ್ತಿರುವುದರಿಂದಲೇ ಅವರು ಯಶಸ್ವಿ ಬೌಲರ್ ಆಗಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಆರ್ಚರ್ ಯಾವಾಗಲೂ ಎದುರಾಳಿ ಬ್ಯಾಟ್ಸ್‌ಮನ್‌ಗಳು ತಪ್ಪು ಮಾಡುವಂತೆ ಮಾಡಿ ವಿಕೆಟ್ ಕಬಳಿಸುತ್ತಾರೆ. ಬ್ಯಾಟ್‌ ಹಾಗೂ ಬಾಲ್ ನಡುವೆ ಸ್ವಲ್ಪ ಅಂತರವಿದ್ದರೂ ಸಾಕು, ಆರ್ಚರ್ ವಿಕೆಟ್ ಎಗರಿಸಿ ಬಿಡುತ್ತಾರೆ ಎಂದು ಸೆಹ್ವಾಗ್ ಇಂಗ್ಲೆಂಡ್ ವೇಗಿಯ ಗುಣಗಾನ ಮಾಡಿದ್ದಾರೆ.
ಮೈದಾನದಲ್ಲಿ ಆರ್ಚರ್ ಎದುರಿಸುವುದಕ್ಕಿಂತ ಸ್ಟೂಡಿಯೋದಲ್ಲಿ ಕುಳಿತು ಆ ವೇಗಿಯ ಬಗ್ಗೆ ಮಾತನಾಡುವುದೇ ಹೆಚ್ಚು ಹಿತವೆನಿಸುತ್ತಿದೆ ಎಂದು ಆರ್ಚರ್ ಪ್ರತಿಭೆಯನ್ನು ಸೆಹ್ವಾಗ್ ಕೊಂಡಾಡಿದ್ದಾರೆ.

Latest Videos

click me!