99 ರನ್ ಸಿಡಿಸಿ ಕೇವಲ 1 ರನ್‌ನಿಂದ ಶತಕ ವಂಚಿತರಾದ IPL ಬ್ಯಾಟ್ಸ್‌ಮನ್ ಲಿಸ್ಟ್!

First Published Sep 29, 2020, 7:19 PM IST

ಕ್ರಿಕೆಟ್‌ನಲ್ಲಿ ನರ್ವಸ್ 99 ಸಾಮಾನ್ಯ. ಆದರೆ ಐಪಿಎಲ್ ಟೂರ್ನಿಯಲ್ಲಿ ಹಾಗಲ್ಲ. ಕಾರಣ ಇಲ್ಲಿ ಪ್ರತಿ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನ ನಡೆಯುತ್ತದೆ. ಹೀಗಾಗಿ 99 ರನ್‌ಗಳಿಗೆ ಕೆಲವರು ವಿಕೆಟ್ ಕೈಚೆಲ್ಲಿದ್ದಾರೆ. ಹೀಗೆ 99 ರನ್‌ಗೆ ಔಟಾಗೋ ಮೂಲಕ ಕೇವಲ 1 ರನ್‌ನಿಂದ ಶತಕ ವಂಚಿತರಾದ ಐಪಿಎಲ್ ಬ್ಯಾಟ್ಸ್‌ಮನ್ ಪಟ್ಟಿ ಇಲ್ಲಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪದರ್ಶನ ನೀಡಿದ ಇಶಾನ್ ಕಿಶನ್ ಪಂದ್ಯವನ್ನು ಟೈ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ ಇಶಾನ್ 99 ರನ್ ಸಿಡಿಸಿ ಔಟಾದರು.
undefined
202 ರನ್ ಟಾರ್ಗೆಟ್ ಚೇಸ್ ಮಾಡುವ ಸಂದರ್ಭದಲ್ಲಿ ಇಶಾನ್ ಕಿಶನ್ 58 ಎಸೆತದಲ್ಲಿ 99 ರನ್ ಸಿಡಿಸಿದರು. ಸತತ ಸಿಕ್ಸರ್ ಸಿಡಿಸಿದ ಕಿಶನ್ , ಮತ್ತೊಂದು ಸಿಕ್ಸರ್‌ಗೆ ಮುಂದಾಗಿ ವಿಕೆಟ್ ಕೈಚೆಲ್ಲಿದರು.
undefined

Latest Videos


ಈ ಬಾರಿಯ ಐಪಿಎಲ್‌ನಿಂದ ದೂರ ಉಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೂಡ ಐಪಿಎಲ್ ಟೂರ್ನಿಯಲ್ಲಿ ಅಜೇಯ 99 ರನ್‌ ಸಿಡಿಸಿ ಶತಕ ಮಿಸ್ ಮಾಡಿಕೊಂಡಿದ್ದಾರೆ.
undefined
2013ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸುರೇಶ್ ರೈನಾ 52 ಎಸೆತದಲ್ಲಿ ಅಜೇಯ 99 ರನ್ ಸಿಡಿಸಿದ್ದಾರೆ. ಇನ್ನೊಂದು ರನ್ ಸಿಡಿಸಿದರೆ ರೈನಾ ಸೆಂಚುರಿ ಸಾಧನೆ ಮಾಡುತ್ತಿದ್ದರು.
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಕೂಡ ಐಪಿಎಲ್ ಟೂರ್ನಿಯಲ್ಲಿ 1 ರನ್‌ನಿಂದ ಶತಕ ವಂಚಿತರಾಗಿದ್ದಾರೆ.
undefined
2013ರಲ್ಲಿ ವಿರಾಟ್ ಕೊಹ್ಲಿ, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ದ ಅಬ್ಬರಿಸಿದ್ದರು. 58 ಎಸೆತದಲ್ಲಿ 99 ರನ್ ಸಿಡಿಸಿ ಔಟಾಗಿದ್ದರು. ಕೊಹ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು.
undefined
2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಪೃಥ್ವಿ ಶಾ 99 ರನ್ ಸಿಡಿಸಿ ಶತಕ ವಂಚಿತರಾಗಿದ್ದರು. ಕೆಕೆಆರ್ ವಿರುದ್ಧ 55 ಎಸೆತತದಲ್ಲಿ 99 ರನ್ ಸಿಡಿಸಿದ್ದರು.
undefined
ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿರವ ಕ್ರಿಸ್ ಗೇಲ್ 2019ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 99 ರನ್ ಸಿಡಿಸಿ ಶತಕ ವಂಚಿತರಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೇಲ್ 64 ಎಸೆತದಲ್ಲಿ 99 ರನ್ ಸಿಡಿಸಿದ್ದರು.
undefined
click me!