2ನೇ ಸೂಪರ್‌ ಓವರ್‌ನಲ್ಲಿ ರಾಹುಲ್-ಪೂರನ್ ಏಕೆ ಬರಲಿಲ್ಲ..? ಹೊಸ ರೂಲ್ಸ್‌ ನಿಮಗೆ ಗೊತ್ತಾ..?

First Published Oct 19, 2020, 9:32 AM IST

ಬೆಂಗಳೂರು; ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಕ್ಷಣಕ್ಕೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಸಾಕ್ಷಿಯಾಯಿತು. ಯಾವ ಫೈನಲ್ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ಇದ್ದ ಪಂದ್ಯದಲ್ಲಿ 2ನೇ ಸೂಪರ್ ಓವರ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕ ಗೆಲುವು ದಾಖಲಿಸಿತು. 
ಮೊದಲ ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಎರಡನೇ ಬಾರಿಗೆ ಸೂಪರ್ ಓವರ್‌ಗೆ ಮೊರೆ ಹೋಗಲಾಯಿತು. 2ನೇ ಸೂಪರ್ ಓವರ್‌ ವೇಳೆ ಮುಂಬೈ ಪರ ಬುಮ್ರಾ ಯಾಕೆ ಬೌಲಿಂಗ್ ಮಾಡಲಿಲ್ಲ, ಇನ್ನು ಪಂಜಾಬ್‌ ಪರ ಉತ್ತಮ ಫಾರ್ಮ್‌ನಲ್ಲಿದ್ದ ರಾಹುಲ್-ಪೂರನ್ ಏಕೆ ಬ್ಯಾಟಿಂಗ್ ಮಾಡಲು ಬರಲಿಲ್ಲ? 2ನೇ ಸೂಪರ್ ಓವರ್ ರೂಲ್ಸ್‌ಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಐಪಿಎಲ್ ಅಭಿಮಾನಿಗಳ ಹೃದಯ ಬಡಿತವನ್ನು ಮತ್ತೊಮ್ಮೆ ಹೆಚ್ಚಿಸಿದ್ದ ಪಂದ್ಯದಲ್ಲಿ ಕೊನೆಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 2ನೇ ಸೂಪರ್ ಓವರ್‌ನಲ್ಲಿ ರೋಚಕ ಜಯ ದಾಖಲಿಸಿತು.
undefined
ದುಬೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿಕಾಕ್ ಆಕರ್ಷಕ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತ್ತು.
undefined
ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು.
undefined
ಹೀಗಾಗಿ ಉಭಯ ತಂಡಗಳು ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.
undefined
ಸೂಪರ್ ಓವರ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಕೆ.ಎಲ್ ರಾಹುಲ್, ನಿಕೋಲಸ್ ಪೂರನ್ ಹಾಗೂ ಮನ್ದೀಪ್ ಸಿಂಗ್ ಸೇರಿ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ 2 ವಿಕೆಟ್ ಕಳೆದುಕೊಂಡು 5 ರನ್ ಬಾರಿಸಿತು.
undefined
ಇನ್ನು ಸುಲಭ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಕೂಡಾ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಕೇವಲ 5 ರನ್ ಬಾರಿಸಿದರು. ಹೀಗಾಗಿ ಮತ್ತೆ ಪಂದ್ಯ ಟೈ ಆಗಿದ್ದರಿಂದ ಎರಡನೇ ಬಾರಿಗೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.
undefined
ಆದರೆ ಎರಡನೇ ಸೂಪರ್ ಓವರ್ ನಿಯಮಾವಳಿಗಳು ಮೊದಲ ಸೂಪರ್‌ಗಿಂತಗಳಿಗಿಂತ ಭಿನ್ನವಾಗಿದ್ದರಿಂದಲೇ ರಾಹುಲ್,ಪೂರನ್, ಜಸ್ಪ್ರೀತ್ ಬುಮ್ರಾ ಆ್ಯಕ್ಷನ್ ನೋಡಲು ಆಗಲಿಲ್ಲ.
undefined
ಮೊದಲ ಸೂಪರ್ ಓವರಲ್ಲಿ ಬ್ಯಾಟಿಂಗ್, ಬೌಲಿಂಗ್ ಮಾಡಿದವರು 2ನೇ ಸೂಪರ್‌ ಓವರ್‌ನಲ್ಲಿ ಮತ್ತೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವಂತಿಲ್ಲ.
undefined
ಸೂಪರ್ ಓವರ್‌ನಲ್ಲಿ ಔಟ್ ಆದ ಬ್ಯಾಟ್ಸ್‌ಮನ್ ಆ ಪಂದ್ಯದ ಮುಂದಿನ ಯಾವುದೇ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಅನರ್ಹನಾಗುತ್ತಾನೆ.
undefined
1ನೇ ಸೂಪರ್ ಓವರಲ್ಲಿ ಮೊದಲು ಬ್ಯಾಟ್ ಮಾಡಿದವರು 2ನೆಯ ಸೂಪರ್ ಓವರ್‌ನಲ್ಲಿ ಚೇಸ್ ಮಾಡಬೇಕು.
undefined
ಮೊದಲ ಸೂಪರ್ ಓವರ್‌ನ ವಿರುದ್ಧ ದಿಕ್ಕಿನಿಂದ 2ನೇ ಸೂಪರ್ ಓವರಲ್ಲಿ ಬೌಲಿಂಗ್ ಮಾಡಬೇಕು.
undefined
ಈ ಕಾರಣಕ್ಕಾಗಿಯೇ ರಾಹುಲ್, ಪೂರನ್, ಡಿಕಾಕ್(ಈ ಮೂವರು ಔಟ್ ಆಗಿದ್ದರು) ಎರಡನೇ ಸೂಪರ್‌ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲಿಲ್ಲ.
undefined
ಇನ್ನು ಮೊದಲ ಸೂಪರ್‌ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಬೌಲಿಂಗ್ ಮಾಡಿದ್ದರಿಂದ ಈ ಇಬ್ಬರು ಬೌಲರ್‌ಗಳು ಎರಡನೇ ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಲಿಲ್ಲ.
undefined
ಇನ್ನು ಮೊದಲ ಸೂಪರ್ ಓವರ್‌ನಲ್ಲಿ 3ನೇ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಕಿರಾನ್ ಪೊಲ್ಲಾರ್ಡ್ 2ನೇ ಸೂಪರ್ ಓವರ್‌ನಲ್ಲಿ ಕಣಕ್ಕಿಳಿದಿದ್ದರು.
undefined
2ನೇ ಸೂಪರ್ ಓವರ್‌ನಲ್ಲಿ ಮುಂಬೈ ನೀಡಿದ್ದ 12 ರನ್‌ಗಳ ಗುರಿಯನ್ನು ಕ್ರಿಸ್ ಗೇಲ್ ಹಾಗು ಮಯಾಂಕ್ ಅಗರ್‌ವಾಲ್ ಜೋಡಿ ಸಿಕ್ಸರ್ ಬೌಂಡರಿ ಬಾರಿಸಿ ಭರ್ಜರಿಯಾಗಿ ತಂಡಕ್ಕೆ ಗೆಲುವು ತಂದಿತ್ತರು.
undefined
click me!