ಟೀಮ್ ಇಂಡಿಯಾದ ಕ್ರಿಕೆಟಿಗರು ಯಾವುದೇ ಸೆಲೆಬ್ರಿಟಿಗಳಿಗಿಂತ ಕಡಿಮೆ ಇಲ್ಲ. ಜನಪ್ರಿಯತೆಯ ಜೊತೆ ಶ್ರೀಮಂತಿಕೆಯಲ್ಲೂ ಟಾಪ್ ಸ್ಥಾನದಲ್ಲಿದ್ದಾರೆ.
ಇದರ ಫಲವಾಗಿ, ಕೆಲವು ಕ್ರಿಕೆಟಿಗರು ತುಂಬಾ ಶ್ರೀಮಂತರಾಗಿದ್ದಾರೆ, ಎಷ್ಟೆಂದರೆ ಕೇವಲ ದುಬಾರಿ ಬಂಗ್ಲೆ ಹಾಗೂ ವಾಹನ ಮಾತ್ರ ಅಲ್ಲ. ಕೆಲವರು ಖಾಸಗಿ ಜೆಟ್‌ಗಳನ್ನು ಸಹ ಹೊಂದಿದ್ದಾರೆ.
ಸಚಿನ್ ತೆಂಡೂಲ್ಕರ್:ನಿವೃತ್ತಿಯ ನಂತರವೂ ಕ್ರಿಕೆಟಿಗರಲ್ಲಿ ಅತ್ಯಂತ ಶ್ರೀಮಂತರಾಗಿ ಮುಂದುವರಿಯುತ್ತಿರುವ ಮಾಸ್ಟರ್ ಬಾಸ್ಟರ್ ಅವರು ತಮ್ಮದೇ ಆದ ಖಾಸಗಿ ಜೆಟ್ ಹೊಂದಿದ್ದಾರೆ 120 ಮಿಲಿಯನ್ ಡಾಲರ್ ನೆಟ್ ವರ್ತ್ ಹೊಂದಿರುವ ಸಚಿನ್ 260 ಕೋಟಿ ಬೆಲೆಯ ಜೆಟ್ ಮಾಲೀಕರು.
ಎಂ.ಎಸ್.ಧೋನಿ:ಈಗಿನ ಕ್ರಿಕೆಟಿಗರಲ್ಲಿ ಭಾರತದ ಮಾಜಿ ನಾಯಕ ಅತ್ಯಂತ ಶ್ರೀಮಂತ. ಧೋನಿ ತನ್ನದೇ ಆದ ಫ್ಲೈಯಿಂಗ್ ಜೆಟ್ ಅನ್ನು ಹೊಂದಿರುತ್ತಾರೆ. ಸುಮಾರು 260 ಕೋಟಿ ಬೆಲೆಯ ಜೆಟ್ ಅವರ ಹೋಮ್ ಟೌನ್ ರಾಂಚಿಯ ವಿಮಾನ ನಿಲ್ದಾಣದಲ್ಲಿರುತ್ತದೆ.
ಕಪಿಲ್ ದೇವ್:ಲೆಜೆಂಡರಿ ಕ್ಯಾಪ್ಟನ್ ಕಪೀಲ್‌ದೇವ್ ಸ್ವಂತ ವಿಮಾನವನ್ನು ಹೊಂದಿದ್ದಾರೆ. ಈ ಕ್ರೀಡೆಯ ಮೂಲಕ ಲಕ್ಷಾಂತರ ಸಂಪಾದಿಸಿದರೂ, ಎಂಡೋಸ್ಮೆಂಟ್ ಮತ್ತು ಟಿವಿ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಹಣ ಗಳಿಸಲು ಅವಕಾಶ ಮಾಡಿಕೊಟ್ಟಿವೆ. ಅವರ ನಿವ್ವಳ ಮೌಲ್ಯ 30 ಮಿಲಿಯನ್ ಡಾಲರ್.
ವಿರಾಟ್ ಕೊಹ್ಲಿ:ಪ್ರಸ್ತುತ ಭಾರತೀಯ ನಾಯಕ ಇತ್ತೀಚೆಗೆ ಈ ಲಿಸ್ಟ್‌ಗೆ ಸೇರಿರುವ ಭಾರತೀಯ ಕ್ರಿಕೆಟಿಗ. ಸದ್ಯದ ಕ್ರಿಕೆಟಿಗರಲ್ಲಿ ಎರಡನೆಯ ಶ್ರೀಮಂತ, ಕೊಹ್ಲಿ ಬಾಲಿವುಡ್ ನಟಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಈ ವರ್ಷದ ಆರಂಭದಲ್ಲಿ ತನ್ನ ಜೆಟ್‌ನಲ್ಲಿ ನ್ಯೂಜಿಲೆಂಡ್‌ಗೆ ಹೋಗಿರುವುದು ವರದಿಯಾಗಿತ್ತು. ಇದರ ಬೆಲೆ ಸುಮಾರು 125 ಕೋಟಿ.