6 ಪಂದ್ಯ ಸೋತಿರುವ ಧೋನಿ ಸೈನ್ಯಕ್ಕೆ ಇನ್ನೂ ಇದೆ ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶ!

First Published | Oct 18, 2020, 6:04 PM IST

ಪ್ರತಿ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದೆ. ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ಹಾಗೂ ಯಶಸ್ವಿ ತಂಡ ಎಂದು ಗುರುತಿಸಿಕೊಂಡಿರುವ ಚೆನ್ನೈಗೆ ಈ ಬಾರಿ ಎಲ್ಲವೂ ಕೈಕೊಡುತ್ತಿದೆ. ಗೆಲುವು ಮರೀಚಿಕೆಯಾಗುತ್ತಿದೆ. ಈಗಾಗಲೇ ಚೆನ್ನೈ 6 ಪಂದ್ಯ ಸೋತು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹಾಗಂತ ಧೋನಿ ಅಭಿಮಾನಿಗಳು ಬೇಸರ ಪಡಬೇಕಿಲ್ಲ. ಕಾರಣ ಪ್ಲೇ ಆಫ್ ಸ್ಥಾನಕ್ಕೇರಲು ಸಿಎಸ್‌ಕೆ ತಂಡಕ್ಕೆ ಇನ್ನು ಅವಕಾಶವಿದೆ.
 

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿದೆ. ಹೀಗಾಗಿ ಮೇಲಿಂದ ಮೇಲೆ ಸೋಲು ಕಾಣುತ್ತಿದೆ.
ಸಿಎಸ್‌ಕೆ ತಂಡದ ಪ್ರದರ್ಶನ ಅಭಿಮಾನಿಗಳ ಬೇಸರಕ್ಕೆ ಕಾಣವಾಗಿದೆ. ಆದರ ನಿರಾಸೆ ಪಡಬೇಕಾದ ಅಗತ್ಯವಿಲ್ಲ. ಕಾರಣ ಸಿಎಸ್‌ಕೆ ತಂಡಕ್ಕೆ ಇನ್ನೂ ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶವಿದೆ.
Tap to resize

ಸಿಎಸ್‌ಕೆ ತಂಡದ ಪ್ರದರ್ಶನ ಅಭಿಮಾನಿಗಳ ಬೇಸರಕ್ಕೆ ಕಾಣವಾಗಿದೆ. ಆದರ ನಿರಾಸೆ ಪಡಬೇಕಾದ ಅಗತ್ಯವಿಲ್ಲ. ಕಾರಣ ಸಿಎಸ್‌ಕೆ ತಂಡಕ್ಕೆ ಇನ್ನೂ ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶವಿದೆ.
ಸಿಎಸ್‌ಕೆ ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು 5 ಪಂದ್ಯಗಳು ಬಾಕಿ ಇವೆ. ಈ 5 ಪಂದ್ಯದಲ್ಲಿ ಸಿಎಸ್‌ಕೆ ಗೆಲುವು ದಾಖಲಿಸಿದರೆ ಧೋನಿ ಸೈನ್ಯದ ಒಟ್ಟು ಅಂಕ 16 ಆಗಲಿದೆ. ಹೀಗಾದಲ್ಲಿ ಟಾಪ್ 4‌ಗೆ ಲಗ್ಗೆ ಇಡಲಿದೆ.
ಇತರ ತಂಡದ ಪ್ರದರ್ಶನ ಕೂಡ ಇಲ್ಲಿ ಮುಖ್ಯಾಗುತ್ತದೆ. ಮುಂಬರುವ 5 ಪಂದ್ಯದಲ್ಲಿ ಒಂದು ಪಂದ್ಯ ಸೋತರೆ ಸಿಎಸ್‌ಕೆ ಒಟ್ಟು ಅಂಕ 14 ಆಗಲಿದೆ. ಹೀಗಾದಲ್ಲಿ ಸಿಎಸ್‌ಕೆ ತಂಡಕ್ಕೆ ಪ್ಲೇ ಆಫ್ ಸ್ಥಾನಕ್ಕೇರಲು ಕೊನೆಯ ಅವಕಾಶವೊಂದಿದೆ.
4 ಗೆಲುವುಗಳನ್ನು ಅತ್ಯುತ್ತಮ ನೆಟ್ ರನ್ ರೇಟ್ ತಂದುಕೊಡುವಂತಿರಬೇಕು. ಭಾರಿ ಅಂತರದ ಗೆಲವು, ಭರ್ಜರಿ ಗೆಲುವು ಚೆನ್ನೈ ತಂಡಕ್ಕೆ ಅವಶ್ಯಕವಾಗಲಿದೆ. ಈ ರೀತಿ ಆದಲಿಲ್ಲಿ, ಇತರ ತಂಡಕ್ಕಿಂತ ಉತ್ತಮ ರನ್‌ರೇಟ್‌ನೊಂದಿಗೆ ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶವಿದೆ.
ತಂಡಗಳು ಸಮನಾದ ಅಂಕ ಪಡೆದಾಗ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಡಲು ನೆಟ್ ರನ್‌ರೇಟ್ ಅತೀ ಅವಶ್ಯಕವಾಗಲಿದೆ. ಲೀಗ್ ಟೂರ್ನಿಯ ಅಂತಿಮ ಹಂತದಲ್ಲಿ ನೆಟ್ ರನ್‌ರೇಟ್ ಲೆಕ್ಕಾಚಾರ ಜೋರಾಗಿ ನಡೆಯುತ್ತವೆ.
ಸಿಎಸ್‌ಕೆ ತಂಡ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೋರಾಟ ನಡೆಸಲಿದೆ. ಅಕ್ಟೋಬರ್ 19ರಂದು ಅಬು ಧಾಬಿಯಲ್ಲಿ ನಡೆಯಲಿರುವ ಈ ಪಂದ್ಯ ಸಿಎಸ್‌ಕೆ ತಂಡಕ್ಕೆ ಮಹತ್ವದ್ದಾಗಿದೆ.

Latest Videos

click me!