ಬೆಂಗಳೂರು: 2013ರ ಏಪ್ರಿಲ್ 23 ಚುಟುಕು ಕ್ರಿಕೆಟ್‌ನಲ್ಲಿ ಕ್ರಿಸ್ಟೋಪರ್ ಹೆನ್ರಿ ಗೇಲ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಅಜೇಯ 175 ರನ್ ಬಾರಿಸಿದ್ದು ಇದುವರೆಗೂ ಮುರಿಯಲಾಗದ ದಾಖಲೆಯಾಗಿಯೇ ಉಳಿದಿದೆ.
ಕ್ರಿಸ್ ಗೇಲ್ ಆ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಗೇಲ್ ಸಿಡಿಲಬ್ಬರದ ಇನಿಂಗ್ಸ್‌ಗೆ ಹಲವಾರು ದಾಖಲೆಗಳು ದೂಳೀಪಟವಾಗಿದ್ದವು. 7 ವರ್ಷಗಳ ಹಿಂದಿನ ಆ ಪಂದ್ಯ ಹೇಗಿತ್ತು ಎನ್ನುವುದರ ಕ್ವಿಕ್ ಝಲಕ್ ಇಲ್ಲಿದೆ ನೋಡಿ.