RCB ವಿರುದ್ಧ ಶತಕ ಬಾರಿಸಿ, ಚಿನ್ನದಂತ ಮಾತನಾಡಿದ ಕನ್ನಡಿಗ ಕೆ ಎಲ್ ರಾಹುಲ್..!

First Published | Oct 21, 2020, 1:45 PM IST

ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈಗಾಗಲೇ 10 ಇನಿಂಗ್ಸ್ ಆಡಿರುವ ಕೆ ಎಲ್ ರಾಹುಲ್ 540 ರನ್ ಬಾರಿಸಿದ್ದು, ಈಗಾಗಲೇ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.


ಇನ್ನು ರಾಹುಲ್ ಈ ಆವೃತ್ತಿಯಲ್ಲಿನ ತಮ್ಮ ಬೆಸ್ಟ್ ಇನಿಂಗ್ಸ್ ಹಾಗೂ ಆರ್‌ಸಿಬಿ ಫ್ರಾಂಚೈಸಿ ಬಗ್ಗೆ ಮುತ್ತಿನಂಥ ಮಾತನಾಡಿದ್ದಾರೆ. ಪಂಜಾಬ್ ತಂಡದ ನಾಯಕರೂ ಆಗಿರುವ ಕರ್ನಾಟದ ಬ್ಯಾಟ್ಸ್‌ಮನ್ ಆರ್‌ಸಿಬಿ ಬಗ್ಗೆ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಲೀಲಾಜಾಲವಾಗಿ ರನ್ ಬಾರಿಸುತ್ತಿದ್ದಾರೆ.
ಮೊದಲ 10 ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ 67.50 ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಹಾಗೂ 1 ಶತಕ ಸಹಿತ 540 ರನ್ ಬಾರಿಸಿ ಟೂರ್ನಿಯಲ್ಲಿ ಸದ್ಯ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
Tap to resize

ಇದರ ಜತೆಗೆ ಸತತ ಮೂರು ಐಪಿಎಲ್‌ ಆವೃತ್ತಿಗಳಲ್ಲಿ 500+ ರನ್ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೂ ರಾಹುಲ್ ಭಾಜನರಾಗಿದ್ದಾರೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬಾರಿಸಿದ ಶತಕ ಈ ಆವೃತ್ತಿಯಲ್ಲಿ ನನ್ನ ಪಾಲಿನ ಅವಿಸ್ಮರಣೀಯ ಕ್ಷಣವೆಂದು ರಾಹುಲ್ ಬಣ್ಣಿಸಿದ್ದಾರೆ.
ಈ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ಶತಕ ಬಾರಿಸಿದ್ದು ನನ್ನ ನೆಚ್ಚಿನ ಕ್ಷಣ. ಆದರೆ ನೀವು ನೋಡಿರಬಹುದು ಶತಕ ಬಾರಿಸಿದಾಗ ನಾನು ಆ ಕ್ಷಣವನ್ನು ಸಂಭ್ರಮಿಸಲಿಲ್ಲ.
ಯಾಕೆಂದರೆ ಆರ್‌ಸಿಬಿ ತಂಡವನ್ನು ನಾನು ಇಷ್ಟಪಡುತ್ತೇನೆ ಎಂದು ಕರ್ನಾಟಕದ ಕ್ರಿಕೆಟಿಗ ಬೆಂಗಳೂರು ಮೂಲದ ಫ್ರಾಂಚೈಸಿ ಮೇಲಿನ ಅಭಿಮಾನವನ್ನು ಜಗಜ್ಜಾಹೀರು ಪಡಿಸಿದ್ದಾರೆ
ನಾನು ಆರ್‌ಸಿಬಿ ತಂಡವನ್ನು ಇಷ್ಟಪಡಲು ಕಾರಣ, ನನ್ನ ಆರಂಭಿಕ ದಿನಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ನಾನು ಬೆಳೆಯಲು ಎಲ್ಲಾ ರೀತಿಯ ಅವಕಾಶವನ್ನು ನೀಡಿದೆ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ತಿಳಿಸಿದ್ದಾರೆ.
ಮಂಗಳೂರು ಮೂಲದ ರಾಹುಲ್ ಬೆಂಗಳೂರು ಫ್ರಾಂಚೈಸಿ ಮೇಲಿನ ಅಭಿಮಾನದ ಮಾತುಗಳು ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದೆ
2013ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿ ಕೆ.ಎಲ್ ರಾಹುಲ್ ಅವರನ್ನು ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆಗಿ ಖರೀದಿಸಿತ್ತು.
ಇನ್ನು 2014ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಒಂದು ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ಆ ಬಳಿಕ ಮತ್ತೆ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡು, 2016ನೇ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 397 ರನ್ ಬಾರಿಸಿ ಆರ್‌ಸಿಬಿ ಪರ ಮೂರನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
ಇನ್ನು 2017ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭುಜದ ನೋವಿನ ಸಮಸ್ಯೆಯಿಂದ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ.
ಬಳಿಕ 2018ನೇ ಆವೃತ್ತಿಯ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಕಿಂಗ್ಸ್‌ ಇಲೆವನ್ ಫ್ರಾಂಚೈಸಿ 11 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆ.ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಇದೀಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ಜಯದ ಹಳಿಗೆ ಮರಳಿದೆ.
ಸದ್ಯ ಪಂಜಾಬ್ ತಂಡ ಟೂರ್ನಿಯಲ್ಲಿ 4 ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಟಾಪ್ 3 ಸ್ಥಾನದಲ್ಲಿರುವ ಡೆಲ್ಲಿ, ಮುಂಬೈ ಹಾಗೂ ಆರ್‌ಸಿಬಿ ವಿರುದ್ಧ ರಾಹುಲ್ ಪಡೆ ಗೆದ್ದು ಬೀಗಿದೆ.

Latest Videos

click me!