ಧೋನಿ - ಧವನ್: PUBGಗೆ ಆಡಿಕ್ಟ್‌‌ ಆಗಿರುವ ಭಾರತೀಯ ಕ್ರಿಕೆಟಿಗರು !

First Published Oct 20, 2020, 5:15 PM IST

PUBG ಆನ್‌ಲೈನ್ ಮಲ್ಟಿಪ್ಲೇಯರ್ ಗೇಮ್  ಇಡೀ ಪ್ರಪಂಚದಲ್ಲೇ ಫೇಮಸ್‌.  ಎಲ್ಲ ವಯಸ್ಸಿನ ಹಾಗೂ  ಬಹುತೇಕ ಎಲ್ಲಾ ವರ್ಗದ ಜನರು ಈ  ಆಟದ ವ್ಯಾಮೋಹಕ್ಕೆ ಒಳಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ,  ಕೆಲವು ಭಾರತೀಯ ಕ್ರಿಕೆಟಿಗರು ಸಹ ಈ ರೋಚಕ ಆಟಕ್ಕೆ ಆಡಿಕ್ಟ್‌ ಆಗಿದ್ದಾರೆ.  ಬಿಡುವಿನ ವೇಳೆಯಲ್ಲಿ PUBG ಆಡಿದ ಕೆಲವು ಭಾರತೀಯ ಕ್ರಿಕೆಟಿಗರು ಇವರುಗಳು.
 

PUBG ಮೊಬೈಲ್‌ ಗೇಮ್‌ಗೆ ಯಾವುದೇ ವಯಸ್ಸಿನ ಭೇದವಿಲ್ಲದೆ ವಿಶ್ವದಾದಂತ್ಯ ಲೆಖ್ಖವಿಲ್ಲದಷ್ಟು ಜನ ಅಡಿಕ್ಟ್ ಆಗಿದ್ದಾರೆ. ಧೋನಿಯಿಂದ ಶಿಖರ್‌ ಧವನ್‌ ವರೆಗೆ ಈ ಪಟ್ಟಿಯಲ್ಲಿ ಟೀಮ್‌ ಇಂಡಿಯಾದ ಆಟಗಾರರು ಇದ್ದಾರೆ.
undefined
ಕೆಲವು ಭಾರತೀಯ ಕ್ರಿಕೆಟಿಗರು ಸಹ ಈ ರೋಚಕ ಆಟಕ್ಕೆ ಆಡಿಕ್ಟ್‌ ಆಗಿದ್ದಾರೆ. ಬಿಡುವಿನ ವೇಳೆಯಲ್ಲಿ PUBG ಆಡಿದ ಕೆಲವು ಭಾರತೀಯ ಕ್ರಿಕೆಟಿಗರು ಇವರುಗಳು.
undefined
ಎಂ.ಎಸ್.ಧೋನಿ :ಕ್ಯಾಪ್ಟನ್ ಕೂಲ್' ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಈ ಆಟವನ್ನು ಕೇದಾರ್ ಜಾಧವ್ ಮೂಲಕ ಡೌನ್‌ಲೋಡ್ ಮಾಡಿದ ಭಾರತೀಯ ತಂಡದ ಮೊದಲ ಸದಸ್ಯರಲ್ಲಿ ಒಬ್ಬರು. ಇವರಿಬ್ಬರು ಸಿಎಸ್‌ಕೆ ಪರ ಆಡುತ್ತಾರೆ.
undefined
ನುಗ್ಗಲು ಇಷ್ಟಪಡುವ ಆಕ್ರಮಣಕಾರಿ ಆಟಗಾರ ಧೋನಿ 2018 ರಲ್ಲಿ ಈ ಆಟ ಆಡಲು ಶುರಮಾಡಿದ್ದು . ಆ ಸಮಯದಲ್ಲಿ ಕೇದಾರ, ಚಹಲ್, ಧವನ್ ಮುಂತಾದವರು ಇನ್ನೂ ಸಾಮಾನ್ಯ ಆಟಗಾರರಾಗಿದ್ದರು, ಧೋನಿ ಡಿನ್ನರ್ ನಂತರ ಅಥವಾ ಪ್ರಯಾಣ ಮಾಡುವಾಗ PUBG ಆಡುತ್ತಿದ್ದರು.
undefined
ಯುಜ್ವೇಂದ್ರ ಚಾಹಲ್ :2018 ರಲ್ಲಿ ಈ ವರ್ಚುವಲ್ ಗೇಮ್‌ ಅನ್ನು ಶುರಮಾಡಿಕೊಂಡ ಸ್ಪಿನ್ನರ್, ಕೇದಾರ್ ಜಾಧವ್ ನಂತರ ಎರಡನೇ ಅತ್ಯಂತ ಸಕ್ರಿಯ ಆಟಗಾರನೆಂದು ಪರಿಗಣಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವಾಗ ಆಟವಾಡುವ ಚಾಹಲ್‌ ಜಾಧವ್‌ ಜೊತೆಯ ಆಟ ಆರುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ.ಅವರು ಯಾವಾಗಲೂ ಒಟ್ಟಿಗೆ ಆಡುತ್ತಾರೆ, ರಾತ್ರಿಯೂ ಸಹ ರೂಮ್‌ಮೇಟ್‌ ಆಗಿರದಿದ್ದರೆ ಹೋಟೆಲ್ ಲಾಬಿಗೆ ಹೋಗಿ ಆಡುತ್ತಾರೆ ಎಂದು ಯಾಹೂ ಕ್ರಿಕೆಟ್‌ ವರದಿ ಹೇಳುತ್ತದೆ
undefined
ದೀಪಕ್ ಚಹರ್:ಭಾರತೀಯ ಸೀಮರ್‌ಗೆದೀಪಕ್ ಚಹರ್‌ಗೂ ಪಬ್‌ಜಿ ಬಗ್ಗೆ ಸಾಕಷ್ಟು ಮೋಹವಿದೆ. ಲಾಕ್‌ಡೌನ್ ಸಮಯದಲ್ಲಿ ಧೋನಿಯು PUBG ಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಹಾಗೂ ಈಗ ಕಾಲ್ ಆಫ್ ಡ್ಯೂಟಿ ಆಟದ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ ಎಂದು ಚಹರ್‌ ಬಹಿರಂಗಪಡಿಸಿದರು.
undefined
ಶಿಖರ್ ಧವನ್:ಹಾರ್ಡ್‌ ಹಿಟ್ಟರ್ ಧವನ್‌ ಶಮಿಯ ಜೊತೆಗೆ ಈ ಆಟವನ್ನು ಶುರು ಮಾಡಿದರು. ತಮ್ಮ ಹೆಂಡತಿಯ ಜೊತೆ ಸಹ ಈ ಆಟ ಆಡುತ್ತಾರೆ ಎಂದು ತಿಳಿದುಬಂದಿದೆ. ಏರ್‌ಪೋರ್ಟ್‌ನಲ್ಲಿ ಆಗಾಗ್ಗೆ ಚಹಲ್, ಜಾಧವ್ ಮತ್ತು ಶಮಿ ಜೊತೆ ಧವನ್‌ ಪಬ್‌ಜಿ ಆಟದಲ್ಲಿ ಮುಳುಗಿರುತ್ತಾರೆ.
undefined
ಮನೀಶ್ ಪಾಂಡೆ:ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಪಬ್‌ ಜಿಯ ಕಟ್ಟ ಅಭಿಮಾನಿ. ಇದನ್ನು ಅವರ ಪಾರ್ಟ್‌ನರ್‌ ಕುಲದೀಪ್ ಯಾದವ್ ಬಹಿರಂಗ ಪಡಿಸಿದ್ದಾರೆ.
undefined
ಮೊಹಮ್ಮದ್ ಶಮಿ:PUBGಯನ್ನು ಮೊದಲು ತನ್ನ ಸಹೋದರರ ಜೊತೆ ಆಡಿದ ಶಮಿ , ಜಾಧವ್ ಸಹಾಯದಿಂದ ತಡವಾಗಿ ಸಹ ಆಟಗಾರ ಜೊತೆ ಸೇರಿಕೊಂಡರು . ಟೀಮ್‌ಮೇಟ್‌ಗಳು ಶಮಿಯನ್ನು 'ಟ್ಯಾಬ್ ಪ್ಲೇಯರ್' ಎಂದು ಕರೆಯುತ್ತಾರೆ.
undefined
ಕೇದಾರ್ ಜಾಧವ್ :ಮಹಾರಾಷ್ಟ್ರದ ಮೂಲದ ಕೇದಾರ್ ಜಾಧವ್ ಅವರು 2018 ರ ಆರಂಭದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪಬ್ಜಿ ಮೊಬೈಲ್‌ ಗೇಮ್‌ಗೆ ಪರಿಚಯಿಸಿದ್ದಾರೆಂದು ತಿಳಿದುಬಂದಿದೆ. ಆಗಾಗ್ಗೆ ಆಟಗಾರರು ಅವರನ್ನು 'ಇನ್-ಗೇಮ್ ಲೀಡರ್' ಎಂದು ಕರೆಯುತ್ತಾರೆ. ಅತ್ಯಂತ ಅನುಭವಿ PUBG ಆಟಗಾರನೆಂದು ಪರಿಗಣಿಸಲ್ಪಟ್ಟ ಅವರು ಈ ಆಟದಲ್ಲಿ ಇತರ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ.
undefined
ಜಾಧವ್ ಅವರ ಸಲಹೆಯ ಮೇರೆಗೆ ಶಿಖರ್ ಧವನ್ ಮತ್ತು ಯುಜ್ವೇಂದ್ರ ಚಾಹಲ್ ಆಟ ಆಡಲು ಒಳ್ಳೆಯ ಡಿಸ್ಪೇ ಇರುವ ಪ್ಯಾಡ್‌ಗಳನ್ನು ಖರೀದಿಸಿದ್ದರಂತೆ.
undefined
ಯಾಹೂ ಕ್ರಿಕೆಟ್ ಸೋರ್ಸ್‌ ಪ್ರಕಾರ 'ಅವರು ಫ್ರೀ ಟೈಮ್‌ ಸಿಕ್ಕಾಗಲೆಲ್ಲಾ ಪಬ್‌ಜಿಯನ್ನು ಆಡುತ್ತಿದ್ದರು. ಇತರ ಸದಸ್ಯರು ಕುತೂಹಲದಿಂದ ಇದನ್ನು ಪ್ರಯತ್ನಿಸಿದರು, ಶಮಿ ಸಹ ಇವರ ಮೂಲಕ ಆಟವನ್ನು ಆಡಲು ಪ್ರೇರೇಪಿಸಲ್ಪಟ್ಟರು. ಕೇದಾರ್ ಅವರ ಸಿಎಸ್‌ಕೆ ತಂಡದ ಸಹ ಆಟಗಾರರೊಂದಿಗೆ ಆಡುತ್ತಾರೆ ಹಾಗೂ ಧೋನಿ ಈ ಆಟದ ಹುಚ್ಚನ್ನು ಜಾಧವ್‌ನಿಂದಲೇ ಅಂಟಿಸಿಕೊಂಡರು'.
undefined
click me!