ಗಾಯದ ಮೇಲೆ ಮತ್ತೊಂದು ಬರೆ; ಐಪಿಎಲ್ ಟೂರ್ನಿಯಿಂದ ಭುವನೇಶ್ವರ್ ಕುಮಾರ್ ಔಟ್..!

First Published | Oct 5, 2020, 6:44 PM IST

ಶಾರ್ಜಾ: 2016ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಅರಬ್ಬರ ನಾಡಿನಲ್ಲಿ ಗೆಲುವಿಗಾಗಿ ಸಾಕಷ್ಟು ಪರದಾಡುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಡೇವಿಡ್ ವಾರ್ನರ್ ನೇತೃತ್ವದ ತಂಡ ಸ್ಥಿರ ಪ್ರದರ್ಶನ ತೋರಲು ಯಡವುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನತ್ತ ಮುಖಮಾಡಿದ್ದ ಹೈದರಾಬಾದ್ ತಂಡ ಕೊನೆಯ ಕ್ಷಣದಲ್ಲಿ ಮುಗ್ಗರಿಸಿದೆ.
ಈ ಸೋಲಿನ ಆಘಾತದಿಂದ ಹೊರಬರುವ ಮುನ್ನವೇ ಹೈದರಾಬಾದ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 
 

ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿಗಾಗಿ ಪರಿತಪಿಸುತ್ತಿದೆ
undefined
ಇಲ್ಲಿಯವರೆಗೆ(ಅ.05) ಸನ್‌ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಗೆಲುವು ದಾಖಲಿಸಿದ್ದರೆ, ಮೂರು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದೆ.
undefined

Latest Videos


ಟೂರ್ನಿಯ ಆರಂಭದಲ್ಲೇ ತಂಡದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಶ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು.
undefined
ಮಿಚೆಲ್ ಮಾರ್ಶ್ ಬಳಿಕ ಇದೀಗ ಹೈದರಾಬಾದ್ ತಂಡದ ಮತ್ತೋರ್ವ ಸ್ಟಾರ್ ವೇಗಿ ಹೈದರಾಬಾದ್ ತಂಡದಿಂದ ಹೊರಬಿದ್ದಿದ್ದಾರೆ.
undefined
ಹೌದು, ಹೈದರಾಬಾದ್ ತಂಡದ ಅತ್ಯಂತ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದಾಗಿ ಈ ವರ್ಷದ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
undefined
ಈ ಮೊದಲೇ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದ ಭುವನೇಶ್ವರ್ ಕುಮಾರ್, ತೊಡೆಯ ನೋವಿನಿಂದಾಗಿ ಇದೀಗ ತಂಡದಿಂದ ಹೊರಬಿದ್ದಿದ್ದಾರೆ.
undefined
ಭುವನೇಶ್ವರ್ ಕುಮಾರ್ 2 ಅಥವಾ ಮೂರನೇ ಗ್ರೇಡ್ ಗಾಯಕ್ಕೆ ತುತ್ತಾಗಿದ್ದು, ಸುಧಾರಿಸಿಕೊಳ್ಳಲು ಕನಿಷ್ಠವೆಂದರೂ 6ರಿಂದ 8 ವಾರಗಳು ಬೇಕಾಗಬಹುದು. ಹೀಗಾಗಿ ಭುವಿ ಆಸೀಸ್ ಪ್ರವಾಸದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
undefined
ಈಗಾಗಲೇ ಡೆತ್ ಓವರ್ ಬೌಲಿಂಗ್ ಸಮಸ್ಯೆ ಎದುರಿಸುತ್ತಿರುವ ಹೈದರಾಬಾದ್ ತಂಡಕ್ಕೆ ಭುವಿ ಅನುಪಸ್ಥಿತಿ ಮತ್ತಷ್ಟು ಕಾಡುವ ಸಾಧ್ಯತೆಯಿದೆ.
undefined
ಭುವನೇಶ್ವರ್ ಕುಮಾರ್ ಕೇಂದ್ರೀಯ ಗುತ್ತಿಗೆ ಹೊಂದಿರುವುದರಿಂದ ವೇಗಿಯ ಪುನಶ್ಚೇತನವನ್ನು ಬಿಸಿಸಿಐ ನೋಡಿಕೊಳ್ಳಲಿದೆ.
undefined
click me!