ದಕ್ಷಿಣ ಭಾರತದ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸಿದ್ದಾರೆ ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ..!

First Published | Oct 28, 2020, 4:19 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ ಕೋಲ್ಕತ ನೈಟ್‌ ರೈಡರ್ಸ್ ಸ್ಪಿನ್ನರ್ ವರಣ್ ಚಕ್ರವರ್ತಿ. ಚೆನ್ನೈ ಮೂಲದ ಮಾಂತ್ರಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನಕ್ಕೆ ಮನಸೋತಿರುವ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೇ ವರುಣ್ ಚಕ್ರವರ್ತಿ ಈ ಹಿಂದೆ ಸಿನಿಮಾವೊಂದರಲ್ಲಿ ನಟಿಸಿದ್ದರು ಎನ್ನುವುದು ಸಾಕಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.
 

ಮಾಂತ್ರಿಕ ಸ್ಪಿನ್ನರ್ ಖ್ಯಾತಿಯ ಕೆಕೆಆರ್ ತಂಡದ ವರುಣ್ ಚಕ್ರವರ್ತಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದೇ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡದ ಗೆಲುವಿನಲ್ಲಿ ವರುಣ್ ಚಕ್ರವರ್ತಿ ಪ್ರಮುಖ ಪಾತ್ರವಹಿಸಿದ್ದಾರೆ.
Tap to resize

ಚಕ್ರವರ್ತಿಯ ಈ ಮ್ಯಾಜಿಕಲ್ ಸ್ಪೆಲ್‌ಗೆ ಮನಸೋತ ಬಿಸಿಸಿಐ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿದೆ.
ವೃತ್ತಿಪರ ವಾಸ್ತುಶಿಲ್ಪಿಯಾಗಿದ್ದ ವರುಣ್ ಚಕ್ರವರ್ತಿ ಆ ಬಳಿಕ ಕ್ರಿಕೆಟ್‌ನತ್ತ ಆಸಕ್ತಿ ಬೆಳಸಿಕೊಂಡು ಈಗ ಮಿಸ್ಟ್ರಿ ಸ್ಪಿನ್ನರ್ ಆಗಿ ಬೆಳೆದು ನಿಂತಿದ್ದಾರೆ.
ಇದೀಗ ತಂಡದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಹಿಂದಿಕ್ಕಿ ವರುಣ್ ಚಕ್ರವರ್ತಿ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಮಾಜಿ ಮಾಸ್ತುಶಿಲ್ಪಿ ವರುಣ್ ಚಕ್ರವರ್ತಿ ಈ ಹಿಂದೆ ದಕ್ಷಿಣ ಭಾರತದ ಖ್ಯಾತ ಚಲನ ಚಿತ್ರವೊಂದರಲ್ಲಿ ನಟಿಸಿದ್ದರು ಎನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ.
ಹೌದು, 2014ರಲ್ಲಿ ತೆರೆಕಂಡ ಜೀವಾ ಎನ್ನುವ ತಮಿಳು ಚಿತ್ರದಲ್ಲಿ ವರುಣ್ ಚಕ್ರವರ್ತಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.
ವರುಣ್ ಚಕ್ರವರ್ತಿ ತಮಿಳು ಚಿತ್ರದ ನಟ ವಿಷ್ಣು (ಜೀವಾ) ಕ್ರಿಕೆಟ್ ತಂಡದ ಸಹಪಾಠಿ ಪಾತ್ರದಲ್ಲಿ ಮಿಸ್ಟ್ರಿ ಸ್ಪಿನ್ನರ್ ಕಾಣಿಸಿಕೊಂಡಿದ್ದರು.
ಈ ಸಿನಿಮಾವೂ ಹಣದ ರಾಜಕೀಯದಿಂದಾಗಿ ನಟ ವಿಷ್ಣು (ಜೀವಾ) ಅವರು ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದಿಲ್ಲ. ಇದಕ್ಕಾಗಿ ಕಷ್ಟಪಟ್ಟು ಯಶಸ್ವಿಯಾಗುವ ಕಥಾ ಹಂದರವಿರುವ ಚಿತ್ರ ಇದಾಗಿದೆ.
29 ವರ್ಷದ ವರುಣ್ ಚಕ್ರವರ್ತಿ ಸದ್ಯ 11 ಪಂದ್ಯಗಳನ್ನಾಡಿ ಕೆಕೆಆರ್ ಪರ 13 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಗೌರವವೂ ಚಕ್ರವರ್ತಿ ಪಾಲಾಗಿದೆ.

Latest Videos

click me!