22 ಎಸೆತದಲ್ಲಿ 55ರನ್ ಸಿಡಿಸಿ ಗೆಲುವಿನ ಜೊತೆಗೆ ದಾಖಲೆ ಬರೆದ ಎಬಿಡಿ!

First Published Oct 17, 2020, 8:43 PM IST

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ ಗೆಲುವು ದಾಖಲಿಸಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಗೆಲುವು ತಂದುಕೊಟ್ಟ ಡಿವಿಲಿಯರ್ಸ್ ಕೆಲ ದಾಖಲೆ ಬರೆದಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್, ಎಬಿಡಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಸೈನ್ಯಕ್ಕೆ 7 ವಿಕೆಟ್ ಗೆಲುವು
undefined
ಅಂತಿಮ 2 ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 35 ರನ್ ಅವಶ್ಯಕತೆ ಇತ್ತು. ಎಬಿ ಸ್ಫೋಟಕ ಬ್ಯಾಟಿಂಗ್‌ನಿಂದ ಆರ್‌ಸಿಬಿ 19.4 ಓವರ್‌ಗಳಲ್ಲಿ ಗುರಿ ತಲುಪಿತು.
undefined
1 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಎಬಿ ಡಿವಿಲಿಯರ್ಸ್ 22 ಎಸೆತದಲ್ಲಿ 55 ರನ್ ಸಿಡಿಸಿದರು. 250ರ ಸ್ಟ್ರೈಕ್‌ರೇಟ್‌ನಲ್ಲಿ ಎಬಿಡಿ ಬ್ಯಾಟ್ ಬೀಸಿದರು.
undefined
25ಕ್ಕಿಂತ ಕಡಿಮೆ ಎಸೆತದಲ್ಲಿ ಐಪಿಎಲ್ ಟೂರ್ನಿಯಲ್ಲಿ ಹಾಫ್ ಸೆಂಚುರಿ ಸಿಡಿಸಿದ ಪಟ್ಟಿಯಲ್ಲಿ ಇದೀಗ ಎಬಿ ಡಿವಿಲಿಯರ್ಸ್ ಅಗ್ರಸ್ಥಾನಕ್ಕೇರಿದ್ದಾರೆ. ಡೇವಿಡ್ ವಾರ್ನರ್ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
undefined
ಐಪಿಎಲ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಡೇವಿಡ್ ವಾರ್ನರ್ 25ಕ್ಕಿಂತ ಕಡಿಮೆ ಎಸೆತದಲ್ಲಿ 8 ಬಾರಿ ಅರ್ಧಶತಕ ಸಿಡಿಸಿದ್ದಾರೆ.
undefined
ಎಬಿಡಿ ಹಾಗೂ ಡೇವಿಡ್ ವಾರ್ನರ್ ಮೊದಲ ಸ್ಥಾನ ಹಂಚಿಕೊಂಡಿದ್ದರೆ, ಎರಡನೇ ಸ್ಥಾನವನ್ನು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಅಲಂಕರಿಸಿದ್ದಾರೆ
undefined
ವೇಗವಾಗಿ ಹಾಫ್ ಸೆಂಚುರಿ ಮಾತ್ರವಲ್ಲ, ರಾಜಸ್ಥಾನ ರಾಯಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ
undefined
ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಟೂರ್ನಿಯಲ್ಲಿ 4,000 ರನ್ ಪೂರೈಸಿದ್ದಾರೆ.
undefined
click me!