ಸೂಪರ್ ಓವರ್‌ ಕೂಡಾ ಟೈ ಆದ್ರೆ ಏನಾಗುತ್ತೆ..? ರೂಲ್ಸ್ ಏನು ಹೇಳುತ್ತೆ..?

First Published | Sep 29, 2020, 6:41 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಸಿಗಲಾರಂಭಿಸಿದೆ. ತಡವಾಗಿ ಐಪಿಎಲ್ ಆರಂಭವಾಗಿದ್ದರೂ ಐಪಿಎಲ್ ರೋಚಕತೆ ಮಾತ್ರ ಕಡಿಮೆಯಾಗಿಲ್ಲ.
ಈಗಾಗಲೇ 10 ಪಂದ್ಯಗಳು ನಡೆದಿದ್ದು, ಹೈ ಸ್ಕೋರಿಂಗ್ ಮ್ಯಾಚ್‌ಗಳು ನಡೆದಿವೆ, ಮತ್ತೆ ಕೆಲವು ಪಂದ್ಯಗಳು ಕೆಲವು ಕಡಿಮೆ ಮೊತ್ತದದ್ದಾರೂ ರೋಚಕತೆ ಮಾತ್ರ ಕಡಿಮೆಯಾಗಿಲ್ಲ. ಇದರ ಜತೆಗೆ ಎಲ್ಲರೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಎರಡು ಸೂಪರ್ ಓವರ್‌ಗಳು ನಡೆದಿವೆ. ಒಂದು ವೇಳೆ ಸೂಪರ್ ಓವರ್‌ ಕೂಡಾ ಟೈ ಆದರೆ ಏನಾಗುತ್ತದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ 2 ಸೂಪರ್ ಓವರ್ ಪಂದ್ಯಾವಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಐಪಿಎಲ್‌ನ ಎರಡನೇ ಪಂದ್ಯ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೊದಲ ಸೂಪರ್ ಓವರ್‌ ಪಂದ್ಯ ನಡೆದಿತ್ತು.
Tap to resize

ಕಗಿಸೋ ರಬಾಡ ಮಾರಕ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಸೂಪರ್‌ ಓವರ್‌ನಲ್ಲಿ ಪಂಜಾಬ್ ವಿರುದ್ಧ ಗೆಲುವಿನ ನಗೆ ಬೀರಿತ್ತು.
ಇದಾಗಿ 8 ದಿನ ಕಳೆಯುವಷ್ಟರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಮತ್ತೊಂದು ಸೂಪರ್ ಓವರ್ ಪಂದ್ಯಾವಳಿ ನಡೆದಿದೆ
ನವದೀಪ್ ಸೈನಿ ಮಾರಕ ದಾಳಿ, ಎಬಿಡಿ-ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಸೂಪರ್‌ ಓವರ್‌ನಲ್ಲಿ ಗೆದ್ದು ಬೀಗಿದೆ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ 2019ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲೂ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು.
ಬಳಿಕ ನಡೆದ ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ, ಹೆಚ್ಚು ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಐಸಿಸಿಯ ಈ ನಿಯಮ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಟೀಕೆಗೂ ಗುರಿಯಾಗಿತ್ತು.
ಹಾಗಿದ್ದರೆ ಒಂದು ವೇಳೆ ಐಪಿಎಲ್‌ನ ಸೂಪರ್ ಓವರ್‌ನಲ್ಲಿ ಪಂದ್ಯ ಟೈ ಆದರೆ ಏನಾಗುತ್ತೆ ಎನ್ನುವ ಕುತೂಹಲವೇ ನಿಮಗೆ. ಇಲ್ಲಿದೆ ನೋಡಿ ಉತ್ತರ.
ಒಂದು ವೇಳೆ ಸೂಪರ್ ಓವರ್ ಕೂಡಾ ಟೈ ಆದರೆ ಮತ್ತೊಮ್ಮೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಗುತ್ತದೆ. ಆ ಓವರ್ ಕೂಡಾ ಟೈ ಆದರೆ ಮತ್ತೆ ಸೂಪರ್ ಓವರ್ ಆಡಿಸಲಾಗುತ್ತದೆ. ಹೀಗೆ ಒಂದು ತಂಡ ಮತ್ತೊಂದು ತಂಡಕ್ಕಿಂತ ಜಾಸ್ತಿ ರನ್ ಬಾರಿಸುವವರೆಗೂ ಸೂಪರ್ ಓವರ್ ಆಡಿಸಲಾಗುತ್ತದೆ.

Latest Videos

click me!