ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!

Suvarna News   | Asianet News
Published : Feb 22, 2020, 05:17 PM ISTUpdated : Feb 23, 2020, 10:29 AM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಐಪಿಎಲ್ ಕಪ್ ಕಳೆದ 12 ವರ್ಷಗಳಿಂದ ಗಗನ ಕುಸುಮವಾಗಿಯೇ ಉಳಿದಿದೆ. 'ಈ ಸಲ ಕಪ್ ನಮ್ದೇ' ಎಂದು ಅಭಿಮಾನಿಗಳು ಹುರಿದುಂಬಿಸಿದ್ದೊಂದೇ ಬಂತು. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. ಇದೀಗ ಮಾರ್ಚ್ 29ರಿಂದ 13ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಒಂದು ವೇಳೆ ಕೊಹ್ಲಿ ಕೆಲ ಪಂದ್ಯಗಳ ಮಟ್ಟಿಗೆ ವಿಶ್ರಾಂತಿ ಬಯಸಿದರೆ, ಇಲ್ಲವೇ ಗಾಯಗೊಂಡರೆ ಈ ನಾಲ್ವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಬಹುದು. ಯಾರು ಆ ನಾಲ್ವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
112
ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!
1. ಆ್ಯರೋನ್ ಫಿಂಚ್
1. ಆ್ಯರೋನ್ ಫಿಂಚ್
212
ಆಸ್ಟ್ರೇಲಿಯಾ ತಂಡದ ಸೀಮಿತ ಓವರ್‌ಗಳ ನಾಯಕನಾಗಿ ಅನುಭವವಿದೆ. ಆ್ಯರೋನ್ ಫಿಂಚ್ ನಾಯಕತ್ವದಲ್ಲಿ ಆಸೀಸ್ ಅದ್ಭುತ ಪ್ರದರ್ಶನ ತೋರುತ್ತಿದೆ.

312
ಬಿಗ್ ಬ್ಯಾಶ್ ಲೀಗ್‌ನಲ್ಲೂ ಆ್ಯರೋನ್ ಫಿಂಚ್ ನಾಯಕನಾಗಿ 2018-19ರಲ್ಲಿ ಮೆಲ್ಬೊರ್ನ್ ರೆನೆಗೇಡ್ಸ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು.

412
2. ಎಬಿ ಡಿವಿಲಿಯರ್ಸ್
2. ಎಬಿ ಡಿವಿಲಿಯರ್ಸ್
512
ಎಬಿ ಡಿವಿಲಿಯರ್ಸ್ 2011ರಿಂದ 2017ರವರೆಗೆ ವಿವಿಧ ಹಂತಗಳಲ್ಲಿ ತಂಡಗಳನ್ನು ಮುನ್ನಡೆಸಿದ ಅನುಭವವಿದೆ.

612
2011ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿರುವ ಎಬಿಡಿ ಬೆಂಗಳೂರು ತಂಡವನ್ನು ಮುನ್ನಡೆಸಲು ಉತ್ತಮ ಆಯ್ಕೆಯಾಗಬಲ್ಲರು.

712
3. ಪಾರ್ಥಿವ್ ಪಟೇಲ್
3. ಪಾರ್ಥಿವ್ ಪಟೇಲ್
812
ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಅನುಭವಿ ಆಟಗಾರರಲ್ಲಿ ಪಾರ್ಥಿವ್ ಕೂಡಾ ಒಬ್ಬರು. ವಿವಿಧ ತಂಡಗಳ ಪರ ಆಡಿದ ಅನುಭವ ಪಟೇಲ್‌ಗೆ ಇದೆ.

912
ದೇಸಿ ಕ್ರಿಕೆಟ್‌ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ ಅನುಭವ ಇರುವ ಪಾರ್ಥಿವ್, 2016-17ನೇ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

1012
4. ಮೊಯಿನ್ ಅಲಿ
4. ಮೊಯಿನ್ ಅಲಿ
1112
ಅನುಭವಿ ಆಲ್ರೌಂಡರ್, ಡೊಮೆಸ್ಟಿಕ್ ವಿಭಾಗದಲ್ಲಿ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸಿದ ಅನುಭವ

1212
ಟಿ10 ಲೀಗ್‌ನಲ್ಲಿ ಟೀಂ ಅಬುದಾಬಿ ಮುನ್ನಡೆಸಿರುವ ಅಲಿ, 100 ಬಾಲ್ ಟೂರ್ನಿಯಲ್ಲಿ ಬರ್ಮಿಂಗ್‌ಹ್ಯಾಂ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

click me!

Recommended Stories