IPL 2020: ಇವರೇ ನೋಡಿ ಪ್ರತಿ ತಂಡದ ಗೇಮ್ ಚೇಂಜರ್‌ಗಳು..!

First Published Feb 19, 2020, 6:10 PM IST

ಬೆಂಗಳೂರು: ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೊಡಿಬಡಿ ಆಟ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಮಾರ್ಚ್ 29ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲೂ ಕೆಲ ವಿದೇಶಿ ಆಟಗಾರರು ಏಕಾಂಗಿಯಾಗಿ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರತಿ ತಂಡದಲ್ಲಿರುವ ಒಬ್ಬ ಗೇಮ್ ಚೇಂಜರ್‌ಗಳ ಪರಿಚಯವನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಸ್ಯಾಮ್ ಕರ್ರನ್: ಚೆನ್ನೈ ಸೂಪರ್ ಕಿಂಗ್ಸ್
undefined
ಇಂಗ್ಲೆಂಡ್ ಯುವ ವೇಗಿ ಈ ಬಾರಿ ಸಿಎಸ್‌ಕೆ ತಂಡ ಕೂಡಿಕೊಂಡಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್ ಆಗಿಯೂ ತಂಡಕ್ಕೆ ಉಪಯುಕ್ತವಾಗಬಲ್ಲರು. ಚೆಪಾಕ್ ಮೈದಾನ ಸ್ಯಾಮ್‌ಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಧೋನಿ ಪಾಳಯದಲ್ಲಿ ಮಿಂಚುವ ಸಾಧ್ಯತೆಯಿದೆ.
undefined
ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್
undefined
ಕಿವೀಸ್ ಎಡಗೈ ಮಾರಕ ವೇಗಿ ಟ್ರೆಂಟ್ ಬೌಲ್ಟ್ ಈ ಬಾರಿ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ. ಡೆತ್ ಓವರ್‌ನಲ್ಲಿ ಮಾರಕ ದಾಳಿ ನಡೆಸುವ ಕ್ಷಮತೆ ಹೊಂದಿರುವ ಬೌಲ್ಟ್ ಎದುರಾಳಿ ಪಡೆಯ ಮೇಲೆ ಸವಾರಿ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
undefined
ಇಯಾನ್ ಮಾರ್ಗನ್: ಕೋಲ್ಕತಾ ನೈಟ್‌ ರೈಡರ್ಸ್
undefined
ಇಂಗ್ಲೆಂಡ್‌ಗೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್, ಕೆಕೆಆರ್ ಪಾಲಿಗೆ ಆಪತ್ಭಾಂದವ ಆಗುವ ಸಾಧ್ಯತೆಯಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಮಾರ್ಗನ್ ರನ್ ಹೊಳೆ ಹರಿಸುವ ನಿರೀಕ್ಷೆಯಿದೆ.
undefined
ಜೋಸ್ ಬಟ್ಲರ್: ರಾಜಸ್ಥಾನ ರಾಯಲ್ಸ್
undefined
ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಈ ಬಾರಿಯೂ ರಾಜಸ್ಥಾನ ರಾಯಲ್ಸ್ ಪಾಲಿಗೆ ಗೇಮ್‌ ಚೇಂಜರ್ ಆಗಬಲ್ಲ ಆಟಗಾರ. ಏಕಾಂಗಿಯಾಗಿ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಬಟ್ಲರ್‌ಗಿದೆ.
undefined
ಗ್ಲೆನ್ ಮ್ಯಾಕ್ಸ್‌ವೆಲ್: ಕಿಂಗ್ಸ್ ಇಲೆವನ್ ಪಂಜಾಬ್
undefined
ಆಸೀಸ್ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಈ ಬಾರಿ ಪಂಬಾಬ್ ಪಾಲಿಗೆ ಆಪತ್ಭಾಂದವ ಆಗಲಿದ್ದಾರೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮಿಂಚಿರುವ ಮ್ಯಾಕ್ಸ್‌ವೆಲ್, ಐಪಿಎಲ್ ಟೂರ್ನಿಯಲ್ಲೂ ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.
undefined
ಶಿಮ್ರೊನ್ ಹೆಟ್ಮೇಯರ್: ಡೆಲ್ಲಿ ಕ್ಯಾಪಿಟಲ್ಸ್
undefined
ವಿಂಡೀಸ್ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಹೆಟ್ಮೇಯರ್ ಪಂದ್ಯದ ಪಲಿತಾಂಶವನ್ನೇ ಬದಲಿಸಬಲ್ಲ ಆಟಗಾರ. ಚೆಂಡನ್ನು ಅನಾಯಾಸವಾಗಿ ಸಿಕ್ಸರ್‌ಗೆ ಅಟ್ಟಬಲ್ಲ ಸಾಮರ್ಥ್ಯವಿರುವ ಹೆಟ್ಮೇಯರ್ ಡೆಲ್ಲಿ ಪಾಲಿಗೆ X ಫ್ಯಾಕ್ಟರ್ ಆಗಬಹುದಾದ ಆಟಗಾರ.
undefined
ಡೇವಿಡ್ ವಾರ್ನರ್: ಸನ್ ರೈಸರ್ಸ್ ಹೈದರಾಬಾದ್
undefined
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಡೇವಿಡ್ ವಾರ್ನರ್ ಮತ್ತೊಮ್ಮೆ ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ಗೇಮ್ ಚೇಂಜರ್ ಆಗಬಲ್ಲ ಕ್ರಿಕೆಟಿಗ. 10 ಓವರ್ ವಾರ್ನರ್ ಬ್ಯಾಟಿಂಗ್‌ನಲ್ಲಿದ್ದರೆ ಸಾಕು, ರನ್ ಹೊಳೆ ಹರಿಯೋದು ಗ್ಯಾರಂಟಿ.
undefined
ಆ್ಯರೋನ್ ಫಿಂಚ್
undefined
ಆಸೀಸ್ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಬ್ಯಾಟಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಬಾರಿ RCB ಫಿಂಚ್ ಮೇಲೆ ಸಾಕಷ್ಟು ನಿರೀಕ್ಷೆಯನ್ನಿಟ್ಟಿದೆ. ಚುಟುಕು ಕ್ರಿಕೆಟ್‌ನ ಮೋಸ್ಟ್ ಡೇಂಜರಸ್ ಓಪನ್ನರ್‌ಗಳಲ್ಲಿ ಫಿಂಚ್ ಕೂಡ ಒಬ್ಬರು.
undefined
click me!