ॐ ಟ್ಯಾಟೂ ತೆಗೆದ್ರೆ ಮದುವೆ: ಯುವಕನ ಕಂಡೀಷನ್‌ಗೆ SP ಮೊರೆ ಹೋದ ಯುವತಿ

Published : Jun 12, 2025, 05:41 PM ISTUpdated : Jun 12, 2025, 05:45 PM IST

ಯುವತಿಯೊಬ್ಬಳು ಲವ್ ಜಿಹಾದ್‌ನ ಬಲೆಗೆ ಬಿದ್ದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸೋನು ಎಂಬ ಯುವಕ ತನ್ನ ನಿಜವಾದ ಗುರುತು ಮರೆಮಾಚಿ ಪ್ರೀತಿಸಿ, ನಂತರ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾಳೆ. 

PREV
15

ಪೊಲೀಸ್ ಕಮಿಷನರ್ ಕಚೇರಿಗೆ ಬಂದ ಯುವತಿಯೋರ್ವಳು ತಾನು ಲವ್‌ ಜಿಹಾದ್‌ ಹೆಸರಿನ ಪ್ರೀತಿಯಲ್ಲಿ ಸಿಲುಕಿದ್ದೇನೆ. ತನಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

25

25 ವರ್ಷದ ಯುವತಿ ಹೇಳಿಕೆ ಪ್ರಕಾರ, ಆಕೆಗೆ ಒಂದು ವರ್ಷದ ಹಿಂದೆ ಸೋನು ಹೆಸರಿನ ಯುವಕ ಪರಿಚಯವಾಗಿದ್ದನು. ಯುವಕ ತನ್ನ ಗುರುತು ಮರೆ ಮಾಡಿ ಯುವತಿಯನ್ನು ಪ್ರೀತಿಸುತ್ತಿದ್ದನು. ತದನಂತರ ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಯುವತಿಗೆ ತಿಳಿದಿದೆ.

35

ತಾನು ಪ್ರೀತಿಸುತ್ತಿದ್ದ ಹುಡುಗ ಮುಸ್ಲಿಂ ಸಮುದಾಯದವನು, ಇದೊಂದು ಲವ್ ಜಿಹಾದ್ ಎಂದು ಅರಿತ ಯುವತಿ ಕಾನ್ಪುರದ ಎಸ್‌ಪಿ ಕಚೇರಿಗೆ ಆಗಮಿಸಿ ಸೋನು ವಿರುದ್ಧ ದೂರು ದಾಖಲಿಸಿದ್ದಾಳೆ. ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರೋದಾಗಿ ಹೇಳಿಕೊಂಡಿದ್ದಾಳೆ.

45

ಯುವಕ ಮದುವೆಯಾಗೋದಾಗಿ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆಯಾಗುವಂತೆ ಹೇಳಿದಾಗ ಯುವಕ ತನ್ನ ಅಸಲಿ ಹೆಸರು ಸತ್‌ರಾಜ್, ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಹೇಳಿದ್ದಾನೆ. ನಿನ್ನ ಕೈಯಲ್ಲಿರುವ ಓಂ ಟ್ಯಾಟೋ ತೆಗೆದು, ಮತಾಂತರಗೊಂಡ್ರೆ ಮಾತ್ರ ಮದುವೆಯಾಗೋದಾಗಿ ಹೇಳಿದ್ದಾನೆ.

55

ಯುವತಿ ಇಸ್ಲಾಂಗೆ ಮತಾಂತರಗೊಳ್ಳಲು ಒಪ್ಪದಿದ್ದಾಗ, ತನ್ನ ಬಳಿಯಲ್ಲಿರುವ ಅಶ್ಲೀಲ ವಿಡಿಯೋಗಳಿದ್ದು, ಅವುಗಳನ್ನು ಸಾರ್ವಜನಿಕಗೊಳಿಸೋದಾಗಿ ಬೆದರಿಕೆ ಹಾಕಿದ್ದಾನೆ. ಮತಾಂತರವಾಗುಂತೆ ಬೆದರಿಕೆ ಹಾಕಿದ್ದರಿಂದ ನೊಂದ ಯುವತಿ ನೇರವಾಗಿ ಎಸ್‌ಪಿ ಭೇಟಿಯಾಗಿ ದೂರು ಸಲ್ಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೋನು ಉರ್ಫ್ ಸತ್‌ರಾಜ್ ಬಂಧನಕ್ಕೆ ಬಲೆ ಬೀಸಿದ್ದಾರೆ.

Read more Photos on
click me!

Recommended Stories