ಪಂಬನ್ ಸೇತುವೆ ಮೂಲಕ ರಾಮೇಶ್ವರಂಗೆ ಪ್ರಯಾಣಿಸುವ ಪ್ಲಾನ್ ಇದೆಯಾ? ಇಲ್ಲಿಗೆ ಟ್ರೈನ್ ಲಿಸ್ಟ್

ಪಂಬನ್ ರೈಲ್ವೆ ಸೇತುವೆ ಉದ್ಘಾಟನೆ ಆಗಿದೆ. ಇದೀಗ ಈ ಸೇತುವೆ ಮೂಲಕ ರಾಮೇಶ್ವರಂ ಪ್ರಯಾಣಿಸಲು ಪ್ಲಾನ್ ಇದೆಯಾ? ಕಡಿಮೆ ಬೆಲೆಯಲ್ಲಿ ರಾಮೇಶ್ವರಂಗೆ ಪ್ರಯಾಣಿಸಲು ಇರುವು ಟ್ರೈನ್ ಯಾವುದು? ಸಂಪೂರ್ಣ ವೇಳಾಪಟ್ಟಿ
 

Check complete train list of Rameswaram trip with pamban bridge travel

ರಾಮೇಶ್ವರಂನಿಂದ ಹೊರಡುವ ಟ್ರೈನ್ ಲಿಸ್ಟ್: ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನ ಪಂಬನ್​ನಲ್ಲಿ ಸಮುದ್ರದ ಮಧ್ಯೆ 550 ಕೋಟಿ ರೂಪಾಯಿ ಖರ್ಚು ಮಾಡಿ ಹೊಸ ರೈಲ್ವೆ ಸೇತುವೆ ನಿರ್ಮಾಣಗೊಂಡಿದೆ.  ಹಳೆ ಪಂಬನ್ ರೈಲ್ವೆ ಸೇತುವೆಯಲ್ಲಿ ಪದೇ ಪದೇ ಸಮಸ್ಯೆಯಾಗುತ್ತಿದ್ದ ಕಾರಣ ಹೊಸ ಸೇತುವೆ ಕಟ್ಟಲಾಗಿದೆ. 2020ರಲ್ಲಿ ಈ ಸೇತು ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಪಂಬನ್ ಸೇತುವೆಯನ್ನು ಉದ್ಘಾಟಿಸಿದ್ದಾರೆ.  

Check complete train list of Rameswaram trip with pamban bridge travel
ರಾಮೇಶ್ವರಂ ರೈಲ್ವೆ ಸ್ಟೇಷನ್

ಶ್ರೀಲಂಕಾದಿಂದ ಇಂಡಿಯನ್ ಏರ್ ಫೋರ್ಸ್ ಹೆಲಿಕಾಪ್ಟರ್​ನಲ್ಲಿ ರಾಮೇಶ್ವರಂಗೆ ಬಂದ ಪ್ರಧಾನಿ ಮೋದಿ, ಪಂಬನ್ ಸೇತುವೆ ಉದ್ಘಾಟನೆ ಮಾಡಿದ್ದಾರೆ.. ರಾಮೇಶ್ವರಂ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ರಾಮೇಶ್ವರಂ ಮತ್ತು ತಂಬರಂ ನಡುವೆ ಹೊಸ ಪಂಬನ್ ಎಕ್ಸ್‌ಪ್ರೆಸ್ ಟ್ರೈನ್ ಸರ್ವಿಸ್​ಗೆ ಚಾಲನೆ ಕೊಟ್ಟಿದ್ದಾರೆ.

ಪಂಬನ್ ರೈಲ್ವೆ ಸೇತುವೆ ಕಟ್ಟೋ ಕೆಲಸ ನಡೀತಿದ್ದರಿಂದ, ರಾಮೇಶ್ವರಂಗೆ ಹೋಗೋ ಎಲ್ಲಾ ಟ್ರೈನ್​ಗಳನ್ನು ಮಂಡಪಂ ರೈಲ್ವೆ ಸ್ಟೇಷನ್​ನಲ್ಲಿ ನಿಲ್ಲಿಸಲಾಗುತ್ತಿತ್ತು. ಕೆಲವು ಟ್ರೈನ್​ಗಳನ್ನು ರಾಮನಾಥಪುರಂ ರೈಲ್ವೆ ಸ್ಟೇಷನ್​ನಲ್ಲಿ ನಿಲ್ಲಿಸಲಾಗುತ್ತಿತ್ತು. ಪಂಬನ್ ರೈಲ್ವೆ ಸೇತುವೆ ಓಪನ್ ಆಗಿರೋದ್ರಿಂದ, ಎಲ್ಲಾ ಟ್ರೈನ್​ಗಳು ನಾಳೆಯಿಂದ ರಾಮೇಶ್ವರಂನಿಂದ ಹೊರಡುತ್ತವೆ.


ಭಾರತೀಯ ರೈಲ್ವೆ

ರಾಮೇಶ್ವರಂ-ಮದುರೈ ಪ್ಯಾಸೆಂಜರ್ ಟ್ರೈನ್, ರಾಮೇಶ್ವರಂ ಪ್ಯಾಸೆಂಜರ್ ಟ್ರೈನ್, ರಾಮೇಶ್ವರಂ-ಭುವನೇಶ್ವರ್ ಎಕ್ಸ್‌ಪ್ರೆಸ್, ರಾಮೇಶ್ವರಂ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ಇವು ಸೇರಿ ಎಲ್ಲಾ ಟ್ರೈನುಗಳು ರಾಮೇಶ್ವರಂ ರೈಲ್ವೆ ಸ್ಟೇಷನ್​ನಿಂದ ಹೊರಡುತ್ತವೆ.

ಇದರ ಜೊತೆಗೆ, ರಾಮೇಶ್ವರಂನಿಂದ ತಂಬರಂಗೆ ಒಂದು ಎಕ್ಸ್‌ಪ್ರೆಸ್ ಟ್ರೈನ್ ಶುರು ಮಾಡಿದ್ದಾರೆ. ಚೆನ್ನೈನಿಂದ ರಾಮೇಶ್ವರಂಗೆ ಎರಡು ಟ್ರೈನ್​ಗಳು ಓಡಾಡುತ್ತವೆ. ಚೆನ್ನೈ ಎಗ್ಮೋರ್​ನಿಂದ ಪ್ರತಿದಿನ ಸಂಜೆ 5.45ಕ್ಕೆ ಹೊರಡುವ ಟ್ರೈನ್ ವಿಲ್ಲುಪುರಂ, ವಿರುಧಾಚಲಂ ಮಾರ್ಗವಾಗಿ ಹೋಗುತ್ತೆ. ಇನ್ನೊಂದು ಟ್ರೈನ್ ಪ್ರತಿದಿನ ಸಂಜೆ 7.15ಕ್ಕೆ ವಿಲ್ಲುಪುರಂ, ಕುಂಭಕೋಣಂ, ತಂಜಾವೂರು  ಮಾರ್ಗವಾಗಿ ರಾಮೇಶ್ವರಂಗೆ ಹೋಗುತ್ತೆ.

ರಾಮೇಶ್ವರಂ-ತಂಬರಂ ಹೊಸ ಎಕ್ಸ್‌ಪ್ರೆಸ್ ಟ್ರೈನ್

ತಂಬರಂನಿಂದ ರಾಮೇಶ್ವರಂಗೆ ಹೊಸ ಟ್ರೈನ್ ಓಡಾಡ್ತಿದೆ. ಚಂಗಲ್ಪಟ್ಟು, ವಿಲ್ಲುಪುರಂ, ತಿರುಪತಿಪುಲಿಯೂರ್, ಮೈಲಾಡುತುರೈ, ತಿರುವರೂರು, ತಿರುತ್ತುರೈಪೂಂಡಿ, ಪಟ್ಟುಕೊಟ್ಟೈ, ಅರಂತಂಗಿ, ಕಾರೈಕುಡಿ, ಶಿವಗಂಗಾ, ಮನಮದುರೈ ಮಾರ್ಗವಾಗಿ ಹೋಗುತ್ತೆ. ರಾಮೇಶ್ವರಂ ರೈಲ್ವೆ ಸ್ಟೇಷನ್​ನಿಂದ ಟ್ರೈನ್ ಓಡಾಡ್ತಿರೋದ್ರಿಂದ ಜನರಿಗೆ ಖುಷಿಯಾಗಿದೆ.

Latest Videos

vuukle one pixel image
click me!