ಪ್ರಪಂಚದ ಅತ್ಯಂತ ದುಬಾರಿ ಮಾವು ಎಂಬ ಬಿರುದನ್ನು ಪಡೆದ ಮಿಯಾಜಾಕಿ ಮಾವು. ಇದು ಅಪರೂಪದ ಜಪಾನೀ ಮಾವಿನ ವಿಧವಾಗಿದೆ. ಈ ಮಾವಿನ ಹಣ್ಣು ಒಂದು ಕೆಜಿಗೆ 2.5 ಲಕ್ಷದಿಂದ 3 ಲಕ್ಷದವರೆಗೆ ಇರುತ್ತದೆ. ಈ ಮಾವಿನ ಹಣ್ಣನ್ನು ಬೆಳೆಯುವುದು ತುಂಬಾ ಕಷ್ಟ. ಏಕೆಂದರೆ ಇದನ್ನು ಜಪಾನ್‌ನಲ್ಲಿ ಮಾತ್ರ ಬೆಳೆಯಲು ಸಾಧ್ಯ. ಮುಖ್ಯವಾಗಿ ಇದು ಜಪಾನ್‌ನ ಕ್ಯುಶು ಪ್ರಾಂತ್ಯದಲ್ಲಿರುವ ಮಿಯಾಜಾಕಿ ನಗರದಲ್ಲಿ ಬೆಳೆಯಲಾಗುತ್ತದೆ.
ಈ ಮಾವಿನ ಹಣ್ಣನ್ನು ಕಾಡುಗಳಲ್ಲಿ ಹಸಿರು ಮನೆಗಳನ್ನು ನಿರ್ಮಿಸಿ ಬೆಳೆಯಲಾಗುತ್ತದೆ. ಇಲ್ಲಿನ ಹವಾಮಾನ ಮಾವಿನ ಹಣ್ಣು ಬೆಳೆಯಲು ಸೂಕ್ತವಾಗಿದೆ. ಆದ್ದರಿಂದ ಈ ಮಾವಿನ ಹಣ್ಣನ್ನು ಭಾರತದಲ್ಲಾಗಲಿ ಅಥವಾ ಬೇರೆ ದೇಶಗಳಲ್ಲಾಗಲಿ ಬೆಳೆಯಲು ಸಾಧ್ಯವಿಲ್ಲ. ಇದುವೇ ಈ ಅಪರೂಪದ ಮಾವಿನ ಹಣ್ಣಿನ ಬೆಲೆ ಹೆಚ್ಚಾಗಿರಲು ಕಾರಣ.