Published : Apr 20, 2025, 01:30 PM ISTUpdated : Apr 20, 2025, 01:46 PM IST
Illicit Relationship: ನಾಲ್ಕು ಮಕ್ಕಳ ತಾಯಿ ತನ್ನ ಮಗಳ ಮಾವನ ಜೊತೆ ಓಡಿಹೋದ ಘಟನೆ ಆಘಾತವನ್ನುಂಟು ಮಾಡಿದೆ. ಮಗಳ ಮಾವ ಅಂದ್ರೆ ಸಂಬಂಧದಲ್ಲಿ ಮಹಿಳೆಗೆ ಆತ ಸೋದರನಾಗುತ್ತಾನೆ. ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ?
ಮಗಳಿಗೆ 10 ದಿನಗಳಲ್ಲಿ ಮದುವೆ ನಿಶ್ಚಯವಾಗಿದ್ದ ವರನ ತಂದೆಯ ಜೊತೆ ಮಹಿಳೆ ಓಡಿಹೋದ ವಿಚಿತ್ರ ಘಟನೆ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
24
ಮಗಳ ಸಂಬಂಧಿಯ ಜೊತೆ ಮಮ್ತಾಳ ಪರಿಚಯ
ಉತ್ತರ ಪ್ರದೇಶದ ಬದನ್ ಜಿಲ್ಲೆಯ ಸುನಿಲ್ ಕುಮಾರ್ ಲಾರಿ ಚಾಲಕ. ಆತನ ಪತ್ನಿ ಮಮತಾ (43). ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಮೂರನೇ ಮಗಳಿಗೆ 2022 ರಲ್ಲಿ ಶೈಲೇಂದ್ರ (46) ಎಂಬುವವರ ಮಗನ ಜೊತೆ ಮದುವೆಯಾಗಿತ್ತಯ. ಮದುವೆಯ ನಂತರ ಮಗಳ ಮಾವ ಶೈಲೇಂದ್ರ ಜೊತೆ ಮಮತಾಳಿಗೂ ಪರಿಚಯವಾಗಿತ್ತು.
34
ಅಕ್ರಮ ಪ್ರೇಮ
ಈ ಪರಿಚಯ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿತು. ಗಂಡ ಲಾರಿ ಚಾಲಕನಾಗಿರುವುದರಿಂದ ತಿಂಗಳಿಗೊಮ್ಮೆ ಮಾತ್ರ ಮನೆಗೆ ಬರುತ್ತಿದ್ದ. ಇದನ್ನು ಬಳಸಿಕೊಂಡು ಮಮತಾ ಸಂಬಂಧಿಯನ್ನು ಮನೆಗೆ ಕರೆಯುತ್ತಿದ್ದಳು. ಮಕ್ಕಳನ್ನು ಬೇರೆ ಕೋಣೆಯಲ್ಲಿರಲು ಹೇಳಿ ಶೈಲೇಂದ್ರ ಮತ್ತು ಮಮತಾ ಒಂದೇ ಕೋಣೆಯಲ್ಲಿ ಇರುತ್ತಿದ್ದರು. ಮೂರು ವರ್ಷಗಳಿಂದ ಈ ಸಂಬಂಧ ನಡೆಯುತ್ತಿತ್ತು.
44
ಮಗಳ ಮಾವನ ಜೊತೆ ತಾಯಿ ಪರಾರಿ
ಇದ್ದಕ್ಕಿದ್ದಂತೆ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ತೆಗೆದುಕೊಂಡು ಮಮಯತಾ ತನ್ನ ಸಂಬಂಧಿ ಮತ್ತು ಅಕ್ರಮ ಪ್ರೇಮಿಯಾಗಿರೋ ಶೈಲೇಂದ್ರ ಜೊತೆ ಓಡಿಹೋದಳು. ಇದರಿಂದ ದಿಗ್ಭ್ರಮೆಗೊಂಡ ಗಂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಬಂಧಿಯ ಜೊತೆ ಮಹಿಳೆ ಓಡಿಹೋದ ಘಟನೆ ಭಾರಿ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ