ಭಾರತೀಯ ರೈಲ್ವೆ ವೈಟಿಂಗ್ ಲಿಸ್ಟ್ ಟಿಕೆಟ್ ಕೋಡೋದೇಕೆ?

First Published | Nov 12, 2024, 10:46 AM IST

ಪ್ರತಿದಿನವೂ ಲಕ್ಷಾಂತರ ಜನ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಹೀಗಾಘಿ ಹಬ್ಬ ಹರಿದಿನಗಳಲ್ಲಿ ರೈಲಿನಲ್ಲಿ ನಿಂತುಕೊಂಡು ಪ್ರಯಾಣಿಸಲು ಜಾಗವಿರಲ್ಲ, ಟಿಕೆಟ್ ಸಿಗೋದೇ ಕಷ್ಟ. ಟಿಕೆಟ್‌ ಖಚಿತವಾಗದೇ ಇದ್ದಾಗ ರೈಲ್ವೆ ತನ್ನ ಪ್ರಯಾಣಿಕರಿಗೆ ವೇಟಿಂಗ್ ಲಿಸ್ಟ್ ಟಿಕೆಟ್ ಕೊಡ್ತಾರೆ. ಆದ್ರೆ ಅದ್ರಲ್ಲಿ ಪ್ರಯಾಣ ಮಾಡಕ್ಕಾಗಲ್ಲ. ಹಾಗಿದ್ರೂ ಯಾಕೆ ಕೊಡ್ತಾರೆ?

ವೇಟಿಂಗ್ ಲಿಸ್ಟ್ ಟಿಕೆಟ್ ಅಂದ್ರೇನು?

ರೈಲಿನಲ್ಲಿ ಸೀಟು ಫುಲ್ ಆದ್ಮೇಲೆ ಕೊಡೋ ಟಿಕೆಟ್ಟೇ ವೇಟಿಂಗ್ ಲಿಸ್ಟ್ ಟಿಕೆಟ್. ಕನ್ಫರ್ಮ್ ಟಿಕೆಟ್ ಇರೋರು ಪ್ರಯಾಣ ಕ್ಯಾನ್ಸಲ್ ಮಾಡಿದ್ರೆ, ವೇಟಿಂಗ್ ಲಿಸ್ಟ್ ಟಿಕೆಟ್ ಇರೋರಿಗೆ ಆ ಸೀಟು ಸಿಗಬಹುದು. ವೇಟಿಂಗ್ ಲಿಸ್ಟ್ ಟಿಕೆಟ್‌ಗೆ ಒಂದು ನಂಬರ್ ಇರುತ್ತೆ. ನೀವು ವೇಟಿಂಗ್ ಲಿಸ್ಟ್‌ನಲ್ಲಿ ಎಲ್ಲಿ ಇದ್ದೀರಿ ಅಂತ ಈ ನಂಬರ್ ಹೇಳುತ್ತೆ. ಕನ್ಫರ್ಮ್ ಟಿಕೆಟ್‌ಗಳು ಕ್ಯಾನ್ಸಲ್ ಆಗ್ತಿದ್ದಂಗೆ ವೇಟಿಂಗ್ ಲಿಸ್ಟ್ ನಂಬರ್ ಬದಲಾಗುತ್ತೆ.

ವೇಟಿಂಗ್ ಲಿಸ್ಟ್ ಟಿಕೆಟ್ ಯಾಕೆ?

ರೈಲ್ವೆ ವೇಟಿಂಗ್ ಲಿಸ್ಟ್ ಟಿಕೆಟ್ ಕೊಡೋಕೆ ಹಲವು ಕಾರಣಗಳಿವೆ. ಈ ಟಿಕೆಟ್‌ನಿಂದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ಲಾನ್ ಮಾಡುವುದಕ್ಕೆ ಅನುಕೂಲವಾಗುತ್ತದೆ. ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಂದ ರೈಲ್ವೆಗೆ ಆದಾಯ ಹೆಚ್ಚುತ್ತದೆ. ಕನ್ಫರ್ಮ್ ಟಿಕೆಟ್ ಕ್ಯಾನ್ಸಲ್ ಆದ್ರೆ, ವೇಟಿಂಗ್ ಲಿಸ್ಟ್ ಟಿಕೆಟ್ ಇರೋರಿಗೆ ಸೀಟು ಸಿಗುತ್ತೆ.ಹೀಗಾಗಿ ಖಾಲಿ ಇದ್ದ ಸೀಟು ಬಳಕೆಯಾಗುತ್ತದೆ. ಈ ವ್ಯವಸ್ಥೆಯಿಂದ ರೈಲ್ವೆ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಬಹುದು. ಯಾವ ರೂಟ್‌ಗೆ ಹೆಚ್ಚು ಡಿಮ್ಯಾಂಡ್ ಇದೆ ಅಂತ ರೈಲ್ವೆಗೆ ತಿಳಿಯುತ್ತದೆ.

Tap to resize

ವೇಟಿಂಗ್ ಲಿಸ್ಟ್ ಟಿಕೆಟ್‌ನ ಲಾಭಗಳು

ವೇಟಿಂಗ್ ಲಿಸ್ಟ್ ಟಿಕೆಟ್‌ನಿಂದ ಪ್ರಯಾಣಿಕರಿಗೆ ಮತ್ತು ರೈಲ್ವೆಗೆ ಹಲವು ಲಾಭಗಳಿವೆ. ಈ ಟಿಕೆಟ್‌ನಿಂದ ಪ್ರಯಾಣಿಕರಿಗೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಟಿಕೆಟ್ ಕನ್ಫರ್ಮ್ ಆಗದಿದ್ದರೆ, ಪ್ರಯಾಣಿಕರು ತಮ್ಮ ಹಣವನ್ನು ವಾಪಸ್ ಪಡೆದು ಹಣ ಉಳಿತಾಯ ಮಾಡಬಹುದು. ಪ್ರಯಾಣಿಕರು ಪದೇ ಪದೇ ಟಿಕೆಟ್‌ಗಳನ್ನು ಪರಿಶೀಲಿಸಬೇಕಾಗಿಲ್ಲ ಜೊತೆಗೆ  ರೈಲ್ವೆ ತನ್ನ ಸೇವೆಗಳನ್ನು ಉತ್ತಮವಾಗಿ ಯೋಜಿಸಬಹುದು. ಜೊತೆಗೆ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಕಡಿಮೆಯಾಗುತ್ತದೆ.

ರೈಲುಗಳು ರದ್ದು

ವೇಟಿಂಗ್ ಲಿಸ್ಟ್ ಟಿಕೆಟ್ ಕನ್ಫರ್ಮ್ ಆಗೋದು ಒಂದು ಪ್ರಕ್ರಿಯೆ. ಇದು ಹಲವು ಹಂತಗಳಲ್ಲಿ ನಡೆಯುತ್ತದೆ. ಕನ್ಫರ್ಮ್ ಟಿಕೆಟ್ ಇರೋರು ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ, ಒಂದು ಸೀಟು ಖಾಲಿ ಆಗುತ್ತೆ. ಈ ಖಾಲಿ ಸೀಟು ಮೊದಲು RAC ಟಿಕೆಟ್ ಇರೋರಿಗೆ ಸಿಗುತ್ತೆ.ನಂತರ ವೇಟಿಂಗ್ ಲಿಸ್ಟ್‌ನಲ್ಲಿ ಮೊದಲ ನಂಬರ್ ಇರೋ ಟಿಕೆಟ್ ಕನ್ಫರ್ಮ್ ಆಗುತ್ತೆ. ಚಾರ್ಟ್‌ ತಯಾರಾದ ಮೇಲೆ ಯಾವುದೇ ಬದಲಾವಣೆ ಆಗಲ್ಲ. ಈ ಪ್ರಕ್ರಿಯೆ ಕಂಪ್ಯೂಟರ್‌ನಿಂದ ಸ್ವಯಂಚಾಲಿತವಾಗಿ ನಡೆಯುತ್ತದೆ.

ವೇಟಿಂಗ್ ಲಿಸ್ಟ್ ಟಿಕೆಟ್ ನಿಯಮಗಳು

ವೇಟಿಂಗ್ ಲಿಸ್ಟ್ ಟಿಕೆಟ್ ಬಗ್ಗೆ ಪ್ರತಿಯೊಬ್ಬ ಪ್ರಯಾಣಿಕರು ತಿಳಿದುಕೊಳ್ಳಬೇಕಾದ ಕೆಲವು ನಿಯಮಗಳಿವೆ. ವೇಟಿಂಗ್ ಲಿಸ್ಟ್ ಟಿಕೆಟ್‌ನಲ್ಲಿ ಟಿಕೆಟ್ ಕನ್ಫರ್ಮ್ ಆಗದಿದ್ರೆ ಪ್ರಯಾಣ ಮಾಡಕ್ಕಾಗಲ್ಲ ಟಿಕೆಟ್ ಕನ್ಫರ್ಮ್ ಆಗದಿದ್ರೆ, ಪೂರ್ತಿ ಹಣ ವಾಪಸ್ ಸಿಗುತ್ತೆ. ಕೆಲವೊಮ್ಮೆ ವೇಟಿಂಗ್ ಲಿಸ್ಟ್ ಟಿಕೆಟ್ RAC ಆಗಿ ಬದಲಾಗುತ್ತೆ. RACನಲ್ಲಿ ಪ್ರಯಾಣ ಮಾಡಬಹುದು. ಪ್ರಯಾಣಿಕರು ತಮ್ಮ ಟಿಕೆಟ್‌ನ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಚಾರ್ಟ್ ತಯಾರಾದ ಮೇಲೆ ಯಾವುದೇ ಬದಲಾವಣೆ ಆಗಲ್ಲ.

Latest Videos

click me!