ಒಂದು ಸಮಯದಲ್ಲಿ ನೇಪಾಳವು ಭಾರತವನ್ನು ತನ್ನ ಹಿರಿಯ ಸಹೋದರ ಎಂದು ಪರಿಗಣಿಸಿಸುತ್ತಿತ್ತು. ಆದರೆ ಅವರು ಚೀನಾದ ಒಡ್ಡಿದ ಆಮಿಷಕ್ಕೆ ಸಿಲುಕಿಕೊಂಡರು, ಅದು ಸಂಬಂಧವನ್ನು ಹಾಳುಮಾಡಿತು. ಈಗ ಅವರೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ದೇಶಗಳ ನಡುವೆ ಬಿರುಕು ಮೂಡಿಸುವಲ್ಲಿ ಹೌ ಯಾಂಕಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ. ಹೌ ಯಾಂಕಿಯ ಪ್ರಚೋದನೆಯ ಮೇರೆಗೆ ನೇಪಾಳ ತನ್ನ ನಕ್ಷೆಯಲ್ಲಿ ಲಿಂಪುಯಾಧಾರ, ಕಾಲಾಪಾನಿ ಮತ್ತು ಲಿಪುಲೇಖ್ ಅನ್ನು ತೋರಿಸಿದೆ ಎಂಬುವುದು ಉ;ಲ್ಲೇಖನೀಯ. ಹೌ ಅವರನ್ನು ಬುದ್ಧಿವಂತ ರಾಯಭಾರಿ ಎಂದು ಪರಿಗಣಿಸಲಾಗಿದೆ, ಅವರು ಮೊದಲು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು.