ವಾಹನ ನಂಬರ್‌ನಿಂದ ಅಂತಿಮ ಯಾತ್ರೆವರೆಗೆ ಮಾಜಿ ಸಿಎಂ ರೂಪಾನಿಯ ನಂಬರ್ 12 ನಿಗೂಢತೆ

Published : Jun 12, 2025, 11:24 PM IST

ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ನಂಬರ್ 12 ಮೇಲೆ ಎಲ್ಲಿಲ್ಲದ ಮೋಹ. ತಮ್ಮ ಎಲ್ಲಾ ವಾಹನಗಳ ನಂಬರ್ 12 ಇರಲೇ ಬೇಕು. ದುರಂತ ಅಂದರೆ ಇದೇ 12 ನಂಬರ್ ಯಾತ್ರೆ ತಮ್ಮ ಕೊನೆಯ ಯಾತ್ರೆಯಾಗಲಿದೆ ಅನ್ನೋ ಸುಳಿವು ಇರಲಿಲ್ಲ.

PREV
15

ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಮೃತಪಟ್ಟಿದ್ದಾರೆ. ಭಾರತದ ನಾಗರೀಕ ವಿಮಾನಯಾನ ಇತಿಹಾಸದಲ್ಲೇ ಅತೀ ದೊಡ್ಡ ದುರಂತ ಇದಾಗಿದೆ. ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದಾರೆ. ವಿಜಯ್ ರೂಪಾನಿ ಅಂತಿಮ ಯಾತ್ರೆಯಲ್ಲೂ ನಂಬರ್ 12 ಬಿಟ್ಟುಕೊಟ್ಟಿಲ್ಲ. ಈ ನಿಗೂಢತೆ ಇದೀಗ ನೋವಿನ ಜೊತೆಗೆ ಅಚ್ಚರಿಗೂ ಕಾರಣವಾಗಿದೆ. ವಿಜಯ್ ರೂಪಾನಿಯ ಅತ್ಯಂತ ಲಕ್ಕಿ ನಂಬರ್ ಎಂದೇ ಪರಿಗಣಿಸಲ್ಪಟ್ಟಿದ್ದ 1206, ಕೊನೆಯ ಯಾತ್ರೆಯಲ್ಲೂ ಜೊತೆಯಾಗಿದೆ.

25

ವಿಜಯ್ ರೂಪಾನಿಯ ಎಲ್ಲಾ ವಾಹನಗಳ ನಂಬರ್ 1206. ಇದು ರೂಪಾನಿಯ ಲಕ್ಕಿ ನಂಬರ್. ರೂಪಾನಿ ತಮ್ಮ ರಾಜಕೀಯ ಆರಂಭಿಕ ದಿನಗಳಲ್ಲಿ ಬಳಸಿದ್ದ ಸ್ಕೂಚರ್ ನಂಬರ್ ಕೂಡ 1206. ರೂಪಾನಿ ನಂಬರ್ ಆಯ್ಕೆ ಬಂದಾಗ ಅದು 1206 ಆಗಿರಬೇಕು ಅನ್ನೋದು ರೂಪಾನಿಯ ಹಠವಾಗಿತ್ತು. ಈ ಲಕ್ಕಿ ನಂಬರ್ ವಿಜಯ್ ರೂಪಾನಿಗೆ ವೈಯುಕ್ತಿಕವಾಗಿ, ರಾಜಕೀಯವಾಗಿಯೂ ಯಶಸ್ಸು ತಂದುಕೊಟ್ಟಿದೆ.

35

ವಿಜಯ್ ರೂಪಾನಿಯ ಈ 1206 ನಂಬರ್ ಇದೀಗ ಸಾವಿನಲ್ಲೂ ಜೊತೆಯಾಗಿದೆ. ವಿಜಯ್ ರೂಪಾನಿ ಕೊನೆಯ ಪ್ರಯಾಣ ಮಾಡಿದ ದಿನಾಂಕ ಜೂನ್ 12, ಅಂದರೆ 12-06. ಮತ್ತೆ ವಿಜಯ್ ರೂಪಾನಿ ಜೊತೆ ಬೆಸೆದುಕೊಂಡಿರುವ ನಂಬರ್ ಇದಾಗಿದೆ. ಇದೇ ದಿನ ವಿಜಯ್ ರೂಪಾನಿ ಜೀವನದ ಪಯಣ ಮುಗಿಸಿದ್ದಾರೆ. ತಮ್ಮ ಲಕ್ಕಿ ನಂಬರ್ ದಿನವೇ ಬದುಕು ಕೂಡ ಅಂತ್ಯಗೊಂಡಿದೆ.

45

ಇಷ್ಟೇ ಅಲ್ಲ ವಿಜಯ್ ರೂಪಾನಿ ಏರ್ ಇಂಡಿಯಾ ವಿಮಾನ ಮೂಲಕ ಪ್ರಯಾಣಿಸಿದ ಸೀಟು ಸಂಖ್ಯೆ 12. ಇದೇ ವಿಮಾನದ 11ಎ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಬದುಕುಳಿದಿದ್ದಾನೆ. ಈ ವಿಮಾನದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಈತ. ಇತ್ತ ವಿಜಯ್ ರೂಪಾನಿ ಸೀಟು ಸಂಖ್ಯೆ 12ರ ಪ್ರಯಾಣ 30 ಸೆಕೆಂಡ್ ಕೂಡ ಪೂರ್ಣಗೊಳಿಸಲಿಲ್ಲ. ಅದರೊಳಗೆ ವಿಮಾನ ದುರಂತಕ್ಕೀಡಾಗಿದೆ.

55

ವಿಜಯ್ ರೂಪಾನಿ 12ರ ಸಂಪರ್ಕ ಇಲ್ಲಿಗೆ ಅಂತ್ಯಗೊಂಡಿಲ್ಲ. ರೂಪಾನಿ ಏರ್ ಇಂಡಿಯಾ ಅಹಮ್ಮದಾಬಾದ್ ಲಂಡನ್ ಎ171 ವಿಮಾನಕ್ಕೆ ಬೋರ್ಡಿಂಗ್ ಆದ ಸಮಯ 12:10. ಇಲ್ಲಿ ಮತ್ತೆ 12 ನಂಬರ್ ಕನೆಕ್ಷನ್ ಇದೆ. ವಿಜಯ್ ರೂಪಾನಿ ತಮ್ಮ ಕೊನೆಯ ಪಯಣದಲ್ಲಿ ನಂಬರ್ 12ರ ಜೊತೆಗೆ ಯಾತ್ರೆ ಮಾಡಿದ್ದಾರೆ. ವಿಜಯ್ ರೂಪಾನಿಗೆ ನಂಬರ್ 12ರ ಜೊತೆ ನಿಗೂಢ ಸಂಪರ್ಕವಿರುವುದು ಈ ಯಾತ್ರೆ ಮೂಲಕ ಸಾಬೀತಾಗಿದೆ.

Read more Photos on
click me!

Recommended Stories