ವಿಮಾನ ದುರಂತ, ಮಡಿದ ಪ್ರಯಾಣಿಕರಿಗೆ ತಲಾ ₹1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್

Published : Jun 12, 2025, 08:39 PM IST

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರ ಕುಟುಂಬಕ್ಕೆ ಟಾಟಾ ಸಮೂಹ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳು ಚಿಕಿತ್ಸಾ ವೆಚ್ಚ, ಹಾಸ್ಟೆಲ್ ಮರು ನಿರ್ಮಾಣ ಸೇರಿದಂತೆ ಪ್ರಮುಖ ಭರವಸೆ ನೀಡಿದೆ. 

PREV
16

ಅಹಮ್ಮದಾಬಾದ್ ಲಂಡನ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡು ಅತೀ ದೊಡ್ಡ ದುರಂತ ಸಂಭವಿಸಿದೆ. 242 ಪ್ರಯಾಣಿಕರ ಹೊತ್ತು ಪ್ರಯಾಣ ಬೆಳೆಸಿದ ಏರ್ ಇಂಡಿಯಾ ಎ171 ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿದ್ದ ಒಟ್ಟು 242 ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕ ಬದುಕುಳಿದಿದ್ದಾನೆ. ಇನ್ನುಳಿದ 242 ಪ್ರಯಾಣಿಕರು ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ಕೈರ್ ಸ್ಟಾರ್ಮರ್ ಸೇರಿದಂತೆ ಹಲವು ನಾಯಕರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

26

ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನ ಪತನ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಗೆ ಆಘಾತ ವ್ಯಕ್ತಪಡಿಸಿದ್ದ ಟಾಟಾ ಸಮೂಹ, ಮಡಿದವರಿಗೆ ಸಂತಾಪ ಸೂಚಿಸಿದೆ. ಇದೀಗ ಟಾಟಾ ಗ್ರೂಪ್ ವಿಮಾನದಲ್ಲಿ ಮಡಿದ ಪ್ರಯಾಣಿಕರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. 241 ಮಂದಿಗೆ ಒಟ್ಟು 241 ಕೋಟಿ ರೂಪಾಯಿ ಪರಿಹಾರವನ್ನು ಟಾಟಾ ಗ್ರೂಪ್ ನೀಡಲಿದೆ.

36

ವಿಮಾನ ಪತನದಲ್ಲಿ ಬುದುಕಿಳಿದ ಪ್ರಯಾಣಿಕ ಹಾಗೂ ಈ ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಟಾಟಾ ಸಮೂಹಹ ಭರಿಸಲಿದೆ. ಅವರ ಎಲ್ಲಾ ವೆಚ್ಚಗಳನ್ನು ಟಾಟಾ ಸಮೂಹ ನೋಡಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಈ ಘಟನೆಯಿಂದ ತೀವ್ರ ನೋವಾಗಿದ್ದು, ಮೃತರ ಕುಟುಂಬಕ್ಕೆ ಟಾಟಾ ಸಮೂಹ ಸಂತಾಪ ಸೂಚಿಸಿದೆ.

46

ಏರ್ ಇಂಡಿಯಾ ವಿಮಾನ ಪನತದಿಂದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಈ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡವನ್ನು ಮರು ನಿರ್ಮಾಣ ಮಾಡಿಕೊಡುವುದಾಗಿ ಟಾಟಾ ಸಮೂಹ ಭರವಸೆ ನೀಡಿದೆ. ಸಂಪೂರ್ಣವಾಗಿ ಹಾಸ್ಟೆಲ್ ಹಾಗೂ ಹಾನಿಯಾಗಿರುವ ಕಟ್ಟಡಗಳನ್ನು ಮರು ನಿರ್ಮಾಣ ಮಾಡುವುದಾಗಿ ಟಾಟಾ ಸನ್ಸ್ ಚೇರ್ಮೆನ್ ಚಂದ್ರಶೇಖರನ್ ಹೇಳಿದ್ದಾರೆ.

56

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ 2022ರಲ್ಲಿ ಖರೀದಿಸಿತ್ತು. ನಷ್ಟದಲ್ಲಿದ್ದ ವಿಮಾನ ಸಂಸ್ಥೆಯನ್ನು ಖರೀದಿಸಿದ ಟಾಟಾ ಸನ್ಸ್ ಹಲವು ಬದಲಾವಣೆ ಮಾಡಿತ್ತು. ಅನಗತ್ಯ ಖರ್ಚು ವೆಚ್ಚ ಕಡಿತಗೊಳಿಸಿತ್ತು. ಇನ್ನು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತಿದೆ. ಇದೀಗ ಟಾಟಾ ಒಡೆತನ ಏರ್ ಇಂಡಿಯಾ ದುರಂತ ಟಾಟಾ ಸಮೂಹಕ್ಕೆ ಭಾರಿ ಹೊಡೆತ ನೀಡಿದೆ.

66

ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿರುವ ಕಾರಣ ಹಲವು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. 45 ವಿದ್ಯಾರ್ಥಿಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬಹುತೇಕರ ಆರೋಗ್ಯ ಸ್ಥಿರವಾಗಿದೆ.

Read more Photos on
click me!

Recommended Stories