ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಕೋಚ್ ಕಾರ್ಯಾರಂಭಕ್ಕೆ ಇದೀಗ ಕುತೂಹಲ ಹೆಚ್ಚಾಗಿದೆ. ಲಾಂಚ್‌ಗೂ ಮೊದಲು ವಂದೇ ಭಾರತ್ ಸ್ಲೀಪರ್ ರೈಲಿನ ಕೆಲ ಫೋಟೋಗಳು ರಿಲೀಸ್ ಮಾಡಲಾಗಿದೆ. ಅತ್ಯುತ್ತಮ ಮೂಲಸೌಕರ್ಯ, ಸೌಲಭ್ಯ, ಐಷಾರಾಮಿತನ ಸೇರಿದಂತೆ ಊಹೆಗೂ ಮೀರಿದ ವಿನ್ಯಾಸ ಎಲ್ಲರನ್ನು ಆಕರ್ಷಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳು ಈ ರೈಲು ಪ್ರಯಾಣದಲ್ಲಿ ಸಿಗಲಿದೆ. ಈ ಫೋಟೋಗಳು ಭಾರತದ ಮೂಲಭೂತ ಸೌಕರ್ಯಗಳ ಮಟ್ಟ ಯಾವ ರೀತಿ ಬದಲಾಗಿದೆ ಅನ್ನೋದು ಸ್ಪಷ್ಟವಾಗುತ್ತಿದೆ.
ಚೆನ್ನೈನ ಐಸಿಎಫ್ ಫ್ಯಾಕ್ಟರಿಯಲ್ಲಿ ಈ ರೈಲು ನಿರ್ಮಾಣಗೊಳ್ಳುತ್ತಿದೆ. ಪ್ರಯಾಣಿಕರ ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲಾ ಕೋಚ್ ಕೂಡ ಏರ್ ಕಂಡೀಷನ್ ಹೊಂದಿರುತ್ತದೆ. ಒಟ್ಟು 16 ಕೋಚ್ ಹೊಂದಿರುತ್ತದೆ. 820 ಪ್ರಯಾಣಿಕರು ಅರಾಮವಾಗಿ ನಿದ್ರಿಸುತ್ತಾ ಪ್ರಯಾಣ ಮಾಡಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ವಂದೇ ಭಾರತ್ ಸ್ಲೀಪರ್ ಕೋಚ್ ವೇಗ 160 ಕಿ.ಮೀ ಪ್ರತಿ ಗಂಟೆಗೆ.
ದೂರ ಪ್ರಯಾಣಕ್ಕೆ ಬೇಕಾದ ರೀತಿಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ವಿನ್ಯಾಸ ಮಾಡಲಾಗಿದೆ. ಒಂದೇ ಬಾರಿ 800 ರಿಂದ 1,200 ಕಿ.ಮೀ ದೂರ ಪ್ರಯಾಣ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ತಂತ್ರಜ್ಞಾನದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಅತ್ಯಾಧುನಿಕವಾಗಿದೆ. ಆ್ಯಟೋಮ್ಯಾಟಿಕ್ ಬಾಗಿಲುಗಳು ಟಚ್ ಮಾಡಿದರೆ ಸಾಕು ತೆರೆದುಕೊಳ್ಳಲಿದೆ ಹಾಗೂ ಮುಚ್ಚಿಕೊಳ್ಳಲಿದೆ. ಇನ್ನು ಶೌಚಾಲಯಗಳು ಟಚ್ ಫ್ರಿ ಬಯೋವ್ಯಾಕ್ಯೂಮ್. ಹೀಗಾಗಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ರೈಲು ಸಿಬ್ಬಂದಿಗಳು ಜೊತೆ ಮಾತನಾಡಲು ಟಾಕ್ ಬ್ಯಾಕ್ ವ್ಯವಸ್ಥೆ ಇದೆ. ವಿಮಾನ ರೀತಿಯಲ್ಲಿನ ಕೆಲ ವ್ಯವಸ್ಥೆಗಳು ಈ ರೈಲಿನಲ್ಲಿದೆ. ಇದರ ಜೊತೆಗೆ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಅಪಘಾತ ತಡೆಯಬಲ್ಲ ಕವಚ ತಂತ್ರಜ್ಞಾನ ಸೇರಿದಂತೆ ಹಲವು ಫೀಚರ್ ಇದರಲ್ಲಿದೆ. 2025ರ ಆರಂಭದಲ್ಲೇ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಕಾರ್ಯಾರಂಭ ಮಾಡಲಿದೆ. ಅದಕ್ಕೂ ಮುನ್ನ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಲಿದೆ.
ಟೆಸ್ಟ್ ರನ್‌ನಲ್ಲಿ ರೈಲು 80 ರಿಂದ 160 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ವಿವಿಧ ಹಳಿಗಳಲ್ಲಿ ಈ ರೈಲು ಪ್ರಯೋಗ ಮಾಡಲಾಗುತ್ತದೆ. ನವೆಂಬರ್ ಹಾಗೂ ಡಿಸೆಂಬರ್ 2 ತಿಂಗಳು ವಂದೇ ಭಾರತ್ ಸ್ಲೀಪರ್ ರೈಲಿನ ಟೆಸ್ಟ್ ರನ್ ನಡೆಯಲಿದೆ. ಸದ್ಯ ವಂದೇ ಭಾರತ್ ಸ್ಲೀಪರ್ ಕೋಟ್‌ನ ಎಸಿ, ಫಸ್ಟ್, ಎಸಿ 2 ಟೈರ್ ಹಾಗೂ ಎಸಿ 3 ಟೈರ್ ಕೋಚ್ ಫೋಟೋಗಳು ಬಿಡುಗಡೆಯಾಗಿದೆ.