ನ್ಯಾಶನಲ್ ಕ್ರಶ್ ಆದ ಮೋದಿ ಸಂಪುಟದ ಸಚಿವ ಚಿರಾಗ್ ಪಾಸ್ವಾನ್!

First Published Jun 11, 2024, 6:05 PM IST

ಪ್ರಧಾನಿ ನರೇಂದ್ರ ಮೋದಿ ಸಂಪುಟದ ಕೇಂದ್ರ ಸಚಿವರಾಗಿರುವ ಯುವ ಮುಖಂಡ, ಲೋಕ್ ಜನಶಕ್ತಿ ಪಕ್ಷದ ಪ್ರಮುಖ ಚಿರಾಗ್ ಪಾಸ್ವಾನ್ ನ್ಯಾಷನಲ್ ಕ್ರಶ್ ಆಗಿ ಬದಲಾಗಿದ್ದಾರೆ. ಚಿರಾಗ್ ಪಾಸ್ವಾನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ

ಚುನಾವಣೆ ಫಲಿತಾಂಶ ಬಂದ ದಿನದಿಂದಲೂ ಚಿರಾಗ್ ಪಾಸ್ವಾನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆಹಾರ ಸಂಸ್ಕರಣಾ ಕೈಗಾರಿಕೆ ಖಾತೆಯನ್ನು ಚಿರಾಗ್ ಪಾಸ್ವಾನ್ ಅವರಿಗೆ ನೀಡಲಾಗಿದೆ.

ರಾಮ್ ವಿಲಾಸ್ ಪಾಸ್ವಾನ್ ಪುತ್ರರಾಗಿರುವ ಚಿರಾಗ್ ವಯಸ್ಸು 41. ನಟರಾಗಿರುವ ಚಿರಾಗ್ ಪಾಸ್ವಾನ್, ಮಿಲೇ ನಾ ಮಿಲೇ ಹಮ್ ಸಿನಿಮಾದಲ್ಲಿ ಕಂಗನಾ ರಣಾವತ್ ಜೊತೆ ನಟಿಸಿದ್ದರು. ಚುನಾವಣೆ ಫಲಿತಾಂಶದ ಬಳಿಕ ಮಹಿಳೆಯರ ನೆಚ್ಚಿನ ನಾಯಕರಾಗಿದ್ದಾರೆ.

Latest Videos


ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಚಿರಾಗ್ ಪಾಸ್ವಾನ್ ಅವರಿಗೆ ನೀವು ಸಿನಿಮಾದಲ್ಲಿಯೂ ನಟನೆ ಮಾಡಿದ್ದು, ಗುಡ್‌ ಲುಕ್ಕಿಂಗ್ ಆಗಿಯೂ ಕಾಣಿಸುತ್ತೀರಿ. ಚುನಾವಣೆ ಪ್ರಚಾರದ ವೇಳೆ ಯಾರಾದ್ರೂ ನಿಮಗೆ ಪ್ರಪೋಸ್ ಮಾಡಿದ್ದಾರಾ ಎಂದು ಯುವತಿ ಪ್ರಶ್ನೆ ಮಾಡಿದ್ದರು

ಯುವತಿ ನೀವು ಗುಡ್ ಲುಕ್ಕಿಂಗ್ ಅನ್ನೋತ್ತಲೇ ನಗುತ್ತಲೇ ನಾಚಿಕೊಂಡ ಚಿರಾಗ್ ಪಾಸ್ವಾನ್ ಪ್ರಶ್ನೆ ಉತ್ತರಿಸಿದರು. ಕೇವಲ ಪ್ರಚಾರ ಮಾಡುತ್ತಿರುವಾಗ ಮಾತ್ರನಾ ಎಂದು ಪ್ರಶ್ನೆ ಹಾಕಿದರು. ಇದಕ್ಕೆ ಯುವತಿ ಬೇರೆ ಸನ್ನಿವೇಶದಲ್ಲಿ ಪ್ರಪೋಸ್ ಮಾಡಿದ್ದರೆ ಹೇಳಬಹುದು ಅಂತಾರೆ.

ಜನರು ನನ್ನ ಬಳಿ ಬರಲು ಹೆದರುತ್ತಾರೆ. ಆದ್ರೆ ಯಾಕೆ ಅಂತ ನನಗೂ ಗೊತ್ತಿಲ್ಲ. ನಾನು ಹಾಗೆ ನಡೆದುಕೊಳ್ತೀನಾ ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಆದರೆ ಈ ರೀತಿ ಯಾರು ಪ್ರಪೋಸ್ ಮಾಡಿಲ್ಲ. ನನ್ನ ಜೊತೆ ಈ ರೀತಿ ಆಗಲ್ಲ ಎಂದು ನಗುತ್ತಲೇ ಉತ್ತರಿಸಿದ್ದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಕಂಗನಾ ಜೊತೆಗೆ ನಟಿಸಿದ್ದ ಸಿನಿಮಾದ ತುಣುಕು ತೋರಿಸಲಾಯ್ತು. ಆದ್ರೆ ಈ ಸೀನ್‌ನಲ್ಲಿ ನೀವು ಬ್ಲಶ್ ಮಾಡಿಲ್ಲ ಯಾಕೆ ಎಂದು ನಿರೂಪಕ ಪ್ರಶ್ನೆ ಮಾಡುತ್ತಾರೆ. ಕಂಗನಾ ಜೊತೆಗಿನ ಸಿನಿಮಾವನ್ನು ಜನರು ಒಪ್ಪಿಕೊಳ್ಳಲಿಲ್ಲ. ಈಗ ಇಬ್ಬರು ಜೊತೆಯಾಗಿ ಲೋಕಸಭೆಗೆ ಬರುತ್ತೇವೆ ಎಂದು ಹೇಳಿದ್ದರು.

2014ರಿಂದಲೂ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ್ ಜನಶಕ್ತಿ ಪಕ್ಷ ಐದು ಸ್ಥಾನಗಳಲ್ಲಿ ಗೆದ್ದಿದ್ದು, ಎನ್‌ಡಿಎ ಕೂಟಕ್ಕೆ ಬೆಂಬಲ ಸೂಚಿಸಿ ಕೇಂದ್ರ ಸಚಿವರಾಗಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಿಂದ  ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇಲ್ಲಿಂದಲೇ 10 ಮತ್ತು 12ನೇ ತರಗತಿ ಓದಿದ್ದಾರೆ. ಬಿಟೆಕ್ ಪದವಿಗೆ ಆಡ್ಮಿಷನ್ ಮಾಡಿಸಿದ ಬಳಿಕ ಮೂರನೇ ಸೆಮಿಸ್ಟರ್‌ಗೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ.

ಇಂದು ಚಿರಾಗ್ ಪಾಸ್ವಾನ್ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ನವದೆಹಲಿಯ ಪಂಚಶೀಲ್ ಭವನದಲ್ಲಿ ಸಚಿವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಲಾಯ್ತು ಎಂದು ಚಿರಾಗ್ ಪಾಸ್ವಾನ್ ಹೇಳಿಕೊಂಡಿದ್ದಾರೆ.

click me!