ಕೇರಳದ ಪಾಲಕ್ಕಾಡ್ ಬಳಿ ಷೊರ್ಣೂರಿನಲ್ಲಿ ಭಾರತಪುಳ ನದಿಗೆ ಅಡ್ಡಲಾಗಿ ಒಂದು ರೈಲ್ವೆ ಮೇಲ್ಸೇತುವೆ ಇದೆ. ಈ ಮೇಲ್ಸೇತುವೆಯಲ್ಲಿ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.
ಆಗ ಆ ಮಾರ್ಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು 4 ಗುತ್ತಿಗೆ ಕಾರ್ಮಿಕರ ಮೇಲೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು 3 ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ಅಪಘಾತದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಮೃತ ನಾಲ್ವರು ತಮಿಳುನಾಡಿನವರು ಎಂದು ತಿಳಿದುಬಂದಿದೆ. ಸೇಲಂ ಜಿಲ್ಲೆಯ ವಲ್ಲಿ, ರಾಣಿ, ಲಕ್ಷ್ಮಣನ್ ಎಂದು ತಿಳಿದುಬಂದಿದೆ. ಇನ್ನೊಬ್ಬರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಶಪಡಿಸಿಕೊಂಡ ಮೃತದೇಹಗಳನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಷೊರ್ಣೂರ್ ರೈಲು ನಿಲ್ದಾಣ ದಾಟಿ ಕೊಚ್ಚಿನ್ ಸೇತುವೆಯಲ್ಲಿ ಸಂಜೆ 3.05ಕ್ಕೆ ಈ ಭೀಕರ ಅಪಘಾತ ಸಂಭವಿಸಿದೆ. ರೈಲು ಬರುವುದನ್ನು ನೋಡಿ ಓಡಲು ಯತ್ನಿಸಿದಾಗ, ಅವರ ಮೇಲೆ ರೈಲು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.