ಬೆಂಗಳೂರು: ಹಿಂದೂ ಧರ್ಮವು ಜಗತ್ತಿನ ಅತ್ಯಂತ ಸನಾತನ ಧರ್ಮಗಳಲ್ಲಿ ಒಂದು ಎನಿಸಿದೆ. ಭಾರತ ದೇಶ ಹಿಂದೂ ಧರ್ಮದ ತವರು. ಹಿಂದೂ ಧರ್ಮವು ಜಗತ್ತಿನ ಮೂರನೇ ಅತಿದೊಡ್ಡ ಧರ್ಮ ಎನಿಸಿದ್ದು, ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. 2023ರ ಆಗಸ್ಟ್ ತಿಂಗಳ ವೇಳೆಗೆ ಜಗತ್ತಿನಾದ್ಯಂತ ಅತಿಹೆಚ್ಚು ಹಿಂದೂ ಜನಸಂಖ್ಯೆ ಹೊಂದಿರುವ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿ ಜಾತ್ಯಾತೀತ ರಾಷ್ಟ್ರವಾಗಿದೆ. ಹೀಗಿದ್ದೂ ಭಾರತದಲ್ಲಿ ಬಹುಸಂಖ್ಯಾತರು ಹಿಂದೂಗಳಾಗಿದ್ದಾರೆ. ವಿಶ್ವ ಅಂಕಿ-ಸಂಖ್ಯೆ ವರದಿಯ ಪ್ರಕಾರ, ಭಾರತದಲ್ಲಿ ಸದ್ಯ 114,54,95,335 ಮಂದಿ ಹಿಂದೂಗಳು ವಾಸ ಮಾಡುತ್ತಿದ್ದಾರೆ.
210
2. ನೇಪಾಳ
ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎನಿಸಿಕೊಂಡಿದ್ದ ನೇಪಾಳ, ಇತ್ತೀಚೆಗಷ್ಟೇ ಜಾತ್ಯಾತೀತ ರಾಷ್ಟ್ರವಾಗಿ ಬದಲಾಗಿದೆ. ನೆರೆಯ ನೇಪಾಳದಲ್ಲಿ ಸದ್ಯ 2,42,92,363 ಮಂದಿ ಹಿಂದೂ ಧರ್ಮದವರು ವಾಸಿಸುತ್ತಿದ್ದಾರೆ.
310
3. ಬಾಂಗ್ಲಾದೇಶ
ಒಂದು ಕಾಲದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಭಾಗವೇ ಆಗಿದ್ದ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಹೀಗಿದ್ದೂ ಬಾಂಗ್ಲಾದೇಶದಲ್ಲಿ 1,55,55,771 ಮಂದಿ ಹಿಂದೂಗಳಿದ್ದು, ಗರಿಷ್ಠ ಹಿಂದೂಗಳಿರುವ ರಾಷ್ಟ್ರಗಳ ಪೈಕಿ ಬಾಂಗ್ಲಾದೇಶ ಮೂರನೇ ಸ್ಥಾನ ಪಡೆದಿದೆ.
410
4. ಇಂಡೋನೇಷ್ಯಾ:
ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಮರು ಇರುವ ದೇಶವೆಂದರೆ ಅದು ಇಂಡೋನೇಷ್ಯಾ. ಹೀಗಿದ್ದೂ, ಇಂಡೋನೇಷ್ಯಾದಲ್ಲಿ ಹಿಂದೂಗಳು ಕೂಡಾ ಬದುಕು ಕಟ್ಟಿಕೊಂಡಿದ್ದಾರೆ. ಇಂಡೋನೇಷ್ಯಾದಲ್ಲಿ 48,38,153 ಮಂದಿ ಹಿಂದೂಗಳು ಜೀವನ ಮಾಡುತ್ತಿದ್ದಾರೆ.
510
5. ಪಾಕಿಸ್ತಾನ:
ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲಿ 44,74,034 ಮಂದಿ ಜೀವನ ನಡೆಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ ಪಾಕ್‌ನಲ್ಲಿ ಹಿಂದೂಗಳು ತಮ್ಮ ಬದುಕು ಸಾಗಿಸುತ್ತಿದ್ದಾರೆ.
610
6. ಶ್ರೀಲಂಕಾ:
ದ್ವೀಪರಾಷ್ಟ್ರ ಶ್ರೀಲಂಕಾದಲ್ಲೂ ಹಿಂದೂಗಳ ಸಂಖ್ಯೆ ಕಮ್ಮಿಯೇನಿಲ್ಲ. ಪುಟ್ಟ ರಾಷ್ಟ್ರವಾದರೂ, ಶ್ರೀಲಂಕಾದಲ್ಲಿ 29,58,126 ಮಂದಿ ಹಿಂದೂಗಳು ಜೀವನ ಸಾಗಿಸುತ್ತಿದ್ದಾರೆ. ರಾಮಾಯಣದ ಕಾಲದಿಂದಲೂ ಭಾರತ ಹಾಗೂ ಶ್ರೀಲಂಕಾ ನಡುವೆ ಐತಿಹಾಸಿಕ ಸಂಬಂಧವಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?.
710
7. ಅಮೆರಿಕ ಸಂಯುಕ್ತ ಸಂಸ್ಥಾನ:
ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕದಲ್ಲಿ ಕ್ರಿಶ್ಚಿಯನ್ ಧರ್ಮದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದಾಗ್ಯೂ ಭಾರತದಿಂದ ಅಮೆರಿಕಾಗೆ ವಲಸೆ ಹೋಗಿ ಬದುಕು ಕಟ್ಟಿಕೊಂಡ ಹಿಂದೂಗಳ ಸಂಖ್ಯೆ ದೊಡ್ಡದಿದೆ. ಅಮೆರಿಕದಲ್ಲಿ 20,33,535 ಮಂದಿ ಹಿಂದೂಗಳು ಜೀವನ ನಡೆಸುತ್ತಿದ್ದಾರೆ.
810
8. ಮಲೇಷ್ಯಾ:
2020ರ ಜನಗಣತಿಯ ಪ್ರಕಾರ ಮಲೇಷ್ಯಾದಲ್ಲಿ 63.5% ಮಂದಿ ಮುಸ್ಲಿಮರಿದ್ದು, ಹಿಂದೂಗಳು 4ನೇ ಅತಿದೊಡ್ಡ ಸಂಖ್ಯೆಯ ಧರ್ಮದವರೆನಿಸಿದ್ದಾರೆ. ಮಲೇಷ್ಯಾದಲ್ಲಿ 20,35,006 ಮಂದಿ ಹಿಂದೂಗಳಿದ್ದಾರೆ.
910
9. ಯುನೈಟೆಡ್ ಕಿಂಗ್‌ಡಮ್:
ನೂರಾರು ವರ್ಷಗಳ ಕಾಲ ಭಾರತವನ್ನು ಆಳಿದ್ದ ಇಂಗ್ಲೆಂಡ್‌ನಲ್ಲಿ, ಈಗ ಸುಮಾರು 9 ಲಕ್ಷ ಮಂದಿ ಹಿಂದೂಗಳು ವಾಸವಾಗಿದ್ದಾರೆ. ಸದ್ಯದ ಅಂಕಿ-ಅಂಶಗಳ ಪ್ರಕಾರ 8,99,945 ಮಂದಿ ಹಿಂದೂಗಳು ಇಂಗ್ಲೆಂಡ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ.
1010
10. ಮಯನ್ಮಾರ್:
ಭಾರತ, ಬಾಂಗ್ಲಾದೇಶ, ಚೀನಾ, ಥಾಯ್ಲೆಂಡ್ ಜತೆ ಗಡಿ ಹಂಚಿಕೊಂಡಿರುವ ಮಯನ್ಮಾರ್‌ನಲ್ಲಿ ಸದ್ಯ 8,48,898 ಮಂದಿ ಹಿಂದೂಗಳು ವಾಸವಾಗಿದ್ದಾರೆ. ಈ ಮೂಲಕ ಮಯನ್ಮಾರ್ ಅತಿಹೆಚ್ಚು ಹಿಂದೂಗಳಿರುವ ರಾಷ್ಟ್ರಗಳ ಪೈಕಿ 10ನೇ ಸ್ಥಾನ ಪಡೆದಿದೆ.