ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೇ ಖಂಡಗ್ರಾಸ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ವಿಶೇಷ ಹೋಮಗಳು ನಡೆದವು. ಕೊರೊನಾ ವೈರಸ್ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮಗಳು ನಡೆಸಲಾಯ್ತು.