ಒಂದೇ ವಾರದಲ್ಲಿ ಗಡಿ ಬಳಿ 200 ಟ್ರಕ್, JCB ತಂದಿರಿಸಿದ ಚೀನಾ: ಇಲ್ಲಿವೆ ಫೋಟೋಸ್!

First Published | Jun 21, 2020, 1:37 PM IST

ಕಳೆದೊಂದು ವಾರದೊಳಗೆ ಚೀನಾ ಸೇನೆ 200ಕ್ಕೂ ಅಧಿಕ ಟ್ರಕ್ ಹಾಗೂ ನಾಲ್ಕು ಚಕ್ರದ ವಾಹನ ಮತ್ತು ಅನೇಕ ಉಪಕರಣಗಳನ್ನು LAC ಬಳಿ ತಂದಿರಿಸಿದೆ. ಈ ಬಗ್ಗೆ NDTV  ಸ್ಯಾಟಲೈಟ್‌ ಫೋಟೋಗಳ ಆಧಾರದಲ್ಲಿ ಸುದ್ದಿ ಪ್ರಕಟಿಸಿದ್ದು, 9 ರಿಂದ 16 ಜೂನ್ ಅವಧಿಯಲ್ಲಿ ಯಾವ ರೀತಿ ಚೀನೀ ಸೇನೆ ಗಡಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂಬುವುದನ್ನು ಬಹಿರಂಗಪಡಿಸಿದೆ. ಗಡಿಯಲ್ಲಿ ಚೀನಾದ ಸೇನೆ ಹಾಕಿರುವ ಟೆಂಟ್ ಹೊರತುಪಡಿಸಿ ಮತ್ತೆರಡು ವಿಚಾರಗಳ ಕುರಿತು ಗಮನ ಕೇಂದ್ರೀಕರರಿಸುವುದು ಅತ್ಯಗತ್ಯ. ಈ ಫೋಟೋಗಳಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಸಾಂಭವ್ಯ ಸ್ಥಳವೂ ಕಂಡು ಬಂದಿದ್ದು,  LAC ಬಳಿ ಒಂದು ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ನಡೆಯುತ್ತಿರುವುದು ಸ್ಪಷ್ಟವಾಗಿದೆ.
 

ಇಲ್ಲಿ ಗಲ್ವಾನ್ ಕಣಿವೆ ಹಾಗೂ LAC ಕಂಡು ಬರುತ್ತಿದೆ. ಜೊತೆಗೆ ಗಲ್ವಾನ್ ಹಾಗೂ ಶ್ಯೋಕ್ ನದಿ ಕೂಡಾ ಕಾಣಿಸುತ್ತಿದೆ. ಭಾರತ ಗಲ್ವಾನ್ ನದಿ ಪಶ್ಚಿಮದಲ್ಲಿ ಗಲ್ವಾನ್ ಕಣಿವೆಯನ್ನು ನಿಯಂತ್ರಿಸುತ್ತದೆ. ಈ ಪ್ರದೇಶ ತನ್ನದೆಂದು ಚೀನಾ ಪ್ರತಿಪಾದಿಸಿದ್ದು, ಭಾರತ ಇದು ಸುಳ್ಳೆಂದು ತಿರುಗೇಟು ನೀಡಿದೆ.
undefined
ಸ್ಯಾಟಲೈಟ್ ಮೂಲಕ ಕ್ಲಿಕ್ಕಿಸಲಾದ ಈ ಎರಡೂ ಫೋಟೋಗಳಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳು ಸ್ಪಷ್ಟವಾಗಿ ಕಂಡು ಬಂದಿವೆ. ಮೊದಲ ಫೋಟೋ ಜೂನ್ ಒಂಭತ್ತರಂದು ತೆಗೆದಿದ್ದು, ಇಲ್ಲಿ ಒಂದೂ ವಾಹನ ಕಾಣಿಸುತ್ತಿಲ್ಲ. ಆದರೆ ಜೂನ್ 16 ರಂದು ಸ್ಯಾಟಲೈಟ್‌ನಲ್ಲಿ ತೆಗೆಯಲಾದ ಅದೇ ಪ್ರದೇಶದಲ್ಲಿ 79 ವಾಹನಗಳು ಕಂಡು ಬಂದಿವೆ. ಇದರಲ್ಲಿ ಹೆಚ್ಚಿನವು ಟ್ರಕ್‌ಗಳೇ ಆಗಿವೆ. ಈ ಪ್ರದೇಶ LACಯಿಂದ ಕೇವಲ 1.3 ಕಿ. ಮೀ ದೂರದಲ್ಲಿದೆ.
undefined

Latest Videos


ಈ ಫೋಟೋದಲ್ಲಿ ಚೀನಾ LAC ಬಳಿ 127 ವಾಹನಗಳನ್ನಿರಿಸುವುದು ಕಂಡು ಬರುತ್ತದೆ. ಇದರಲ್ಲಿ ಟ್ರಕ್ ಹೊರತುಪಡಿಸಿ ಕೆಲ ಆಫ್ ರೋಡ್ ವಾಹನಗಳು ಹಾಗೂ ವಿಶಾಲ ಉಪಕರಣಗಳೂ ಕಂಡು ಬಂದಿವೆ. ಆದರೆ ಜೂನ್ 9 ರಂದು ತೆಗೆದ ಫೋಟೋಗಳಲ್ಲಿ LACಯಿಂದ ಸುಮಾರು ಆರು ಕಿ. ಮೀ ದೂರದವರೆಗೆ ಯಾವುದೇ ವಾಹನಗಳಿಲ್ಲ.
undefined
9 ರಿಂದ 19 ಜೂನ್‌ ನಡುವೆ LACಯಿಂದ 6 ಕಿ. ಮೀ ದೂರ ಚೀನಾ ಹಾಕಿದ ಟೆಂಟ್‌ಗಳನ್ನು ತೆಗೆಯಲಾಗಿದ್ದು, ಫೋಟೋಗಳಲ್ಲಿ LACಯಿಂದ 2.9 ಕಿ. ಮೀ ಅಂತರದಲ್ಲಿ ಕೆಲವೇ ಕೆಲವು ಟೆಂಟ್‌ಗಳು ಕಂಡು ಬರುತ್ತವೆ.
undefined
ಜೂನ್ 9ರ ಫೋಟೋದಲ್ಲಿ ಚೀನಾ ಭಾಗದಲ್ಲಿರುವ ಗಲ್ವಾನ್‌ ನದಿ ನೀರು ಯಾವುದೇ ಅಡೆ ತಡೆಯಿಲ್ಲದೆ ಹರಿಯುತ್ತಿದೆ. ಇಲ್ಲಿ ಹಳದಿ ಬಣ್ಣದಲ್ಲಿ ಕಾಣಿಸುತ್ತಿರುವ ಪ್ರದೇಶ ಚೀನಾ ಬದಿಯ ನದಿ ತಟದಲ್ಲಿ ಕಾಮಗಾರಿ ನಡೆಯುತ್ತಿರುವ ಸುಳಿವು ನೀಡುತ್ತಿದೆ.
undefined
ಈ ಫೋಟೋ ಜೂಮ್ ಮಾಡಿದರೆ ಇಲ್ಲಿ ಜೆಸಿಬಿ ಇರುವುದು ಸ್ಪಷ್ಟವಾಗಿದೆ. ಈ ಮೂಲಕ ಗಲ್ವಾನ್ ನದಿ ನೀರು ತಡೆಯುವ ಕಾರ್ಯ ನಡೆಯುತ್ತಿದೆ. ಜೆಸಿಬಿ ಇರುವ ಬದಿಯಲ್ಲಿ ಕಾಣಿಸುತ್ತಿರುವ ಒಣ ಭೂಮಿ ಕಾಣುತ್ತಿದೆಯೋ ಅದು LAC ಯಲ್ಲಿರುವ ಭಾರತದ ಭಾಗವಾಗಿದ್ದು, ವಾಸ್ತವವಾಗಿರುವ ನಿಯಂತ್ರಣ ರೇಖೆಯಿಂದ ಕೆಲವೇ ಅಂತರದಲ್ಲಿದೆ.
undefined
LAC ಬಳಿ ಈ ಪ್ರದೇಶದಲ್ಲೇ ಭಾರತ ಹಾಗೂ ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತೆಂದು ಅಂದಾಜಿಸಲಾಗಿದೆ. ಮೊದಲ ಫೋಟೋ ಜೂನ್ 9ರಂದು ತೆಗೆಯಲಾಗಿದ್ದು, ಎರಡನೇ ಫೋಟೋ ಜೂನ್ 16ರಂದು ತೆಗೆದಿದ್ದಾಗಿದೆ.
undefined
click me!