ದೀಪಾವಳಿ ಪಟಾಕಿಯಿಂದ ನಿಮ್ಮ ಕಾರನ್ನು ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ಸುಲಭ ಟಿಪ್ಸ್!

First Published | Oct 30, 2024, 12:13 PM IST

ದೀಪಾವಳಿ ಹಬ್ಬಕ್ಕೆ ಕೆಲ ರಾಜ್ಯಗಳ ಕೆಲ ನಗರ ಪಟ್ಟಣಗಳಲ್ಲಿ ಪಟಾಕಿಗೆ ನಿಷೇಧ ಹೇರಲಾಗಿದೆ. ಆದರೆ ದೇಶದೆಲ್ಲೆಡೆ ದೀಪಾವಳಿಗೆ ಪಟಾಕಿ ಶಬ್ದ ಕೇಳಿಸದೇ ಇರದು. ಹೀಗೆ ದೀಪಾವಳಿ ಪಟಾಕಿಯಿಂದ ನಿಮ್ಮ ವಾಹನಗಳನ್ನು ಸುರಕ್ಷಿತವಾಗಿಡುವುದು ಹೇಗೆ? ಸರಳ ವಿಧಾನ ಇಲ್ಲಿದೆ.  

ದೀಪಾವಳಿಗೆ ಕಾರ್ ಸೇಫ್ಟಿ ಟಿಪ್ಸ್

ಬೆಳಕಿನ ಹಬ್ಬ ದೀಪಾವಳಿಗೆ ಭಾರತ ಸಜ್ಜಾಗಿದೆ. ದೀಪಾವಳಿಗೆ ಮನೆ ಮನಗಳಲ್ಲಿ ದೀಪ ಬೆಳಗಲಿದೆ. ಇದರ ಜೊತೆಗೆ ಪಟಾಕಿಗಳ ಶಬ್ದು ಕೇಳಿಸಲಿದೆ. ಹಸಿರು ಪಟಾಕಿ ಸೇರಿದಂತೆ ಇತರ ಪರಿಸರ ಪೂರಕ ಪಟಾಕಿಯಾದರೂ ಪಕ್ಕದಲ್ಲಿ ನಿಲ್ಲಿಸಿರುವ ಕಾರು ಸೇರಿದಂತೆ ವಾಹನಗಳಿಗೆ ಅಪಾಯ ತಂದೊಡ್ಡಲಿದೆ. ಹಲೆವೆಡೆ ಪಟಾಕಿ ನಿಷೇಧವಿದೆ. ಆದರೂ ಹೊರಗಡೆ ನಿಲ್ಲಿಸಿರುವ ವಾಹನ ಅಥವಾ ಪಟಾಕಿ ಸಿಡಿಸುವ ಪಕ್ಕದಲ್ಲಿರುವ ವಾಹನಗಳನ್ನು ಪಟಾಕಿಯಿಂದ ಸುರಕ್ಷಿತವಾಗಿಡುವುದು ಹೇಗೆ?  ಇಲ್ಲಿದೆ ಸರಳ ವಿಧಾನಗಳು. 

ದೀಪಾವಳಿ ಸಂಭ್ರಮ

ಆದರೆ, ಪಟಾಕಿ ಸಿಡಿಸುವುದರಿಂದ ಹೊರಗೆ ನಿಲ್ಲಿಸಿರುವ ವಾಹನಗಳಿಗೂ ಅಪಾಯವಿದೆ. ಹೊರಗಡೆ ವಾಹನ ಪಾರ್ಕಿಂಗ್ ಮಾಡುವಾಗ ವಾಹನಗಳಿಗೆ ಕವರ್ ಹಾಕುವುದು ಸಾಮಾನ್ಯ. ಧೂಳು ಸೇರಿದಂತೆ ಇತರ ಸಮಸ್ಯೆಗಳಿಂದ ರಕ್ಷಣೆಗಾಗಿ ಕವರ್ ಹಾಕಿ ಮುಚ್ಚಲಾಗುತ್ತದೆ. ಆದರೆ ದೀಪಾವಳಿ ಸಂದರ್ಭದಲ್ಲೂ ನಿಮ್ಮ ವಾಹನ ಹೊರಭಾಗದಲ್ಲಿ ಪಾರ್ಕ್ ಮಾಡಿದ್ದರೆ, ಈ ರೀತಿ ಕವರ್ ಹಾಕಿ ಮುಚ್ಚಬೇಡಿ. ಪಟಾಕಿ ಸಿಡಿಸುವ ವೇಳೆ ವಾಹನದ ಮೇಲಿನ ಕವರ್‌ಗೆ ಬೇಗವಾಗಿ ಬೆಂಕಿ ಹೊತ್ತಿಕೊಳ್ಳಲಿದೆ. ಸಣ್ಣ ಕಿಡಿ ಹಾರಿದರೂ ಕವರ್ ಬಹುಬೇಗನೆ ಬೆಂಕಿಗೆ ಆಹುತಿಯಾಗಲಿದೆ. ಹೀಗಾಗಿ ದೀಪಾವಳಿ ಸಂದರ್ಭದಲ್ಲಿ ಕಾರಿನ ಕವರ್ ತೆಗೆದು ಬಿಡಿ.   

Tap to resize

ಕಾರ್ ಸೇಫ್ಟಿ ಟಿಪ್ಸ್

ಕವರ್ಡ್ ಪಾರ್ಕಿಂಗ್ ಹೆಚ್ಚು ಸುರಕ್ಷಿತ.  ಪಟಾಕಿ, ಧೂಳು, ಮಳೆಗಳಿಂದ ಮುಚ್ಚಿದ ಜಾಗದ ಪಾರ್ಕಿಂಗ್ ಸುರಕ್ಷಿತ ಆದರೆ ನಗರ ಪ್ರದೇಶದಲ್ಲಿ ಎಲ್ಲರಿಗೂ ಕವರ್ಡ್ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಬಹುತೇಕರು ಮನೆಯ ಮುಂಭಾಗ, ಅಥವಾ ಮನೆಯ ಪಕ್ಕದಲ್ಲಿನ ರಸ್ತೆಯ ಬದಿಗಳಲ್ಲಿ ನಿಲ್ಲಿಸುತ್ತಾರೆ. ದೀಪಾವಳಿ ಸಮಯದಲ್ಲಿ ದಾರಿ ಬದಿ, ಸಾರ್ವಜನಿಕ ಪ್ರದೇಶಗಳಲ್ಲಿ ಕಾರು ಪಾರ್ಕ್ ಮಾಡುವ ಬದಲು ಸುರಕ್ಷಿತ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿ. ಇದರಿಂದ ಕಾರಿನ ಪೇಟಿಂಗ್ ಸೇರಿದಂತೆ ಸುಟ್ಟಗಾಯಗಳಾಗುವುದನ್ನು ತಪ್ಪಿಸಹುದು. ಜೊತೆಗೆ ವಾಹನ ಸುರಕ್ಷಿತವಾಗಿಡಲು ಸಾಧ್ಯವಿದೆ.  

ಕಾರ್ ಟಿಪ್ಸ್

ಪಟಾಕಿ ಕಿಡಿಗಳು ವಾಹನದ ಒಳಗೆ ಪ್ರವೇಶಿಸದಂತೆ ತಡೆಯಲು ಎಲ್ಲಾ ಕಿಟಕಿಗಳು ಮತ್ತು ಸನ್‌ರೂಫ್‌ಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ ಎಂದು ಖಚಿತಪಡಿಸಿಕೊಳ್ಳಿ. ಈ ಸರಳ ಮುನ್ನೆಚ್ಚರಿಕೆಯು ಯಾವುದೇ ತಪ್ಪು ಕಿಡಿಗಳು ಕ್ಯಾಬಿನ್‌ ಪ್ರವೇಶಿಸುವುದನ್ನು ಮತ್ತು ಹಾನಿಯನ್ನುಂಟುಮಾಡುವುದನ್ನು ತಪ್ಪಿಸುತ್ತದೆ. ಸುರಕ್ಷತೆ ದೃಷ್ಟಿಯಿಂದ ಸ್ವಲ್ಪ ಹಣ ಖರ್ಚಾದರೂ ಸುರಕ್ಷಿತವಾಗಿ ಪಾರ್ಕಿಂಗ್ ಮಾಡಿ. ಇದು ಹೆಚ್ಚುವರಿ ರಕ್ಷಣೆ ನೀಡುತ್ತದೆ.  

ದೀಪಾವಳಿ ಕಾರ್ ಸೇಫ್ಟಿ ಟಿಪ್ಸ್

ನಿಮ್ಮ ವಾಹನದಲ್ಲಿ ಸಣ್ಣ ಅಗ್ನಿಶಾಮಕ ಕಿಟ್ ಇಟ್ಟುಕೊಳ್ಳುವುದು ಉತ್ತಮ ಸುರಕ್ಷತಾ ಕ್ರಮವಾಗಿದೆ. ಪ್ರಮುಖವಾಗಿ ಪ್ರಯಾಣಿಸುವ ಸಂದರ್ಭ ಕಾರಿನೊಳಗೆ ಕಿಡಿ ತೂರಿಬಂದರೆ,  ತುರ್ತು ಪರಿಸ್ಥಿತಿಯಲ್ಲಿ, ಪಟಾಕಿ ಅಥವಾ ಸಣ್ಣ ಕಿಡಿಗಳನ್ನು ತ್ವರಿತವಾಗಿ ನಿಯಂತ್ರಿಸಬಹುದು. ಅಗ್ನಿಶಾಮಕವು ಸುಲಭವಾಗಿ ತಲುಪಬಹುದಾದ ದೂರದಲ್ಲಿರುವುದನ್ನು ಮತ್ತು ಅದನ್ನು ಹೇಗೆ ಬಳಸಬೇಕೆಂದು ನಿಮಗೆ ತಿಳಿದಿದೆ ಎಂದು ಖಚಿತಪಡಿಸಿಕೊಳ್ಳಿ.

Latest Videos

click me!