1 ಸಾವಿರ ಟನ್ ಚಿನ್ನ ಹೂತಿಟ್ಟ ಕನಸು ಬಿದ್ದಿದ್ದ ಶೋಭನ್ ಸರ್ಕಾರ್ ನಿಧನ!
First Published | May 13, 2020, 2:44 PM ISTಸಾಧು ಶೋಭನ್ ಸರ್ಕಾರ್ ಇಂದು ಬುಧವಾರ ಸಾವನ್ನಪ್ಪಿದ್ದಾರೆ. ಇವರ ನಿಧನದಿಂದ ಭಕ್ತರಲ್ಲಿ ಶೋಕ ಮಡುಗಟ್ಟಿದೆ. ಶಿವಲಿ ಕ್ಷೇತ್ರದ ಬೈರಿಯಲ್ಲಿರುವ ಅವರ ಆಶ್ರಮದಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಆಶ್ರಮದತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಸಾಧುಗೆ ಬಿದ್ದಿದ್ದ ಚಿನ್ನದ ನಿಧಿ ಕನಸಿನ ಆಧಾರದ ಮೇರೆಗೆ ಪುರಾತತ್ವ ಇಲಾಖೆ ಉನ್ನಾವ್‌ನ ಖೇಡಾದಲ್ಲಿ ಶೋಧ ಕಾರ್ಯ ನಡೆಸಿತ್ತೆಂಬುವುದು ಉಲ್ಲೇಖನೀಯ. ಶೋಭನ್ ಸರ್ಕಾರ್, ಫತೇಪುರ್‌ನ ರೀವಾ ನರೇಶ್ ಕೋಟೆಯಲ್ಲಿ ಶಿವ ಸ್ಮಾರಕದ ಬಳಿ ಒಂದು ಸಾವಿರ ಟನ್ ಚಿನ್ನ ಇದೆ ಎಂಬ ಕನಸು ಬಿದ್ದಿರುವುದಾಗಿ ಹೇಳಿದ್ದರು.