ಪತಿ ಶವದೊಂದಿಗೆ ಸ್ವದೇಶಕ್ಕೆ ಮರಳಿದ ಪತ್ನಿ, ಆಡಿದ ಮಾತು ತರಿಸಿತು ಕಂಬನಿ!

First Published May 11, 2020, 4:49 PM IST

ವಂದೇ ಭಾರತ್ ಮಿಷನ್‌ನಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ನಾಗರಿಕರನ್ನು ಭಾರತಕ್ಕೆ ಮರಳಿ ಕರೆತರಲಾಗುತ್ತಿದೆ. ಈ ಆಪರೇಷನ್‌ನಡಿ ಶುಕ್ರವಾರ ಯುಎಇಯಿಂದ ಎರಡು ವಿಮಾಗಳು ಚೆನ್ನೈಗೆ ಆಗಮಿಸಿವೆ. ಇದರಲ್ಲಿ ಓರ್ವ ಮಹಿಳೆ ತನ್ನ ಗಂಡನ ಶವದೊಂದಿಗೆ ಭಾರತಕ್ಕೆ ಪ್ರಯಾಣಿಸಿದ್ದಾರೆ. ಈ ವಿಮಾನದಲ್ಲಿ ತಮ್ಮ ನೌಕರಿ ಕಳೆದುಕೊಂಡು ಕಂಗಾಲಾಗಿ ಮರಳಿದವರೂ ಇದ್ದರು.

ಈ ಮಿಷನ್‌ನಡಿ ಮೋದಿ ಸರ್ಕಾರ ಅಮೆರಿಕ, ಯುಎಇ, ಬ್ರಿಟನ್, ಬಾಂಗ್ಲಾದೇಶ, ಕುವೈತ್ ಸೇರಿದಂತೆ ಅನೇಕ ದೇಶಗಳಿಂದ 64 ವಿಮಾನಗಳಲ್ಲಿ ಸುಮಾರು ಹದಿನಾಲ್ಕು ಸಾವಿರ ನಾಗರಿಕರನ್ನು ಮರಳಿ ಕರೆ ತರುತ್ತಿದೆ.
undefined
ಏರ್‌ ಇಂಡಿಯಾದ ವಿಮಾನ ಐಎಕ್ಸ್‌ 540ನಲ್ಲಿ 29 ವರ್ಷದ ಕೋಲ್ಲಮ್ಮಲ್ ಕೂಡಾ ಇದ್ದರು. ಹೀಗಿರುವಾಗ ಅವರ ಗಂಡ ಎಲ್‌ ಎಂ ಕುಮಾರ್ ಶವ ಕಾರ್ಗೋದಲ್ಲಿತ್ತು. ಕುಮಾರ್ ಆರ್‌ಎಕೆ ಕ್ರೆಮಿಕ್ಸ್‌ನಲ್ಲಿ ಸೀನಿಯರ್ ಕ್ವಾಲಿಟಿ ಕಂಟ್ರೋಲ್ ಅಧಿಕಾರಿಯಾಗಿದ್ದರು. ಆದರೆ ಏಪ್ರಿಲ್ 13 ರಂದು ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು.
undefined
ನನ್ನ ಪತಿ ಯಾವತ್ತಿನಂತೆ ಉಪಾಹಾರ ಸೇವಿಸಿ ಆಫೀಸ್‌ಗೆ ತೆರಳಿದ್ದರು. ಆದರೆ ಬೆಳಗ್ಗೆ ಸುಮಾರು 10 ಗಂಟೆಗೆ ಕೆಲವರು ನನ್ನ ಗಂಡ ಆಸ್ಪತ್ರೆಯಲ್ಲಿದ್ದಾರೆಂದು ತಿಳಿಸಿದರು. ನಾನು ಆಸ್ಪತ್ರೆಗೆ ತೆರಳಿದರೂ ನನಗೆ ಒಳಗೆ ಹೋಗುವ ಅವಕಾಶ ಸಿಗಲಿಲ್ಲ. ಸಂಜೆಯಾಗುತ್ತಿದ್ದಂತೆ ಅವರು ಮೃತಪಟ್ಟಿದ್ದಾರೆಂದು ಹೇಳಿದರು ಎಂದಿದ್ದಾರೆ.
undefined
ಮೂರು ವರ್ಷದ ಹಿಂದೆ ಆಗಿತ್ತು ವಿವಾಹ:ಕೋಲ್ಲಮಲ್ ಹಾಗೂ ಕುಮಾರ್ ವಿವಾಹ ಮೂರು ವರ್ಷದ ಹಿಂದೆ ನಡೆದಿತ್ತು. ಕೋಲ್ಲಮ್ಮಲ್ ಕಳೆದ ಎರಡು ವರ್ಷಗಳಿಂದ ತನ್ನ ಗಂಡನೊಂದಿಗೆ ಇದ್ದಳು. ಆಕೆಗೆ ಕುಮಾರ್‌ ಸರ್ವಸ್ವವಾಗಿದ್ದರು. ಗಂಡ ಆಕೆಯನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುತ್ತಿದ್ದರೆನ್ನಲಾಗಿದೆ. ನನ್ನ ಗಂಡನನ್ನು ಮನೆಗೆ ಕರೆದೊಯ್ಯುವ ಸಲುವಾಗೇ ನಾನು ಇನ್ನೂ ಜೀವವಿದ್ದೇನೆ ಎಂಬುವುದು ಪತ್ನಿಯ ಮಾತು.
undefined
ತಾನ್ಯಾವತ್ತೂ ಏಕಾಂಗಿಯಾಗಿ ಪ್ರಯಾಣಿಸಿಲ್ಲ ಎಂದಿರುವ ಕೋಲ್ಲಮಲ್, ಈಗ ಕುಮಾರ್ ನನ್ನನ್ನು ಏಕಾಂಗಿಯಾಗಿ ಬಿಟ್ಟು ಹಹೋಗಿದ್ದಾರೆ ಎಂದಿದ್ದಾರೆ. ಇದೇ ಮೊದಲ ಬಾರಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದೇನೆ ಎಂದಿದ್ದಾರೆ.
undefined
ಮುನ್ನೂರು ಮಂದಿ ವಾಪಾಸ್:ಅವರನ್ನು ಒರತುಪಡಿಸಿ ವಿಮಾನದಲ್ಲಿ 200 ಕಾರ್ಮಿಕರು, 37 ಗರ್ಭಿಣಿಯರು ಹಾಗೂ ಕೆಲ ಮಕ್ಕಳು ಮತ್ತು 42ಮಂದಿ ಇನ್ನಿತರ ಆರೋಗ್ಯ ಸಮಸ್ಯೆ ಇದ್ದವರು ದುಬೈನಿಂದ ಚೆನ್ನೈಗೆ ಆಗಮಿಸಿದ್ದಾರೆ. ಎರಡೂ ವಿಮಾನಗಳಲ್ಲಿ ಒಟ್ಟು 300 ಮಂದು ಸ್ವದೇಶಕ್ಕೆ ಆಗಮಿಸಿದ್ದಾರೆ.
undefined
ಹೊಸ ಅತಿಥಿ ನಿರೀಕ್ಷೆಯಲ್ಲಿ ವಸುದೇವನ್ ಹಾಗೂ ಮೀನಾಗೆ: ಒಂದೆಡೆ ಕೊಲ್ಲಮಲ್ ದುಃಖದ ಕತೆಯಾದರೆ ಮತ್ತೊಂದೆಡೆ ಇದೇ ವಿಮಾನದಲ್ಲಿ ಪ್ರಯಾಣಿಸಿದ ವಸುದೇವನ್ ಹಾಗೂ ಮೀನಾ ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದಾರೆ.
undefined
click me!