Seven year boy assault mosque ಗಾಯಕ್ವಾಡ್ ಹವೇಲಿ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 23 ವರ್ಷದ ಯುವಕನೊಬ್ಬ ಧಾರ್ಮಿಕ ಸ್ಥಳವನ್ನೇ ತನ್ನ ಕಾಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾನೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡುಕ ಹುಟ್ಟಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಜಮಾಲ್‌ಪುರದ ಗಾಯಕ್ವಾಡ್ ಹವೇಲಿ ಪ್ರದೇಶದಲ್ಲಿ, 23 ವರ್ಷದ ಯುವಕನೊಬ್ಬ ಪ್ರಾರ್ಥನೆ ಕಲಿಸುವ ನೆಪದಲ್ಲಿ ಏಳು ವರ್ಷದ ಬಾಲಕನ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ಧಾರ್ಮಿಕ ಸ್ಥಳವನ್ನೇ ದುರುಪಯೋಗ ಮಾಡಿಕೊಂಡ ಈ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
24
ಆರೋಪಿ ನೋಮನ್ ಶೇಖ್
ಆರೋಪಿ ನೋಮನ್ ಶೇಖ್ (23) ಎಂದು ಗುರುತಿಸಲಾಗಿದ್ದು, ಪ್ರಾರ್ಥನೆ ಕಲಿಸುವುದಾಗಿ ಭರವಸೆ ನೀಡಿ ಬಾಲಕನನ್ನು ಮಸೀದಿಯ ಛಾವಣಿಗೆ ಕರೆದೊಯ್ದು ಹೇಯ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಧ್ಯಾಹ್ನ ಸುಮಾರು 1:37ರ ವೇಳೆಗೆ ಬಾಲಕನನ್ನು ಛಾವಣಿಗೆ ಕರೆದುಕೊಂಡು ಹೋಗಿ, 15–20 ನಿಮಿಷಗಳ ಬಳಿಕ ಕೆಳಗೆ ಇಳಿದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ.
34
ಹದಗೆಟ್ಟ ಮಗುವಿನ ಸ್ಥಿತಿ
ಘಟನೆಯ ಬಳಿಕ ಮನೆಗೆ ಹಿಂದಿರುಗಿದ ಬಾಲಕ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ. ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ ಎಂದು ತಿಳಿದುಬಂದಿದೆ.
44
ಪ್ರಕರಣ ದಾಖಲು
ಮಗುವಿನ ಹೇಳಿಕೆಯ ಆಧಾರದ ಮೇಲೆ ಗಾಯಕ್ವಾಡ್ ಹವೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಸೀದಿಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಆರೋಪಿಯ ಚಲನವಲನಗಳು ಸ್ಪಷ್ಟವಾಗಿವೆ ಎಂದು ಪೊಲೀಸ್ ಅಧಿಕಾರಿ ಚಿರಾಗ್ ಗೋಸಾಯಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿ ನೋಮನ್ ಶೇಖ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ಈ ಹಿಂದೆ ಹಲ್ಲೆ ಪ್ರಕರಣವೂ ದಾಖಲಾಗಿತ್ತು ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ